OLD Monk, Royal Challenge ಸೇರಿ ಈ ಜನಪ್ರಿಯ ಮದ್ಯ ಮಾರಾಟಕ್ಕೆ ನಿಷೇಧ! ಮದ್ಯಪ್ರಿಯರಿಗೆ ಭಾರೀ ಶಾಕ್!, ಕಾರಣವೇನು

OLD Monk, Royal Challenge: ಕೆಲವು ಪ್ರಮುಖ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕೆ ನಿರ್ಧರಿಸಲಾಗಿದೆ. ಭಾರತದಲ್ಲಿ ಇನ್ಮುಂದೆ ಪ್ರಮುಖ ಮದ್ಯ ಬ್ರ್ಯಾಂಡ್‌ಗಳು ಸಿಗುವುದಿಲ್ಲ. ಕೃತಕ ಸುವಾಸನೆ ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಡಿಯಾಜಿಯೋ ಮತ್ತು ಇನ್‌ಬ್ರೂ ಕಂಪನಿಯ ಕೆಲವು ಮದ್ಯಗಳ ಮಾರಾಟವನ್ನು ನಿಷೇಧಿಸುವಂತೆ FSSAI ಆದೇಶ ಮಾಡಿದೆ. ಭಾರತದಲ್ಲಿ ಕೆಲವು ಮದ್ಯಗಳಲ್ಲಿ ಸಮರ್ಪಕವಾಗಿ ಪಕ್ವಗೊಳಿಸುವ ಬದಲು ಕೃತಕ ಸುವಾಸನೆ ಬಳಸುತ್ತಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಡಿಯಾಜಿಯೋ ಇಂಡಿಯಾ ಮತ್ತು ಇನ್‌ಬ್ರೂ ಕಂಪನಿಯ ಕೆಲವು ಜನಪ್ರಿಯ ವಿಸ್ಕಿ ಹಾಗೂ ರಮ್‌ಗಳ ಮಾರಾಟವನ್ನು ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಷೇಧಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಸಹ ಮಾಡಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಭಾರತವು ವಿಶ್ವದ ಅತಿದೊಡ್ಡ ಆಲ್ಕೋಹಾಲ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮದ್ಯ ಮಾರಾಟದಿಂದಲೇ ವಾರ್ಷಿಕವಾಗಿ ಸುಮಾರು ₹3.5 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಡಯಾಜಿಯೊ ದೇಶದ ಅತಿದೊಡ್ಡ ಆಲ್ಕೋಹಾಲ್ ಕಂಪನಿಯಾಗಿದ್ದು, ಅದರ ಜನಪ್ರಿಯ ಬ್ರ್ಯಾಂಡ್‌ಗಳು ಪೆರ್ನೋಡ್ ರಿಕಾರ್ಡ್‌ನಂತಹ ದೊಡ್ಡ ಮಟ್ಟದ ಬ್ರ್ಯಾಂಡ್‌ಗಳೊಂದಿಗೆ ಸ್ಪರ್ಧಿಸುತ್ತವೆ.

OLD Monk

ಇನ್ನು ನಿಷೇಧಕ್ಕೆ ಒಳಗಾದ ಈ ದೇಶೀಯ ಮದ್ಯಗಳು, ಆಮದು ಮಾಡಿದ ರಮ್ , ವಿಸ್ಕಿ ಮತ್ತು ಸ್ಕಾಚ್‌ಗಿಂತ ಕಡಿಮೆ ಬೆಲೆಗೆ ಸಿಗುತ್ತವೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ನೈಸರ್ಗಿಕ ಸುವಾಸನೆ ನೀಡುವ ಪದಾರ್ಥಗಳ ಬಳಕೆಯನ್ನು ಅನುಮತಿಸುತ್ತದೆ ಎಂದು ಹೇಳಿದೆ, ಆದರೆ ಅದರ ಪರೀಕ್ಷೆಗಳಲ್ಲಿ ಕೆಲವು ಡಯಾಜಿಯೊ ಮತ್ತು ಇನ್‌ಬ್ರೂ ಕಾರ್ಖಾನೆಗಳು ರಮ್‌ಗೆ ರಮ್ ಪರಿಮಳವನ್ನು ಸೇರಿಸುವಂತೆ ಆಲ್ಕೊಹಾಲ್ಯುಕ್ತ ಪಾನೀಯದ ಸುವಾಸನೆಗಳನ್ನು ಸೇರಿಸುತ್ತಿವೆ ಎಂದು ಸಹ ಹೇಳಲಾಗಿದೆ.

ರಮ್‌ಗೆ ಪ್ರತ್ಯೇಕವಾಗಿ ರಮ್ ಸುವಾಸನೆ ಅಥವಾ ವಿಸ್ಕಿಗೆ ವಿಸ್ಕಿ ಸುವಾಸನೆ ಸೇರಿಸುವ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಉತ್ಪಾದನಾ ವಿಧಾನವೆಂದು ಪರಿಗಣಿಸಲಾಗುವುದಿಲ್ಲ ಎಂದು FSSAI ತಿಳಿಸಿದೆ. ಅಲ್ಲದೆ ಈ ರೀತಿಯ ಕೃತಕ ಸುವಾಸನೆ ಬಳಸುವುದರಿಂದ, ಮದ್ಯವನ್ನು ನೈಸರ್ಗಿಕವಾಗಿ ಪಕ್ವಗೊಳಿಸುವ ಅಥವಾ ಮೊಲಾಸಸ್‌, ಮಾಲ್ಟ್‌, ದ್ರಾಕ್ಷಿ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಬಳಸುವ ಪ್ರಕ್ರಿಯೆಯನ್ನು ಕಂಪನಿಗಳು ತಪ್ಪಿಸಿಕೊಳ್ಳಬಹುದು ಎಂದು FSSAI ಅಭಿಪ್ರಾಯಪಟ್ಟಿದೆ.

ಪ್ರಮುಖ ಮದ್ಯ ಬ್ರ್ಯಾಂಡ್‌ಗಳ ನಿಷೇಧ

ಇನ್ನು ಭಾರತದಲ್ಲಿ ಪ್ರಮುಖ ಮದ್ಯ ಬ್ರ್ಯಾಂಡ್‌ಗಳನ್ನು ನಿಷೇಧಿಸಲಾಗಿದೆ. ಅದರಲ್ಲಿ ಪ್ರಮುಖವಾಗಿರುವ ಮದ್ಯಗಳು ಯಾವುವು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

1. ಯುನೈಟೆಡ್ ಸ್ಪಿರೀಟ್ಸ್ (ಡಿಯಾಜಿಯೊ ಇಂಡಿಯಾ) ಕಂಪನಿಯ ಆಂಟಿಕ್ವಿಟಿ ಬ್ಲೂ ವಿಸ್ಕಿ ಮತ್ತು ರಾಯಲ್ ಚಾಲೆಂಜ್ ವಿಸ್ಕಿ.

2. ಭಾರತದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಓಲ್ಡ್ ಮಾಂಕ್ ರಮ್ (Old Monk Rum)ನ ಮೂರು ವಿವಿಧ ಟೇಸ್ಟ್‌ನ ಮದ್ಯ ನಿಷೇಧವಾಗಲಿದೆ. ಇದು
ಮೋಹನ್ ರಾಕಿ ಸ್ಪಿಂಗ್‌ವಾಟರ್ ಕಂಪನಿಯ ಭಾರತದ ಅತ್ಯಂತ ಹಳೆಯ ಬ್ರ್ಯಾಂಡ್ ಆಗಿದೆ.

3. ಇನ್‌ಬ್ರೋ ಬೆವರೇಜಸ್ ಕಂಪನಿಯ ಪ್ರಮುಖ ಬ್ಯಾಗ್‌ಪೈಪರ್ ಡಿಲಕ್ಸ್ ವಿಸ್ಕಿ ಮತ್ತು ಓಲ್ಡ್ ಕಾಸ್ಕ್ ಡಿಲಕ್ಸ್ XXX ರಮ್‌ಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗುತ್ತದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+