ಆರ್ಕುಟ್‌ ಖಾತೆ ಇನ್ನೊಮ್ಮೆ ಪರಿಶೀಲಿಸಿಕೊಳ್ಳಿ

ವಾಷಿಂಗ್ಟನ್‌: ಅ. 2 : ನಿಮ್ಮ 'ಆರ್ಕುಟ್‌' ಖಾತೆಯಲ್ಲಿ ಯಾವುದಾದರೂ ಅತಿಮುಖ್ಯ ಮಾಹಿತಿಯಿದ್ದರೆ ಕೂಡಲೇ ಅದನ್ನು ಹಿಂದಕ್ಕೆ ಪಡೆದುಕೊಳ್ಳಿ. ಯಾಕೆಂದರೆ ಆರ್ಕುಟ್‌ ಈಗ ಅಧಿಕೃತವಾಗಿ ಬಾಗಿಲು ಹಾಕಿದೆ.

ಆದರೆ ಗೂಗಲ್‌ ಆರ್ಕುಟ್‌ ಬಳಕೆದಾರರಿಗೆ ತಮ್ಮ ಖಾತೆಯಲ್ಲಿರುವ ಪ್ರೋಫೈಲ್‌, ಪ್ರಮಾಣ ಪತ್ರಗಳು ಮತ್ತಿತರ ಮಾಹಿತಿಯನ್ನು ಬೇರೆಡೆ ವರ್ಗಾಯಿಸಲು 2016ರ ಸಪ್ಟೆಂಬರ್‌ವರೆಗೆ ಅವಕಾಶ ನೀಡಿದೆ. ಹಾಗಾಗಿ ನೀವು ಹಂಚಿಕೊಂಡಿದ್ದ ಚಿತ್ರಗಳು ಅಥವಾ ಯಾವುದೇ ಅತಿಮುಖ್ಯ ಮಾಹಿತಿಯಿದ್ದರೆ ಕೂಡಲೇ ಹಿಂದಕ್ಕೆ ಪಡೆದುಕೊಳ್ಳುವುದು ಒಳಿತು.[ಅತಿ ಹೆಚ್ಚು ಬಳಕೆಯ ಅಪ್ಲಿಕೇಶನ್‌ ಯಾವುದು ಗೊತ್ತೆ?]

orkcut

ಆರ್ಕುಟ್‌ನಲ್ಲಿ ತಮ್ಮ ಖಾತೆಯನ್ನು ಹೊಂದಿರುವ ಬಳಕೆದಾರರು ಗೂಗಲ್ ಟೇಕ್‌ಔಟ್ ಅನ್ನು ಬಳಸಿಕೊಂಡು, ತಮ್ಮ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಆದರೆ ಹೊಸ ಬಳಕೆದಾರರಿಗೆ ಯಾವುದೇ ಖಾತೆಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಆರ್ಕುಟ್‌ನ ಆಲ್ಬಮ್ ಎಕ್ಸ್‌ಪೋರ್ಟ್ ಪೇಜ್ ಅನ್ನು ಬಳಸಿಕೊಂಡು ಆಲ್ಬಮ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ.[ಆರ್ಕುಟ್‌ಗೆ ಇಂದು ಅಂತಿಮ ವಿದಾಯ]

ಸಪ್ಟೆಂಬರ್‌ 30 ರಂದೇ ಆರ್ಕುಟ್‌ ಮುಚ್ಚಲಾಗುವುದು ಎಂದು ಗೂಗಲ್‌ ಹಿಂದೆಯೇ ತಿಳಿಸಿತ್ತು. ಭಾರತದಲ್ಲಿ ಅತ್ಯಂತ ಜನಪ್ರಿಯತೆ ಉತ್ತುಂಗಕ್ಕೆ ಏರಿದ ಸಾಮಾಜಿಕ ಜಾಲತಾಣ ಎಂದು ಒಂದು ಕಾಲದಲ್ಲಿ ಹೆಸರು ಪಡೆದುಕೊಂಡಿದ್ದ ಆರ್ಕುಟ್‌ ಈಗ ಅಧಿಕೃತವಾಗಿ ಬಾಗಿಲು ಹಾಕಿದೆ. [Facebook ಬಗ್ಗೆ ಎರಡು ವಿಚಿತ್ರ ಸುದ್ದಿಗಳು]

ಫೇಸ್‌ಬುಕ್‌ನ ಜನಪ್ರಿಯತೆ, ಅದರ ಡಿಸೈನ್ ಮತ್ತಿತರ ಅಂಶಗಳು ಆರ್ಕುಟ್‌ಗೆ ಹೊಡೆತ ನೀಡಿದವು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+