ಟೊಮೇಟೊ ಬೆಲೆಯಿಂದ ಹೈರಾಣದ ಜನಕ್ಕೆ ಸೆಪ್ಟೆಂಬರ್‌ನಲ್ಲಿ ಕಣ್ಣೀರು ತರಿಸಲಿದೆ ಈರುಳ್ಳಿ ಬೆಲೆ!

ನವದೆಹಲಿ, ಆಗಸ್ಟ್. 05: ಈಗಾಗಲೇ ಕಳೆದೆರಡು ತಿಂಗಳಿನಿಂದ ಟೊಮೇಟೋ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಕೆಂಪು ಸುಂದರಿಯ ಹತ್ತಿರ ಹೋಗಲು ಹೆದರುತ್ತಿರುವವರಿಗೆ ಮುಂದಿನ ತಿಂಗಳಿಂದ ಈರುಳ್ಳಿ ಕೂಡ ಕಣ್ಣೀರು ತರಿಸಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಪ್ರಾರಂಭವಾಗುವ ಸಾಧ್ಯತೆಯಿದೆ.

ಮುಂದಿನ ತಿಂಗಳು ಸರಬರಾಜು ಮತ್ತು ಪೂರೈಕೆಯಲ್ಲಿನ ಅಸಮತೋಲನದಿಂದ ಪ್ರತಿ ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿಗೆ ಏರುವ ಸಾಧ್ಯತೆಯಿದೆ ಎಂದು ಆಗಸ್ಟ್ 4 ರಂದು ವರದಿಯೊಂದು ತಿಳಿಸಿದೆ. ಆದರೂ, ಬೆಲೆಗಳು 2020 ರಲ್ಲಿ ಏರಿಕೆಯಾಗಿದ್ದಕ್ಕಿಂತ ಕಡಿಮೆ ಇರಲಿದೆ ಎಂದು ತಿಳಿಸಿದೆ.

Onion prices likely to hit rs 60-70 per kg in September

"ಸರಬರಾಜು ಮತ್ತು ಬೇಡಿಕೆ ಅಸಮತೋಲನದಿಂದಾಗಿ ಆಗಸ್ಟ್ ಅಂತ್ಯದ ವೇಳೆಗೆ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ನಮ್ಮ ಅಂದಾಜಿನ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ಆರಂಭದಿಂದ ಬೆಲೆಗಳು ಗಮನಾರ್ಹ ಏರಿಕೆಯನ್ನು ತೋರಿಸುತ್ತಿವೆ. ಕಡಿಮೆ ಎಂದರೆ ಪ್ರತಿ ಕೆಜಿಗೆ 60 ರಿಂದ 70 ರೂಪಾಯಿಗೆ ತಲುಪುತ್ತದೆ. ಆದರೂ ಲೆಗಳು 2020 ರ ಗರಿಷ್ಠಕ್ಕಿಂತ ಕಡಿಮೆ ಇರುತ್ತದೆ" ಎಂದು ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್‌ನ ವರದಿ ತಿಳಿಸಿದೆ.

ರಾಬಿ ಈರುಳ್ಳಿಯ ಜೀವಿತಾವಧಿಯು 1 ರಿಂದ 2 ತಿಂಗಳುಗಳವರೆಗೆ ಕಡಿಮೆಯಾದ ಕಾರಣ ಮತ್ತು ಈ ವರ್ಷದ ಫೆಬ್ರವರಿ, ಮಾರ್ಚ್‌ನಲ್ಲಿ ಪ್ಯಾನಿಕ್ ಮಾರಾಟದಿಂದಾಗಿ, ಮುಕ್ತ ಮಾರುಕಟ್ಟೆಯಲ್ಲಿ ರಬಿ ಸ್ಟಾಕ್‌ಗಳು ಸೆಪ್ಟೆಂಬರ್‌ನ ಬದಲಿಗೆ 15-20 ದಿನಗಳ ಮುಂಚೆ ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಗಮನಾರ್ಹವಾಗಿ ಕುಸಿಯುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕ ಸರಬರಾಜು ಮಾಡಲು ಸಾಧ್ಯವಾಗದೇ ಹೆಚ್ಚಿನ ಬೆಲೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದಿದೆ.

Onion prices likely to hit rs 60-70 per kg in September

ಅಕ್ಟೋಬರ್‌ನಿಂದ ಖಾರಿಫ್ ಆಗಮನದ ನಂತರ ಈರುಳ್ಳಿ ಪೂರೈಕೆಯು ಕಡಿಮೆಯಾಗುತ್ತದೆ, ಇದು ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ. ಹಬ್ಬದ ತಿಂಗಳುಗಳಲ್ಲಿ (ಅಕ್ಟೋಬರ್ ಮತ್ತು ಡಿಸೆಂಬರ್) ಬೆಲೆ ಚಲನೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಈ ವರ್ಷದ ಜನವರಿ - ಮೇ ಅವಧಿಯಲ್ಲಿ, ಈರುಳ್ಳಿ ಬೆಲೆಯ ಕುಸಿತವು ಗಣನೀಯವಾಗಿ ದುಬಾರಿ ಧಾನ್ಯಗಳು, ಬೇಳೆಕಾಳುಗಳು ಮತ್ತು ಇತರ ತರಕಾರಿಗಳನ್ನು ಕೊಳ್ಳಲು ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಸ್ವಲ್ಪ ನೆಮ್ಮದಿ ನೀಡಿತ್ತು. ಆದರೆ, ಇದು ಖಾರಿಫ್ ಹಂಗಾಮಿನ ಈರುಳ್ಳಿ ರೈತರಲ್ಲಿ ಸಂಕಷ್ಟಕ್ಕೆ ಕಾರಣವಾಗಿದೆ.

"ಪರಿಣಾಮವಾಗಿ, ಈ ವರ್ಷ ಈರುಳ್ಳಿ ಬೆಲೆ 8% ರಷ್ಟು ಕುಸಿಯುತ್ತದೆ ಮತ್ತು ಈರುಳ್ಳಿಯ ಖಾರಿಫ್ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ 5% ಕುಸಿಯುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ವಾರ್ಷಿಕ ಉತ್ಪಾದನೆಯು 29 ಮಿಲಿಯನ್ ಟನ್‌ಗಳಷ್ಟು (MMT) ನಿರೀಕ್ಷಿಸಲಾಗಿದೆ. ಕಳೆದ ಐದು ವರ್ಷಗಳು (2018-2022) ಹೊಲಿಸಲಿದರೇ ಅದು ಸರಾಸರಿಗಿಂತ 7% ಹೆಚ್ಚಾಗಿದೆ" ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+