ಚುನಾವಣಾ ಸಮೀಕ್ಷೆ : ಕೇರಳದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 1 ಸ್ಥಾನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 02 : ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ. 86 ಸ್ಥಾನಗಳನ್ನು ಪಡೆಯುವ ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಅಧಿಕಾರಕ್ಕೆ ಬರಲಿದೆ ಎನ್ನುತ್ತಿದೆ ವರದಿ.

140 ಸ್ಥಾನಗಳನ್ನು ಹೊಂದಿರುವ ಕೇರಳ ವಿಧಾನಸಭೆಗೆ ಮೇ 16ರಂದು ಚುನಾವಣೆ ನಡೆಯಲಿದೆ. ಟೈಮ್ಸ್ ನೌ ಮತ್ತು ಸಿ ವೋಟರ್ ಜಂಟಿಯಾಗಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಕೇರಳದಲ್ಲಿರುವ ಅಧಿಕಾರದಲ್ಲಿರುವ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) 53 ಸ್ಥಾನದಲ್ಲಿ ಜಯಗಳಿಸಬಹುದು ಎಂದು ವರದಿ ಹೇಳಿದೆ. [ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ]

kerala

ಈಗಾಗಲೇ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಮಾರ್ಚ್ ತಿಂಗಳಿನಲ್ಲಿ ಟೈಮ್ಸ್ ನೌ ಮತ್ತು ಸಿ ವೋಟರ್ ಜಂಟಿಯಾಗಿ ಸಮೀಕ್ಷೆ ನಡೆಸಿವೆ. ಎಲ್‌ಡಿಎಫ್ ಮತಗಳಿಕೆ ಪ್ರಮಾಣ 0.2ರಿಂದ 43.6ರಷ್ಟು ಹೆಚ್ಚಾಗಲಿದೆ. [ಸಿವೋಟರ್ ಸಮೀಕ್ಷೆ, ತಮಿಳುನಾಡಿನಲ್ಲಿ ಮತ್ತೆ 'ಅಮ್ಮ' ದರ್ಬಾರ್]

ರಾಜ್ಯದಲ್ಲಿ ಅಧಿಕಾರದಲ್ಲಿರುವ ಯುಡಿಎಫ್ ಮತಗಳಿಕೆ ಪ್ರಮಾಣ ಇಳಿಕೆಯಾಗಲಿದೆ. 2011ರಲ್ಲಿ 45.8 ರಷ್ಟು ಮತ ಪಡೆದಿದ್ದು ಯುಡಿಎಫ್ 2016ರಲ್ಲಿ 41.3ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಬಿಜೆಪಿ ಮತ್ತು ಭಾರತ್‌ ಧರ್ಮ ಜನ ಸೇನಾ (ಬಿಡಿಜೆಎಸ್‌) ಮೈತ್ರಿಕೂಟದ ಮತಗಳಿಕೆ 6.1ರಿಂದ 10ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. [ಪಂಚರಾಜ್ಯಗಳ ಚುನಾವಣೆ: ಹೊರಬಿದ್ದ ಮತ್ತೊಂದು ಸಮೀಕ್ಷೆ]

ಬಿಜೆಪಿ ಮೈತ್ರಿಕೂಟ ವಿಧಾನಸಭೆ ಚುನಾವಣೆಯಲ್ಲಿ ಕೇವಲ 1 ಸ್ಥಾನದಲ್ಲಿ ಜಯಗಳಿಸಲಿದೆ. ತಿರುವಂತಪುರಂನಲ್ಲಿನ ನೀಮೊಮ್ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿಯ ರಾಜಗೋಪಾಲ್ ಅವರು ಮಾತ್ರ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Left Democratic Front (LDF) is expected to return to power in Kerala in the May 16 assembly elections by winning 86 of the 140 seats, said a pre-poll surveu conducted by news channel Times Now and C-Voter. BJP-alliance may win just one seat in the assembly.
Please Wait while comments are loading...