ಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆ
ನವದೆಹಲಿ, ನವೆಂಬರ್ 21 : ಭಾರತೀಯ ರೈಲ್ವೆ ಇಲಾಖೆಯು ಈ ಬಾರಿಯ ವಿಶ್ವ ಶೌಚಾಲಯ ದಿನವನ್ನು ವಿಶಿಷ್ಟವಾಗಿ ಆಚರಿಸಿದೆ. ಭಾರತೀಯ ರೈಲು ಪ್ರಯಾಣಿಕರ ಸೌಲಭ್ಯಕ್ಕಾಗಿ ಮೊಟ್ಟ ಮೊದಲ ಬಾರಿಗೆ ಇ ಶೌಚಾಲಯ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿದೆ.
ಭಾರತದಲ್ಲಿ ಇ ಶೌಚಾಲಯ ಹೊಸದೇನಲ್ಲ. ಆದರೆ, ಇದನ್ನು ರೈಲಿನಲ್ಲಿ ಅಳವಡಿಸಲು ಇಲ್ಲಿ ತನಕ ಯತ್ನಿಸಿರಲ್ಲ. ರೈಲ್ವೆ ಕೋಚ್ ಗಳಿಗೆ ತಕ್ಕಂತೆ ಇ ಟಾಯ್ಲೆಟ್ ಗಳನ್ನು ವಿನ್ಯಾಸಗೊಳಿಸಲಾಗುವುದುದ್ ಎಂದು ಕೇಂದ್ರ ರೈಲ್ವೆ ಪ್ರಕಟಿಸಿದೆ.
ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸುವ ಇ ಟಾಯ್ಲೆಟ್ ಗಳು ಸರಳವಾಗಿದ್ದು, ಸುಲಭವಾಗಿ ಎಲ್ಲರೂ ಉಪಯೋಗಿಸಬಹುದಾಗಿದೆ. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ಡಿಪೋಗೆ ಸೇರಿದ ಕೇಂದ್ರ ರೈಲ್ವೆಯ ಟೈನ್ ನಂಬರ್ 11013 ಅಥವಾ ಎಲ್ ಟಿಟಿ ಕೊಯಮತ್ತೂರು ಎಕ್ಸ್ ಪ್ರೆಸ್ ನ ಕೋಚ್ 3ಎ ನಲ್ಲಿ ಅಳವಡಿಸಿ ಪರೀಕ್ಷಿಸಲಾಗುತ್ತಿದೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆ ಘೋಷಿಸಿದ್ದು, ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ಮಹೋತ್ಸವದಂದು ಗಾಂಧೀಜಿ ಸ್ವಚ್ಛಭಾರತ ಕನಸು ನನಸಾಗಿಸುವ ಸಾಧನೆ ಬಗ್ಗೆ ಘೋಷಿಸಲಾಗುತ್ತದೆ. ಇಲ್ಲಿ ತನಕ 8,86,83,102 ಶೌಚಾಲಯಗಳನ್ನು ಈ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ.












Click it and Unblock the Notifications