ಚಳಿಯೋ ಚಳಿ: ದೇಶದ 10 ತಂಪಾದ ನಗರಳಿವು
ನವದೆಹಲಿ, ಜನವರಿ 29: ದಿನದಿಂದ ದಿನಕ್ಕೆ ಹೋದಂತೆ ಉಷ್ಣಾಂಶ ಕ್ಷೀಣಿಸುತ್ತಿದೆ. ಹಿಮಾಲಯ ಪರ್ವತದ ಕಡೆಯಿಂದ ಹಿಮಾವೃತವಾದ ತಂಪಾದ ಗಾಳಿಯು ವಾಯುವ್ಯ ಭಾರತದತ್ತ ಬೀಸುತ್ತಿದೆ.
ಇಡೀ ಭಾರತದಲ್ಲೇ ಚಂಡೀಗಢದಲ್ಲಿ ಅತಿ ಕಡಿಮೆ ಅಂದರೆ 1.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಬುಧವಾರದ ಅತಿ ಕನಿಷ್ಠ ಉಷ್ಣಾಂಶವಿರುವ ನಗರಗಳನ್ನು ಗಮನಿಸಿದರೆ ಚಂಡೀಗಢದಲ್ಲಿ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಉತ್ತರ ಪ್ರದೇಶ ಹೊರತುಪಡಿಸಿ ಪಂಜಾಬ್, ಮಧ್ಯಪ್ರದೇಶದ ನಗರಗಳು ಕೂಡ ಇದರಿಂದ ಹೊರತಾಗಿಲ್ಲ. ಇನ್ನು ಕರ್ನಾಟಕದಲ್ಲಿ ವಿಜಯಪುರದಲ್ಲಿ ಅತಿ ಕನಿಷ್ಠ ಉಷ್ಣಾಂಶ ಅಂದರೆ 12.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

-ಚಂಡೀಗಢದಲ್ಲಿ 1.0 ಡಿಗ್ರಿ ಸೆಲ್ಸಿಯಸ್
-ಹಿಸಾರ್-ಹರಿಯಾಣ-4.1 ಡಿಗ್ರಿ ಸೆಲ್ಸಿಯಸ್
-ನಾರ್‌ನೌಲ್-ಹರಿಯಾಣ-4.5 ಡಿಗ್ರಿ ಸೆಲ್ಸಿಯಸ್
-ಸೀಕರ್-ರಾಜಸ್ಥಾನ-4.5 ಡಿಗ್ರಿ ಸೆಲ್ಸಿಯಸ್
-ಚುರು- ರಾಜಸ್ಥಾನ-5.0 ಡಿಗ್ರಿ ಸೆಲ್ಸಿಯಸ್
-ರೋಟಕ್-ಹರಿಯಾಣ-6.2 ಡಿಗ್ರಿ ಸೆಲ್ಸಿಯಸ್
-ಪಿಲಾನಿ-ರಾಜಸ್ಥಾನ-6.3 ಡಿಗ್ರಿ ಸೆಲ್ಸಿಯಸ್
-ನಲಿಯಾ-ಗುಜರಾತ್-6.5 ಡಿಗ್ರಿ ಸೆಲ್ಸಿಯಸ್
-ಕರ್ನಾಲ್-ಹರಿಯಾಣ-7.0 ಡಿಗ್ರಿ ಸೆಲ್ಸಿಯಸ್
-ಉದಯಪುರ-ರಾಜಸ್ಥಾನ-7.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications