ಪ್ರತಿ ಐವತ್ತು ಕಿಲೋಮೀಟರ್ ಗೆ ಒಂದರಂತೆ ಪಾಸ್ ಪೋರ್ಟ್ ಕೇಂದ್ರ
ಕೋಲ್ಕತ್ತಾ, ಜುಲೈ 15: ಪ್ರತಿ ಐವತ್ತು ಕಿಲೋಮೀಟರ್ ವ್ಯಾಪ್ತಿಗೆ ಒಂದರಂತೆ ಪಾಸ್ ಪೋರ್ಟ್ ಕೇಂದ್ರಗಳನ್ನು ಆರಂಭಿಸುವ ವಿಚಾರವಾಗಿ ಸರಕಾರ ಚಿಂತನೆ ನಡೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಶನಿವಾರ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪಾಸ್ ಪೋರ್ಟ್ ಒಂದು ಹಕ್ಕು. ಅದು ಕೊಡುಗೆಯಲ್ಲ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ದೃಷ್ಟಿಕೋನದಲ್ಲಿ ಪಾಸ್ ಪೋರ್ಟ್ ಅನುಕೂಲ ಜನಸಾಮಾನ್ಯರನ್ನೂ ತಲುಪಬೇಕು. ಭವಿಷ್ಯದಲ್ಲಿ ಪ್ರತಿ ಐವತ್ತು ಕಿಲೋಮೀಟರ್ ಗೆ ಒಂದರಂತೆ ಪಾಸ್ ಪೋರ್ಟ್ ಕೇಂದ್ರ ಆರಂಭವಾಗಲಿದೆ ಎಂದು ಹೇಳಿದರು.
ಈ ಹಿಂದೆ ಊಹೆ ಕೂಡ ಮಾಡಲು ಸಾಧ್ಯವಿಲ್ಲದಂಥ ಸ್ಥಳಗಳಲ್ಲಿ ಭವಿಷ್ಯದಲ್ಲಿ ಪಾಸ್ ಪೋರ್ಟ್ ಕೇಂದ್ರಗಳು ಆರಂಭವಾಗಲಿವೆ. ಒಂದೂವರೆ ವರ್ಷದ ಹಿಂದೆಯೇ ಯೋಜನೆ ಆರಂಭವಾಗಿದೆ. ಇದೀಗ ವೇಗ ಪಡೆದುಕೊಂಡಿದೆ. ಈ ಹಿಂದೆ ಪಾಸ್ ಪೋರ್ಟ್ ಮಾಡಿಸಲು ತಿಂಗಳಾನುಗಟ್ಟಲೆ ಸಮಯ ಹಿಡಿಯುತ್ತಿತ್ತು. ಇನ್ನು ಮುಂದೆ ಇಷ್ಟು ವೇಳೆ ಆಗುವುದಿಲ್ಲ ಎಂದಿದ್ದಾರೆ.












Click it and Unblock the Notifications