Oscars 2023: ನಾಟು ನಾಟು ಹಾಡಿಗೆ ಮತ್ತೊಂದು ಗರಿ, ಆಸ್ಕರ್ ವೇದಿಕೆಯಲ್ಲಿ ಪ್ರದರ್ಶನ
ಜಿಮ್ಮಿ ಕಿಮ್ಮೆಲ್ ನಡೆಸಿಕೊಡುವ 95ನೇ ಆಸ್ಕರ್ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಮಾರ್ಚ್ 13 ರಂದು ಬೆಳಗ್ಗೆ ಭಾರತದಲ್ಲಿ ನೇರ ಪ್ರಸಾರವಾಗಲಿದೆ.
ನವದೆಹಲಿ, ಮಾರ್ಚ್. 01: ಭಾರತೀಯ ಚಿತ್ರರಂಗಕ್ಕೆ ಆರ್‌ಆರ್‌ಆರ್ ಚಿತ್ರ ಮತ್ತೊಂದು ಕಿರೀಟವಿಟ್ಟಿದೆ. ಎಸ್ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಗೀತೆ ಆಸ್ಕರ್ 2023 ವೇದಿಕೆಯಲ್ಲಿ ಪ್ರದರ್ಶವಾಗಲಿದೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವರಿಂದ ಲೈವ್ ಆಗಿ ಪ್ರದರ್ಶನ ನೀಡಲಿದ್ದಾರೆ.
Rahul Sipligunj and Kaala Bhairava. “Naatu Naatu." LIVE at the 95th Oscars.
— The Academy (@TheAcademy) February 28, 2023
Tune into ABC to watch the Oscars LIVE on Sunday, March 12th at 8e/5p! #Oscars95 pic.twitter.com/8FC7gJQbJs
ತೆಲುಗು ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಕಿಚ್ಚೆಬ್ಬಿಸುವ ನೃತ್ಯದಿಂದಾಗಿ ಜಾಗತಿಕ ವಿದ್ಯಮಾನವಾಗಿ ಮಾರ್ಪಟ್ಟಿರುವ ಈ ಹಾಡನ್ನು ಎಂಎಂ ಕೀರವಾಣಿ ಸಂಯೋಜಿಸಿದ್ದಾರೆ. ಚಂದ್ರಬೋಸ್ ಗೀತ ರಚನೆ ಮಾಡಿದ್ದು, ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಆಸ್ಲರ್‌ನ ಅತ್ಯುತ್ತಮ ಮೂಲ ಗೀತೆಯ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಜಿಮ್ಮಿ ಕಿಮ್ಮೆಲ್ ನಡೆಸಿಕೊಡುವ 95ನೇ ಆಸ್ಕರ್ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ. ಮಾರ್ಚ್ 13 ರಂದು ಬೆಳಗ್ಗೆ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಆಸ್ಕರ್ ವೇದಿಕೆಯಲ್ಲಿ ಹಾಡನ್ನು ಪ್ರದರ್ಶಿಸಲು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ಹಾಡನ್ನು ಹಿಂದಿಯಲ್ಲಿ ನಾಚೋ ನಾಚೋ, ತಮಿಳಿನಲ್ಲಿ ನಾಟ್ಟು ಕೂತು, ಕನ್ನಡದಲ್ಲಿ ಹಳ್ಳಿ ನಾಟು ಮತ್ತು ಮಲಯಾಳಂನಲ್ಲಿ ಕರಿಂತೋಲ್ ಎಂದು ಬಿಡುಗಡೆ ಮಾಡಲಾಗಿದೆ. ಇದರ ಹಿಂದಿ ಆವೃತ್ತಿಯನ್ನು ರಾಹುಲ್ ಸಿಪ್ಲಿಗುಂಜ್ ಮತ್ತು ವಿಶಾಲ್ ಮಿಶ್ರಾ ಹಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಆಕ್ರಮಣ ನಡೆಯುವ ಕೆಲವು ತಿಂಗಳ ಮೊದಲು ಇದನ್ನು ಕೈವ್‌ನಲ್ಲಿರುವ ಮಾರಿನ್ಸ್ಕಿ ಅರಮನೆಯಲ್ಲಿ (ಉಕ್ರೇನ್ ಅಧ್ಯಕ್ಷೀಯ ಅರಮನೆ) ಚಿತ್ರೀಕರಿಸಲಾಯಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಪ್ರದರ್ಶಿಸಿದ ಹುಕ್ ಸ್ಟೆಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಾಟು ನಾಟು ವೈರಲ್ ಸೆನ್ಸೇಷನ್ ಆಗಿ ಮಾರ್ಪಟ್ಟಿದೆ. ಈ ಹಾಡು ಯೂಟ್ಯೂಬ್‌ನಲ್ಲಿ 122 ಮಿಲಿಯನ್ ವೀಕ್ಷಣೆ ಗಳಿಸಿದೆ.
ಆಸ್ಕರ್‌ಗೆ ಪ್ರವೇಶಿಸುವ ಮೊದಲು ನಾಟು ನಾಟು ಈಗಾಗಲೇ ಕೆಲವು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದೆ. ಜನವರಿಯಲ್ಲಿ, ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ಸ್ ಅನ್ನು ಗೆದ್ದುಕೊಂಡಿತು. ಜೊತೆಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನ 28 ನೇ ಆವೃತ್ತಿಯಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರದೊಂದಿಗೆ ಅತ್ಯುತ್ತಮ ಗೀತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಆಸ್ಕರ್ ವೇದಿಕೆಯಲ್ಲಿ ಈ ಹಾಡಿನೊಂದಿಗೆ ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ ಚಿತ್ರದ ದಿಸ್ ಈಸ್ ಎ ಲೈಫ್ ಫ್ರಮ್, ಟೆಲ್ ಇಟ್ ಲೈಕ್ ಎ ವುಮನ್‌ನಿಂದ ಅಪ್ಲಾಸ್ ಮತ್ತು ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್‌ನಿಂದ ಲಿಫ್ಟ್ ಮಿ ಅಪ್ ಹಾಡುಗಳು ಪ್ರದರ್ಶನವಾಗಲಿವೆ.












Click it and Unblock the Notifications