ಇದೊಂದು ದಿನವಾದರೂ ಮೀಸೆ ತಿರುವಿಕೊಂಡು ಓಡಾಡಿ!
ಬೆಂಗಳೂರು, ನವೆಂಬರ್. 18: ಪುರುಷರೇ,, ನಿಮಗೂ ಒಂದು ದಿನವಿದೆ. ನವೆಂಬರ್ 19 ನಿಮ್ಮ ದಿನ ನಿಮ್ಮ ದಿನಾಚರಣೆ. ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದೊಂದು ದಿನವಾದರೂ ಮುಂದೆ ಬನ್ನಿ..
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ನವೆಂಬರ್ 19ನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೈಕ್ ನಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದಾರೆ.
ಬೆಳ್ಳಂದೂರು ಕೆರೆ ಸಮೀಪದ ಇಕೋಸ್ಪೇಸ್ ಪಾರ್ಕ್ ಬಳಿ ನವೆಂಬರ್ 19 ರಂದು ಮಧ್ಯಾಹ್ನ 12 ಗಂಟೆಗೆ ಬೈಕ್ ಜಾಥಾ ಆರಂಭವಾಗಲಿದೆ. ಮಾರತ್ ಹಳ್ಳಿ, ಕೆಆರ್ ಪುರ, ಹೂಡಿ, ಐಟಿಪಿಎಲ್ ಮೂಲಕ ಸಂಚರಿಸಿ ಗ್ಯಾಪೈಟ್ ಇಂಡಿಯಾ ಬಳಿ ಕೊನೆಗೊಳ್ಳಲಿದೆ.[ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಯುಷಿಗಳು ಏಕೆ?]

ಹಾಗಾದರೆ ಪುರುಷರ ದಿನದ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಲೇಬೇಕಾಗಿದೆ. ಅದೆಲ್ಲದರ ಮೇಲೆ ಒಂದು ನೋಟ ನಿಮಗಾಗಿ..
ಪುರಷರ ದಿನಾಚರಣೆ ಪ್ರಮುಖ ಅಂಶಗಳು
* ಕುಟುಂಬ ನ್ಯಾಯಾಲಯದದ ವಿಚಾರಣೆಗಳಲ್ಲಿ ಪುರುಷನೇ ಟಾರ್ಗೆಟ್ ಆಗಿದ್ದಾನೆ.
* ವಿಚ್ಛೇದನ ಸಂದರ್ಭ ಶೇ. 90 ರಷ್ಟು ಪುರುಷರು ತಮ್ಮ ಮಕ್ಕಳಿಂದ ದೂರವಾಗುತ್ತಿದ್ದಾರೆ.[ಪುರುಷರ ಮೆದುಳೇ ಬೇರೆ ಮಹಿಳೆಯ ಮೆದುಳು ಬೇರೆ]
* ಪುರುಷರ ಆತ್ಮಹತ್ಯೆ ತಡೆಗೆ ಸರ್ಕಾರ ಮತ್ತು ಕಾನೂನಿನಲ್ಲಿ ಯಾವುದೇ ಸ್ಪಷ್ಟ ಉಲ್ಲೇಖಗಳಿಲ್ಲ.
* ಮಹಿಳೆಯೊಬ್ಬಳು ಸುಳ್ಳು ಆರೋಪ ಮಾಡಿದರೂ ಪುರುಷ ಸಮಾಜದ ಹೀಗಳಿಕೆಗೆ ಒಳಗೊಳ್ಳಬೇಕಾಗುತ್ತಿದೆ.
* ಪ್ರತಿದಿನ ಸಮಾಜದಲ್ಲಿ ಪುರುಷ ಅಭದ್ರತೆ ಎದುರಿಸುತ್ತಿದ್ದಾನೆ.
* ಕೆಲವೊಮ್ಮೆ ಪುರುಷ ಮಾಡುವ ತ್ಯಾಗಗಳು ಆತನ ಕರ್ತವ್ಯ ಎಂಬ ರೀತಿಯಲ್ಲಿ ಪರಿಗಣನೆಗೆ ಒಳಪಡುತ್ತಿವೆ.
* ಪುರುಷರ ಮೇಲಿನ ದೌರ್ಜನ್ಯ ತಡೆಗೆ ಯಾವುದೇ ಸಮರ್ಪಕ ಕಾನೂನುಗಳಿಲ್ಲ
* ಪುರುಷ ಆತನಿಗೆ ಸಂಬಂಧಿಸಿದ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ, ಪರಿಹಾರವೂ ಸಿಗದೇ ಒದ್ದಾಡುವ ಸ್ಥಿತಿಯಲ್ಲಿ ಇದ್ದಾನೆ.
ಇದೆಲ್ಲದರ ಬಗ್ಗೆ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿದ್ದು ಇದೊಂದು ದಿನವಾದರೂ ಪುರುಷ ಪರವಾಗಿ ಮಾತನಾಡುವ ಅವಕಾಶ ಲಭ್ಯವಾಗಿದೆ.












Click it and Unblock the Notifications