ಖ್ಯಾತ ಸಿತಾರ್ ವಾದಕ ಉಸ್ತಾದ್ ಇಮ್ರಾತ್ ಖಾನ್ ವಿಧಿವಶ
ನವದೆಹಲಿ, ನವೆಂಬರ್ 24: ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ, ಸಿತಾರ್ ವಾದಕ ಉಸ್ತಾದ್ ಇಮ್ರಾತ್ ಖಾನ್(83) ಅಮೆರಿಕದಲ್ಲಿ ಗುರುವಾರದಂದು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಕೆಲದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಅಮೆರಿಕದ ಸೇಂಟ್ ಲೂಯಿಸ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಶನಿವಾರದಂದು ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ನಿಷಾತ್ ಖಾನ್ ಅವರು ಹೇಳಿದ್ದಾರೆ.

ಎರಡು ದಶಕಗಳಿಂದ ಸೇಂಟ್ ಲೂಯಿಸ್‌ನಲ್ಲಿ ವಾಸವಾಗಿದ್ದರು. ಕಳೆದ ಒಂದು ವಾರದಿಂದ ಸೈಂಟ್ ಲೂಯಿ ಆಸ್ಪತ್ರೆಯಲ್ಲಿ ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಶ್ವವಾಯು ಉಂಟಾಗಿತ್ತು ಎಂದು ಅಮೆರಿಕಕ್ಕೆ ತೆರಳುವ ಮುನ್ನ ಪಿಟಿಐ ಸುದ್ದಿಗಾರರ ಜತೆ ಮಾತನಾಡುತ್ತಾ ಸಿತಾರ್ ವಾದಕ ನಿಷಾತ್ ಖಾನ್ ಹೇಳಿದರು.
ಪದ್ಮ ಪ್ರಶಸ್ತಿ ನಿರಾಕರಿಸಿದ್ದರು: ಪ್ರಶಸ್ತಿ ತಡವಾಗಿ ಬಂದಿದೆ ಮತ್ತು ಅದು ತನ್ನ ಸಾಧನೆಗಳನ್ನು ಕುಂದಿಸಿದೆ ಎಂಬ ಕಾರಣ ನೀಡಿ, ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಇಮ್ರಾತ್ ಖಾನ್ ತಿರಸ್ಕರಿಸಿದ್ದರು. ಖಾನ್
ಉಸ್ತಾದ್ ಇಮ್ದಾದ್ ಖಾನ್ ಅವರ ಹೆಸರಿನಿಂದ ಖ್ಯಾತಗೊಂಡಿದ್ದ ಇಟಾವಾ ಅಥವಾ ಇಮ್ದಾದ್‌ಖಾನಿ ಘರಾನಾಕ್ಕೆ ಸೇರಿದ್ದ ಇಮ್ರಾತ್ ಖಾನ್ ಅವರ ಹಿರಿಯ ಸೋದರ ಉಸ್ತಾದ್ ವಿಲಾಯತ್ ಖಾನ್.
ಸುರ್‌ಬಹಾರ್ ಸಂಗೀತ ಉಪಕರಣವನ್ನು ಅಭಿವೃದ್ಧಿಗೊಳಿಸಿ, ವಿಶ್ವದೆಲ್ಲೆಡೆ ಸಂಗೀತ ಕಚೇರಿ ನೀಡಿ, ಶಾಸ್ತ್ರೀಯ ಸಂಗೀತದ ಜನಪ್ರಿಯತೆ ಹೆಚ್ಚಿಸಿದ್ದರು.












Click it and Unblock the Notifications