ಟ್ರಾಲ್ ನಲ್ಲಿ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಶ್ರೀನಗರ(ಜಮ್ಮು-ಕಾಶ್ಮೀರ), ಜುಲೈ 15: ಜಮ್ಮು ಕಾಶ್ಮೀರದಲ್ಲಿ ಇಂದು (ಜುಲೈ 15) ಬೆಳಗ್ಗೆಯಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂರನೇ ಉಗ್ರನನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಜಮ್ಮು ಕಾಶ್ಮೀರದ ಟ್ರಾಲ್ ಪ್ರದೇಶದ ಸಟೋರಾ ಎಂಬಲ್ಲಿ ಇಂದು ಬೆಳಗ್ಗೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಕೊಂದುಹಾಕಿತ್ತು. ನಂತರ ಇಲ್ಲಿನ ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದ ಮತ್ತಷ್ಟು ಭಯೋತ್ಪಾದಕರನ್ನೂ ಹತ್ಯೆಗೈಯಲು ಸೇನೆ ಕಾರ್ಯಾಚರಣೆಯನ್ನು ಮುಂದುವರಿಸಿತ್ತು.

ಇದೀಗ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದ್ದು, ಆತನಿಂದ ಕೆಲ ಶಸ್ತ್ರಾಸ್ತ್ರಗಳಳನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಭಯೋತ್ಪಾದಕ ಗುಹೆಯೊಳಗೇ ಅಡಗಿ ಕುಳಿತಿದ್ದಾನೆಂಬ ಮಾಹಿತಿ ದೊರೆತಿದೆ. ಹತರಾದ ಮೂವರು ಉಗ್ರರೂ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರೆಂಬುದು ಇನ್ನೂ ತಿಳಿದುಬಂದಿಲ್ಲ.












Click it and Unblock the Notifications