ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ದರ ಕಡಿತ : ಈಗ ಜೆಟ್, ಇಂಡಿಗೋ ಸರದಿ

By Kiran B Hegde
|
Google Oneindia Kannada News

ನವದೆಹಲಿ, ಜ. 14: ಖಾಸಗಿ ವಿಮಾನಯಾನ ಸಂಸ್ಥೆಗಳು ಎಷ್ಟೇ ನಷ್ಟದಲ್ಲಿರಲಿ, ದರ ಕಡಿತ ಸ್ಪರ್ಧೆಯಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಸರ್ಕಾರಿ ಸ್ವಾಮಿತ್ವದ ಏರ್ ಇಂಡಿಯಾ ಟಿಕೆಟ್ ಶುಲ್ಕದಲ್ಲಿ ಶೇ. 50ರಷ್ಟು ಕಡಿತ ಮಾಡಿದ ಮೇಲೆ ಇಂಡಿಗೋ ಮತ್ತು ಜೆಟ್ ಏರ್‌ವೇಯ್ಸ್ ಕೂಡ ದರ ಕಡಿತ ಮಾಡಿವೆ.

ಏರ್ ಇಂಡಿಯಾ ಟಿಕೆಟ್ ಶುಲ್ಕ 1,557 ರು.ಗಳಿಂದ ಆರಂಭವಾಗುತ್ತದೆ. ಈಗ ಮುಂಬೈ- ನವದೆಹಲಿ ಪ್ರಯಾಣ ದರ ಕೇವಲ 2,958 ರು. (ಮೊದಲು 6,000 ರು.ಗಳಿಂದ 9,000 ರು. ಇತ್ತು), ನವದೆಹಲಿ - ಬೆಂಗಳೂರು ಪ್ರಯಾಣಕ್ಕೆ 1,800 ರು. ನೀಡಬೇಕು. ನವದೆಹಲಿ - ಲಕ್ನೋ ಮತ್ತು ನವದೆಹಲಿ - ಇಂದೋರ್‌ಗೆ 1,558 ರು. ಪ್ರಯಾಣ ದರವಿದೆ.

ಏರ್ ಇಂಡಿಯಾ ವಿನಾಯಿತಿ ಘೋಷಿಸಿದ ಮೇಲೆ ಜೆಟ್ ಏರ್‌ವೇಯ್ಸ್ ಮತ್ತು ಇಂಡಿಗೋ ಕೂಡ ದೇಶೀಯ ಟಿಕೆಟ್ ದರ ಕಡಿತಗೊಳಿಸಿವೆ. ಜೆಟ್ ಏರ್‌ವೇಯ್ಸ್ ಕೂಡ ಟಿಕೆಟ್ ಆರಂಭಿದ ದರವನ್ನು 1,557 ರು.ಗಳಿಗೆ ನಿಗದಿಪಡಿಸಿದೆ. ಈ ಲಾಭ ಪಡೆಯಲು ಮುಂದಿನ ಸೋಮವಾರದೊಳಗೆ ಟಿಕೆಟ್ ಬುಕ್ ಮಾಡಬೇಕು. ಜನವರಿ 16ರಿಂದ ಏಪ್ರಿಲ್ 15ರೊಳಗಿನ ಪ್ರಯಾಣಿಗಳಿಗೆ ಈ ದರ ಅನ್ವಯಿಸುತ್ತದೆ. [ಏರ್ ಇಂಡಿಯಾ ಟಿಕೆಟ್ ಕನಿಷ್ಠ ದರ 1,557 ರು.]

jet

ಇಂಡಿಗೋ ಕನಿಷ್ಠ ದರ 1,647 ರು. : ಪ್ರಸ್ತುತ ದೇಶೀಯ ಪ್ರಯಾಣದಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆಯು ಅತಿ ಹೆಚ್ಚು ಪಾಲು ಹೊಂದಿದೆ. ಆದರೆ, ದರ ಸಮರಕ್ಕಿಳಿದಿದ್ದರೂ ಏರ್ ಇಂಡಿಯಾ ಹಾಗೂ ಜೆಟ್‌ಗೆ ಹೋಲಿಸಿದರೆ ಕನಿಷ್ಠ ದರವನ್ನು 90 ರು. ಹೆಚ್ಚು ಅಂದರೆ 1,647 ರು.ಗಳಿಗೆ ನಿಗದಿಪಡಿಸಿದೆ. ಈ ಯೋಜನೆಯಡಿ ನವದೆಹಲಿ-ಲಕ್ನೋ ಪ್ರಯಾಣ ದರ 1,647 ರು., ನವದೆಹಲಿಯಿಂದ ಮುಂಬೈಗೆ 3,051 ರು., ಕೋಲ್ಕೊತಾಗೆ 3,906 ರು., ಚೆನ್ನೈಗೆ 4,273 ರು. ಹಾಗೂ ಅಹಮದಾಬಾದ್‌ಗೆ 3,005 ರು. ನಿಗದಿಪಡಿಸಲಾಗಿದೆ. [ಗಗನಸಖಿಯರಿಗೆ ನೆಲ ತೋರಿದ ಏರ್ ಇಂಡಿಯಾ]

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಯಾಣಕ್ಕೆ ಸಂಬಂಧಿಸಿದ Yatra.com ವೆಬ್ ಸೈಟ್ ಅಧ್ಯಕ್ಷ ಶರತ್ ಧಾಲ್, "ಮುಂದಿನ ಕೆಲವು ತಿಂಗಳುಗಳ ವಾರದ ಕೊನೆಯಲ್ಲಿ ದೀರ್ಘ ರಜೆಗಳಿವೆ. ಅಲ್ಲದೆ, ಬೇಸಿಗೆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ದರ ಕಡಿತ ಮಾಡಿತ್ತು. ಆದ್ದರಿಂದ ಖಾಸಗಿ ವಿಮಾನಯಾನ ಸಂಸ್ಥೆಗಳೂ ಅನಿವಾರ್ಯವಾಗಿ ದರ ಕಡಿತಕ್ಕೆ ಮುಂದಾಗಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿಕೆಟ್ ಬುಕಿಂಗ್ 4 ಪಟ್ಟು ಹೆಚ್ಚಳ : "ಗಣರಾಜ್ಯೋತ್ಸವ, ಪ್ರೇಮಿಗಳ ದಿನ, ಹೋಳಿ ಮತ್ತು ಈಸ್ಟರ್ ಹಬ್ಬಗಳು ವಾರದ ಕೊನೆ ಅಥವಾ ಆರಂಭದಲ್ಲಿ ಬಂದಿವೆ. ಇದೇ ಸಂದರ್ಭದಲ್ಲಿ ಹೆಚ್ಚುಕಡಿಮೆ ಶೇ. 35ರಷ್ಟು ಟಿಕೆಟ್ ದರ ಕಡಿತ ಮಾಡಿರುವ ಕಾರಣ ನಮ್ಮ ವೆಬ್ ಸೈಟ್‌ನಲ್ಲಿ ಶೇ. 400ರಷ್ಟು ಟಿಕೆಟ್ ಬುಕಿಂಗ್ ಪ್ರಮಾಣ ಹೆಚ್ಚಳಗೊಂಡಿದೆ" ಎಂದು ತಿಳಿಸಿದ್ದಾರೆ. [ದುಬೈ ಪ್ರವಾಸದ ಪ್ಯಾಕೇಜ್]

ಪ್ರತಿ ವರ್ಷ ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ಹಾಗೂ ಜುಲೈದಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಸೀಟ್‌ಗಳನ್ನು ಭರ್ತಿ ಮಾಡಿಕೊಳ್ಳಲು ವಿಮಾನಯಾನ ಸಂಸ್ಥೆಗಳು ದರ ಕಡಿತ ಘೋಷಿಸುತ್ತವೆ ಎಂದು ವಿಮಾನಯಾನ ಸಂಸ್ಥೆಯೊಂದರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Following Air India a day later Jet Airways and IndiGo also lowered their domestic fares. An airline official said fares are always slashed in the lean travel months of January to April and July to September to fill up seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X