21 ಗಂಟೆ ಚರ್ಮ ಮತ್ತು ಪ್ಲಾಸ್ಟಿಕ್‌ನಲ್ಲಿ 8 ದಿನಕ್ಕಿಂತ ಹೆಚ್ಚು ಬದುಕುಳಿಯುವ ಓಮಿಕ್ರಾನ್: ಅಧ್ಯಯನ
ನವದೆಹಲಿ ಜನವರಿ 26: ಇಡೀ ದೇಶವನ್ನೇ ಹಿಂಡಿ ಹಿಪ್ಪೆಯಾಗಿಸಿದ ಕೊರೊನಾ ಇನ್ನೇನು ಅಳಿವಿನಂಚಿನಲ್ಲಿದೆ ಅನ್ನುವಷ್ಟರಲ್ಲಿ ಓಮಿಕ್ರಾನ್ ರೂಪಾಂತರಿ ಒಕ್ಕರಿಸಿದೆ. ಈ ಓಮಿಕ್ರಾನ್ ವೇಗವಾಗಿ ಹರಡುವಂತದ್ದಾಗಿದ್ದು ಸೌಮ್ಯ ಲಕ್ಷಣವನ್ನು ಹೊಂದಿದೆ ಎನ್ನುವ ವಿಚಾರ ಈಗಾಗಲೇ ತಿಳಿದಿರುವಂತದ್ದು. ಆದರೆ ಅಧ್ಯನವೊಂದು ಓಮಿಕ್ರಾನ್ ವೈರಸ್ ಎಷ್ಟು ಸಮಯ ಬದುಕಿರುತ್ತದೆ ಎನ್ನುವ ಬಗ್ಗೆ ತಿಳಿಸಿದೆ. ಅಧ್ಯಯನದ ಪ್ರಕಾರ ಓಮಿಕ್ರಾನ್ 21 ಗಂಟೆಗಳ ಕಾಲ ಚರ್ಮದ ಮೇಲೆ ಬದುಕುಳಿಯುತ್ತದೆ. ಜೊತೆಗೆ ಪ್ಲಾಸ್ಟಿಕ್‌ನ ಮೇಲೆ 8 ದಿನಗಳಿಗಿಂತ ಹೆಚ್ಚು ಜೀವಂತವಾಗಿರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಇದರ ಜೀವಿತಾವಧಿ ಹೆಚ್ಚಾಗಿರುವುದರಿಂದ ಇದು ಇತರ ತಳಿಗಳಿಗೆ ಹೋಲಿಸಿದರೆ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತದೆ.
ಜಪಾನ್‌ನ ಕ್ಯೋಟೋ ಪ್ರಿಫೆಕ್ಚುರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ವುಹಾನ್‌ನಲ್ಲಿ ಹುಟ್ಟಿಕೊಂಡ SARS-CoV-2 ತಳಿ ಮತ್ತು ಎಲ್ಲಾ ರೂಪಾಂತರಗಳ (VOCs) ನಡುವಿನ ವೈರಲ್ ಪರಿಸರ ಸ್ಥಿರತೆಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದ್ದಾರೆ. ಪ್ರಿಪ್ರಿಂಟ್ ರೆಪೊಸಿಟರಿ BioRxiv ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಎಟ್-ಟು-ಬಿ ಪೀರ್-ರಿವ್ಯೂಡ್ ಅಧ್ಯಯನವು (yet-to-be peer-reviewed study), ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಮೂಲ ಸ್ಟ್ರೈನ್‌ಗಿಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವಿಕೆಯನ್ನು ಪ್ರದರ್ಶಿಸಿವೆ ಎಂದು ಕಂಡುಹಿಡಿದಿದೆ. "ವೈರಸ್ ಹೆಚ್ಚು ಕಾಲ ಬದುಕುಳಿಯುವುದು ಮತ್ತು ಅವುಗಳ ಹರಡುವಿಕೆಗೆ ಅವಕಾಶ ಕಲ್ಪಿಸುತ್ತದೆ" ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.
"VOC ಗಳಲ್ಲಿ Omicron ಅತ್ಯಧಿಕ ಸ್ಥಿರತೆಯನ್ನು ಹೊಂದಿದೆ ಎಂದು ಈ ಅಧ್ಯಯನವು ಹೇಳುತ್ತದೆ. ಇದು ಡೆಲ್ಟಾ ರೂಪಾಂತರವನ್ನು ಬದಲಿಸಲು ಮತ್ತು ವೇಗವಾಗಿ ಹರಡಲು ಸಹಾಯ ಮಾಡುವ ಅಂಶಗಳಲ್ಲಿ ಒಂದಾಗಿರಬಹುದು" ಎಂದು ಅಧ್ಯಯನ ಹೇಳುತ್ತದೆ.

ಓಮಿಕ್ರಾನ್ ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ 193.5 ಗಂಟೆಗಳ ಕಾಲ ಬದುಕಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ. ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ, ಮೂಲ ಸ್ಟ್ರೈನ್ ಮತ್ತು ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ಸರಾಸರಿ ಬದುಕುಳಿಯುವ ಸಮಯಗಳು ಕ್ರಮವಾಗಿ 56 ಗಂಟೆಗಳು, 191.3 ಗಂಟೆಗಳು, 156.6 ಗಂಟೆಗಳು, 59.3 ಗಂಟೆಗಳು ಮತ್ತು 114 ಗಂಟೆಗಳು ಎಂದು ಅಧ್ಯಯನವು ತೋರಿಸುತ್ತದೆ.
ಚರ್ಮದ ಮಾದರಿಗಳಲ್ಲಿ ಆಲ್ಫಾ 19.6 ಗಂಟೆಗಳು, ಬೀಟಾ 19.1 ಗಂಟೆಗಳು, ಗಾಮಾ 11 ಗಂಟೆಗಳು, ಡೆಲ್ಟಾ 16.8 ಗಂಟೆಗಳು ಮತ್ತು ಓಮಿಕ್ರಾನ್ 21.1 ಗಂಟೆಗಳು ಎಂದು ಅವರು ಹೇಳಿದರು. ಆಲ್ಫಾ ಮತ್ತು ಬೀಟಾ ರೂಪಾಂತರಗಳ ನಡುವೆ ಬದುಕುಳಿಯುವ ಸಮಯಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಅವುಗಳು ಒಂದೇ ರೀತಿಯ ಪರಿಸರ ಸ್ಥಿರತೆಯನ್ನು ಹೊಂದಿವೆ. ಇದು ಹಿಂದಿನ ಅಧ್ಯಯನಗಳ ಫಲಿತಾಂಶಗಳೊಂದಿಗೆ ಸ್ಥಿರವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಹೆಚ್ಚಿನ ಸಮಯ ಚರ್ಮ ಹಾಗೂ ಪ್ಲಾಸ್ಟಿಕ್ ಮೇಲೆ ಜೀವಂತವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ ಎಂದು ಸಂಶೋಧಕರು ಸೇರಿಸಿದ್ದಾರೆ. ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಸೋಂಕಿತ ರೋಗಿಗಳ ಸಂಖ್ಯೆಯಿಂದಾಗಿ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಸ್ತುತ ಹಲವಾರು ಅಧ್ಯಯನಗಳು ನಡೆಯುತ್ತಿವೆ.
Recommended Video
ದೇಶಾದ್ಯಂತ ಓಮಿಕ್ರಾನ್ ಹಾಗೂ ಕೊರೊನಾ ಸೋಂಕುಗಳು ಹೆಚ್ಚಾಗುತ್ತಿದ್ದು ಪ್ರತಿನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಆತಂಕಕಾರಿ ವಿಚಾರ ಅಂದರೆ ಸದ್ಯ ದಾಖಲಾಗಿರುವ ಕೊರೊನಾ ಪ್ರಕರಣಗಳಿಗಿಂತ ಸೋಂಕುಗಳ ಸಂಖ್ಯೆ ಇನ್ನೂ ಹೆಚ್ಚಾಗಿದ್ದು ಓಮಿಕ್ರಾನ್ ಪ್ರಕರಣಗಳು ಕೂಡ ನೈಜ ಸಂಖ್ಯೆಗಿಂತ 90 ಪಟ್ಟು ಹೆಚ್ಚಿರಬಹುದು ಎಂದು ಕೋವಿಡ್‌ನ ಸರ್ಕಾರದ ಉನ್ನತ ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾರೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications