ಮೋದಿ ಆಪ್ ಬಳಸಿ ನೋಟ್ ಬ್ಯಾನ್ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯದ ಆಗು ಹೋಗುಗಳ ಬಗ್ಗೆ ಅಪ್ಡೇಟ್ ಗಳನ್ನು ಪಡೆಯಲು ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಅಪ್ಲಿಕೇಷನ್ ಬಳಕೆಯಾಗುತ್ತಿರುವುದು ತಿಳಿದಿರಬಹುದು. ಈಗ ನೋಟುಗಳ ಬ್ಯಾನ್ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲು ಇದೇ ಆಪ್ಲಿಕೇಷನ್ ಬಳಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ನವೆಂಬರ್ 8ರಂದು 500, 1000 ನೋಟುಗಳ ಬಳಕೆಯನ್ನು ನಿಷೇಧಿಸಿರುವುದರ ಬಗ್ಗೆ ವಿಪಕ್ಷಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಮೋದಿ ಅವರು ಮುಂದಾಗಿದ್ದಾರೆ.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]


ಪ್ರಧಾನಿ ಅವರು ಈ ಬಗ್ಗೆ ಟ್ವೀಟ್ ಮಾಡಿ ಸರ್ಕಾರದ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ನರೇಂದ್ರ ಮೋದಿ ಅಪ್ಲಿಕೇಷನ್ ಬಳಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದ್ದಾರೆ.

ಹಳೆ ನೋಟುಗಳ ನಿಷೇಧದ ನಂತರ 500 ಹಾಗೂ 2000 ರುಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಹೊರ ತಂದಿರುವ ಬಗ್ಗೆ ಕೂಡಾ ಪ್ರಶ್ನೆಗಳಿವೆ. ಡಿಸೆಂಬರ್ 30ರೊಳಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಹಾಗೂ ಹೊಸ ನೋಟುಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ಕಪ್ಪು ಹಣ ಇದೆಯಾ ?

ಕಪ್ಪು ಹಣ ಇದೆಯಾ ?

Do you think that black money exists in India?
ಭಾರತದಲ್ಲಿ ಕಪ್ಪು ಹಣ ಇದೆಯೆಂದು ನಿಮಗನ್ನಿಸುತ್ತದೆಯಾ ?
a ಹೌದು
b ಇಲ್ಲ

ಕಪ್ಪುಹಣದ ವಿರುದ್ಧ ಹೋರಾಟ

ಕಪ್ಪುಹಣದ ವಿರುದ್ಧ ಹೋರಾಟ

Do you think the evil of corruption and black money needs to be fought and eliminated?
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಡಿ ನಿರ್ಮೂಲನೆ ಮಾಡಬೇಕೆಂದು ನೀವು ಯೋಚಿಸಿದ್ದೀರಾ?
a ಹೌದು
b ಇಲ್ಲ

ಸರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸರಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

Overall, what do you think about the Government's moves to tackle black money?
ನೋಟ್‌ ಬ್ಯಾನ್‌ ಬಗ್ಗೆ ಮೋದಿ ಸರ್ಕಾರದ ಕೈಗೊಂಡಿರುವ ಒಟ್ಟಾರೆ ಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮೋದಿ ಸರ್ಕಾರ ಕೈಗೊಂಡ ಕ್ರಮ

ಮೋದಿ ಸರ್ಕಾರ ಕೈಗೊಂಡ ಕ್ರಮ

ಭ್ರಷ್ಟಾಚಾರ ವಿರುದ್ಧ ಮೋದಿ ಸರ್ಕಾರ ಕೈಗೊಂಡ ಕ್ರಮಗಳನ್ನು
Scale of 1 to 5 - outstanding, very good, good, ok, useless

ನಿಷೇಧದ ಬಗ್ಗೆ ಕೈಗೊಂಡ ಕ್ರಮ ಸರಿ ಎನಿಸಿದೆಯೆ?

ನಿಷೇಧದ ಬಗ್ಗೆ ಕೈಗೊಂಡ ಕ್ರಮ ಸರಿ ಎನಿಸಿದೆಯೆ?

What do you think of the Modi Government's move of banning old Rs 500 & Rs 1000 notes?
ಮೋದಿ ಸರ್ಕಾರ 500 ಹಾಗೂ 1000 ರುಪಾಯಿ ನಿಷೇಧದ ಬಗ್ಗೆ ಕೈಗೊಂಡ ಕ್ರಮ ಸರಿ ಎನಿಸಿದೆಯೆ?
* ಉತ್ತಮ ನಡೆ, ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದಾರೆ.
* ಉತ್ತಮ ನಡೆ, ಪರ್ವಾಗಿಲ್ಲ
* ಇದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ

ಭಯೋತ್ಪಾದನೆ ನಿಗ್ರಹ ಸಾಧ್ಯವೆ?

ಭಯೋತ್ಪಾದನೆ ನಿಗ್ರಹ ಸಾಧ್ಯವೆ?

Do you think demonetisation will help in curbing black money, corruption & terrorism?
ಅಪನಗದೀಕರಣ(demonetisation) ನಿಂದ ಕಪ್ಪು ಹಣ ಹಾಗೂ ಭ್ರಷ್ಟಾಚಾರ, ಭಯೋತ್ಪಾದನೆ ನಿಗ್ರಹ ಸಾಧ್ಯವೆ?
* ಇದರಿಂದ ತ್ವರಿತಗತಿಯಲ್ಲಿ ಪರಿಹಾರ ಸಾಧ್ಯ
* ದೂರಾಲೋಚನೆ ಕ್ರಮವಾಗಿದೆ, ಈಗಲೇ ಏನು ಹೇಳಲು ಸಾಧ್ಯವಿಲ್ಲ
* ಅಲ್ಪಪ್ರಮಾಣದ ಪರಿಣಾಮ
* ಗೊತ್ತಿಲ್ಲ

 ಸೇವೆ ಜನ ಸಾಮಾನ್ಯರ ಕೈಗೆಟುಕಲಿದೆ

ಸೇವೆ ಜನ ಸಾಮಾನ್ಯರ ಕೈಗೆಟುಕಲಿದೆ

Demonetisation will bring real estate, higher education, healthcare in the common man's reach
ಅಪನಗದೀಕರಣದಿಂದ ರಿಯಲ್ ಎಸ್ಟೇಟ್, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಜನ ಸಾಮಾನ್ಯರ ಕೈಗೆಟುಕಲಿದೆ
* ಸಂಪೂರ್ಣವಾಗಿ ಒಪ್ಪುತ್ತೇನೆ
* ಅಲ್ಪ ಪ್ರಮಾಣದಲ್ಲಿ ಒಪ್ಪುತ್ತೇನೆ
* ಏನು ಹೇಳಲಾರೆ

ನೋಟು ವಿರುದ್ಧದ ನಮ್ಮ ಹೋರಾಟ

ನೋಟು ವಿರುದ್ಧದ ನಮ್ಮ ಹೋರಾಟ

Did you mind the inconvenience faced in our fight to curb corruption, black money, terrorism and counterfeiting of currency?

ಕಪ್ಪು ಹಣ ಹಾಗೂ ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟು ವಿರುದ್ಧದ ನಮ್ಮ ಹೋರಾಟದಿಂದ ನಿಮಗೆ ತೊಂದರೆಯಾಗಿದೆಯೆ?
* ಇಲ್ಲವೇ ಇಲ್ಲ
* ಹೌದು ಎನಿಸುತ್ತದೆ
* ಗೊತ್ತಿಲ್ಲ

ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದಾರೆ

ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದಾರೆ

Do you believe some anti-corruption activists are now actually fighting in support of black money, corruption & terrorism?
ಕೆಲ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿದ್ದಾರೆ
* ಹೌದು
* ಇಲ್ಲ

ನಿಮ್ಮ ಒಳನೋಟಗಳು, ಅಭಿಪ್ರಾಯ

ನಿಮ್ಮ ಒಳನೋಟಗಳು, ಅಭಿಪ್ರಾಯ

Do you have any suggestions, ideas or insights you would like to share with PM Narendra Modi?
ನೀವು ಪ್ರಧಾನಿ ಮೋದಿಯೊಂದಿಗೆ ನಿಮ್ಮ ಒಳನೋಟಗಳು, ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಬಯಸುತ್ತೀರಾ?ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಷನ್ ನಿಮ್ಮ ಮೊಬೈಲಿಗೆ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಅಥವಾ ನರೇಂದ್ರ ಮೋದಿ.ಇನ್ ವೆಬ್ ಸೈಟ್ ನಿಂದ ಪಡೆದುಕೊಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi has asked people to log onto his app(NM application) to provide him feedback on his decision to outlaw 500 and 1,000 rupee notes.
Please Wait while comments are loading...