ಮಾನಸಿಕ ಚಿಕಿತ್ಸೆಗೂ ಆರೋಗ್ಯ ವಿಮೆ ಅನ್ವಯ: ಕೇಂದ್ರದ ಮಹತ್ವದ ತೀರ್ಮಾನ

Recommended Video

      ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ : ಮಾನಸಿಕ ಚಿಕಿತ್ಸೆಗೂ ಆರೋಗ್ಯ ವಿಮೆ ಅನ್ವಯ | Oneindia Kannada

      ಬೆಂಗಳೂರು, ಆಗಸ್ಟ್ 29: ಮನೆಯಲ್ಲಿ ಮಾನಸಿಕ ಅಸ್ತಸ್ಥರಿದ್ದರೆ ಅವರಿಗೆ ಚಿಕಿತ್ಸೆ ನೀಡುವುದು ಎಷ್ಟು ಕಷ್ಟ ಎಂದು ಒಮ್ಮೆ ಯೋಚನೆ ಮಾಡಿ, ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗುತ್ತಿತ್ತು, ಚಿಕಿತ್ಸೆ ದೊರೆತರೆ ಸರಿಯಾಗಬಹುದು ಎಂಬ ಆಶಾಭಾವದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

      ಆದರೆ ಇನ್ನುಮುಂದೆ ಮಾನಸಿಕ ಕಾಯಿಲೆಗಳಿಗೂ ವಿಮೆ ಸಿಗಲಿದೆ. ಕೇಂದ್ರ ಸರ್ಕಾರವು ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಾನಸಿಕ ಕಾಯಿಲೆ ಚಿಕಿತ್ಸೆಗೂ ವಿಮಾ ವೆಚ್ಚ ಭರಿಸಬೇಕು ಎಂದು ಸೂಚನೆ ನೀಡಿದ್ದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ.

      ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೆಂಟಲ್ ಹೆಲ್ತ್ ಕೇರ್ 2017 ಮಸೂದೆ ಅನುಮೋದನೆಯಾಗಿದ್ದು ಮೇ 29, 2018 ಸೆಕ್ಷನ್ 21(4) ಕಾಯ್ದೆ ಅನ್ವಯ ತುರ್ತು ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು.

      Now insurance will apply for psychiatric treatment!

      ಈ ಕುರಿತು ಇದೀಗ ಆದೇಶವೊಂದು ಹೊರಬಿದ್ದಿದ್ದು, ಮಾನಸಿಕ ಆರೋಗ್ಯ ಚಿಕಿತ್ಸೆಗೂ ವಿಮಾ ಸೌಲಭ್ಯ ನೀಡುವಂತೆ ಸೂಚಿಸಲಾಗಿದೆ. ಮೇ 29ರಿಂದಲೇ ಅನ್ವಯವಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ.

      ಭಾರತದಲ್ಲಿರುವ ಪ್ರತಿಷ್ಠಿತ ವಿಮಾ ಕಂಪನಿಗಳು ಇಷ್ಟು ದಿನ ತಮ್ಮ ಷರತ್ತುಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಯಾವುದೇ ವೆಚ್ಚ ಭರಿಸಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದವು ಕೇಂದ್ರ ಸರ್ಕಾರದ ಈ ಆದೇಶ ಎಲ್ಲಾ ವಿಮಾ ಕಂಪನಿಗಳನ್ನು ಸುಮ್ಮನಿರುವಂತೆ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+