ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಕೊರೊನಾ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ
ನವದೆಹಲಿ, ಫೆಬ್ರವರಿ 07: ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ದೊರೆತಿದೆ.
ಭಾರತದ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಸ್ಪುಟ್ನಿಕ್ ಲೈಟ್ ಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಕೊರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಶನಿವಾರದಂದು ವಿಷಯ ತಜ್ಞರ ಸಮಿತಿ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಡಿಸಿಜಿಐ ಗೆ ಶಿಫಾರಸು ಮಾಡಿತ್ತು.

ಬೇರೆ ಲಸಿಕೆಗಳನ್ನು ಈ ಮೊದಲು ಪಡೆದಿದ್ದವರಿಗೆ ಸ್ಪುಟ್ನಿಕ ಲಸಿಕೆಯನ್ನು ಬೂಸ್ಟರ್ ಆಗಿ ಕೊಡುವ ಸಾಧ್ಯತೆಯ ಬಗ್ಗೆ ಪರೀಕ್ಷೆ ನಡೆಸಲು ಡಾಕ್ಟರ್ ರೆಡ್ಡಿಸ್ ಅನುಮತಿ ಕೋರಿತ್ತು. ಭಾರತದಲ್ಲಿ ಉತ್ಪಾದನೆಯಾದ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಯಾವುದೇ ನಿರ್ಬಂಧಗಳು ಇಲ್ಲ. ರಫ್ತ ಸಾಧ್ಯತೆಯನ್ನೂ ಡಾಕ್ಟರ್ ರೆಡ್ಡಿಸ್ ಲ್ಯಾಬೊರೇಟರಿಸ್ ಮುಕ್ತವಾಗಿ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಪ್ರಮುಖ ಔಷಧ ತಯಾರಿಕಾ ಸಂಸ್ಥೆ ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಆಗಿ ನೀಡಲು ಅನುಮತಿಸಬೇಕೆಂದು ಔಷಧ ನಿಯಂತ್ರಿಕರಿಗೆ ಪ್ರಸ್ತಾವ ಸಲ್ಲಿಸಿತ್ತು.
ಲಸಿಕೆ ಉತ್ಪಾದನೆಗಾಗಿ ಡಾಕ್ಟರ್ ರೆಡ್ಡಿಸ್ ಕಂಪನಿಯು ರಷ್ಯಾದ ಸ್ಪುಟ್ನಿಕ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಸೆಪ್ಟೆಂಬರ್ 2020ರಿಂದ ರಷ್ಯಾದ ಅನುದಾನದೊಂದಿಗೆ ಸ್ಪುಟ್ನಿಕ್ ಲಸಿಕೆಯ ಟ್ರಯಲ್ಗಳು ನಡೆಯುತ್ತಿದ್ದವು.
ಸ್ಪುಟ್ನಿಕ್ ಉತ್ಪಾದನೆಗೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ. ಭಾರತ ಸರ್ಕಾರ ಕೇಳಿರುವ ಎಲ್ಲ ಮಾಹಿತಿ ಒದಗಿಸಿದ್ದೇವೆ. ಕೊರೊನಾ ನಿರೋಧಕ ಲಸಿಕೆಯಾಗಿ ಸ್ಪುಟ್ನಿಕ್ ಲೈಟ್ ಮತ್ತು ಬೂಸ್ಟರ್ ಲಸಿಕೆಯಾಗಿ ಸ್ಪುಟ್ನಿಕ್-V ನೀಡಲು ಅನುಮತಿ ಕೋರುತ್ತಿದ್ದೇವೆ' ಎಂದು ಡಾಕ್ಟರ್ ರೆಡ್ಡಿಸ್ ಕಂಪನಿಯ ಸಿಇಒ ಎರೆಸ್ ಇಸ್ರೇಲಿ ಹೇಳಿದ್ದರು.
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಈಗಾಗಲೇ ಹಲವು ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ರೂಪಾಂತರಿಗಳ ವಿರುದ್ಧ ಸಮರ್ಥವಾಗಿ ಹೋರಾಡಲು ರಷ್ಯಾದ ಮತ್ತೊಂದು ಲಸಿಕೆಗೆ ಡಿಸಿಜಿಐ ಶಿಫಾರಸ್ಸು ಮಾಡಿದೆ.
ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದು ಡೋಸ್ ಅನ್ನು ಪಡೆದುಕೊಳ್ಳುವುದಕ್ಕೆ ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರದ ವಿಷಯ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿತ್ತು.
ಈ ಹಿಂದೆ ಕೊವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಮೊದಲ ಡೋಸ್ ಮೂರು ತಿಂಗಳಲ್ಲಿ ವೈರಸ್‌ನ ಡೆಲ್ಟಾ ರೂಪಾಂತರದ ವಿರುದ್ಧ ಶೇ.70ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡಲಿದೆ. ಸ್ಪುಟ್ನಿಕ್ ಲೈಟ್ ಲಸಿಕೆ 60 ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆ ಮಾನವ ಅಡೆನೊವೈರಸ್ ಸೆರೊಟೈಪ್ 26 ಅನ್ನು ಆಧರಿಸಿದೆ. ಕೊರೊನಾವೈರಸ್ ವಿರುದ್ಧ ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ ಸ್ಪುಟ್ನಿಕ್-ವಿ ಆಗಿದೆ. ಇಂದು ಜಗತ್ತಿನ 70 ರಾಷ್ಟ್ರಗಳಲ್ಲಿ ಕೊವಿಡ್-19 ವಿರುದ್ಧ ಸ್ಪುಟ್ನಿಕ್-ವಿ ಲಸಿಕೆಯನ್ನು ಬಳಸುವುದಕ್ಕೆ ಅನುಮತಿ ನೀಡಲಾಗಿದೆ. ಒಂದು ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು 15ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತಗೊಳಿಸಲಾಗಿದ್ದು, ಇನ್ನೂ 30 ದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಸ್ಪುಟ್ನಿಕ್ ಲೈಟ್ ಇತರ ಲಸಿಕೆಗಳಿಗೆ ಸಾರ್ವತ್ರಿಕ ಬೂಸ್ಟರ್ ಆಗಿದೆ. ಅರ್ಜೆಂಟೀನಾ ಮತ್ತು ಇತರ ದೇಶಗಳಲ್ಲಿನ ನಡೆಸಿದ ವೈದ್ಯಕೀಯ ಅಧ್ಯಯನಗಳಲ್ಲಿ ಧನಾತ್ಮಕ ಮಾಹಿತಿ ಗೊತ್ತಾಗಿದೆ. ಇತರೆ ಉತ್ಪಾದಕ ಲಸಿಕೆಗಳಿಗೆ ಸ್ಪುಟ್ನಿಕ್ ಲೈಟ್ ಲಸಿಕೆಯು ಬೂಸ್ಟರ್ ಶಾಟ್ ಆಗಿ ಕೆಲಸ ಮಾಡುತ್ತದೆ. ಬೂಸ್ಟರ್ ಲಸಿಕೆಯಾಗಿ ಕೂಡಾ ಸ್ಪುಟ್ನಿಕ್ ಲೈಟ್ ಹೆಚ್ಚಿನ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವ ಕೆಲಸ ಮಾಡುತ್ತದೆ.












Click it and Unblock the Notifications