ಕಿಸ್ ಆಫ್ ಲವ್ ಕೇಸಲ್ಲಿ ಟ್ವಿಸ್ಟ್ : ಇದಕ್ಕೆಲ್ಲ ಆತನೇ ಕಾರಣ!

ಕೊಚ್ಚಿ, ನವೆಂಬರ್, 26: ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿರುವ ಕೇರಳದ ಜೋಡಿಗಳ ಪ್ರಕರಣ ದಿನವೊಂದಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೆಂಡತಿ ಇದೀಗ ನೇರವಾಗಿ ಗಂಡನ ಮೇಲೆ ಆರೋಪ ಮಾಡಿದ್ದು ಆತನೇ ತನ್ನನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಎಂದು ಆರೋಪಿಸಿದ್ದಾಳೆ.

ಕಿಸ್ ಆಫ್ ಲವ್ ಅಭಿಯಾನದ ರೂವಾರಿಗಳಾದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ನಾಯರ್ ಪ್ರಕರಣ ಇಡೀ ದಕ್ಷಿಣ ಭಾರತವನ್ನೇ ಬೆಚ್ಚಿಸಿತ್ತು. ಈಗ ಕೇರಳದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ ರೇಶ್ಮಿಯನ್ನು ಆಕೆಯ ಗಂಡ ರಾಹುಲ್ ಬಲವಂತವಾಗಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ ಎಂದು ಹೇಳಿವೆ.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ]

kerala

ಆಪರೇಶನ್ ಬಿಗ್ ಡ್ಯಾಡಿ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಿಡುಂಬಸಿರಿಯ ಯುವ ಜೋಡಿ ಸೇರಿದಂತೆ ಎಂಟು ಜೊಡಿ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದರು. ಕೇರಳವನ್ನು ನಡುಗಿಸಿದ್ದ ಗ್ಯಾಂಗ್ ಸ್ಟರ್ ಕಾಸರಗೋಡು ನಿವಾಸಿ ಅಕ್ಬರ್ ನನ್ನು ಸಹ ಪೊಲೀಸರು ಬಂಧನ ಮಾಡಿದ್ದರು.[ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?]

ಕರ್ನಾಟಕದ ಜೈಲಿನಲ್ಲಿದ್ದ ಮಾಡೆಲ್ ವೊಬ್ಬಳನ್ನು ಬಿಡಿಸಲು ಅಪ್ಪನ ದುಡ್ಡನ್ನೇ ರಾಹುಲ್ ಅಪಹರಿಸಿದ್ದ ಎಂಬುದು ಸುದ್ದಿಯಾಗಿತ್ತು. ಫೆಸ್ ಬುಕ್ ಪೇಜ್ ಬಳಕೆ ಮಾಡಿಕೊಂಡು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದವರನ್ನು ಕೇರಳದ ಪೊಲೀಸರು ಟ್ರಾಪ್ ಮಾಡಿ ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+