ಭಾರತದಲ್ಲಿ ಮಾಡೆರ್ನಾ ಲಸಿಕೆಗೆ ಅನುಮೋದನೆ; ಸಿಪ್ಲಾ ಕಂಪನಿಯಿಂದ ಆಮದು

ನವದೆಹಲಿ, ಜೂನ್ 29: ಅಮೆರಿಕ ಮೂಲದ ಕೊರೊನಾ ಲಸಿಕಾ ಅಭಿವೃದ್ಧಿ ಸಂಸ್ಥೆ ಮಾಡೆರ್ನಾ ಭಾರತದಲ್ಲಿ ತನ್ನ ಕೊರೊನಾ ಲಸಿಕೆಗೆ ಅನುಮೋದನೆ ಕೋರಿದ್ದು, ಶೀಘ್ರವೇ ಡಿಸಿಜಿಐ ಅನುಮೋದನೆ ನೀಡಲಿರುವುದಾಗಿ ಅಧೀಕೃತ ಮೂಲಗಳು ತಿಳಿಸಿವೆ.

ದೇಶದಲ್ಲಿ ಈ ಲಸಿಕೆಯನ್ನು ಸಿಪ್ಲಾ ಸಂಸ್ಥೆ ಆಮದು ಮಾಡಿಕೊಂಡು ವಿತರಣೆ ಮಾಡುವ ಯೋಜನೆಯಿದೆ.

ದೇಶದಲ್ಲಿ ಕೊರೊನಾ ಮೂರನೇ ಅಲೆ ತಡೆಗಟ್ಟಲು ಬೃಹತ್ ಲಸಿಕಾ ಅಭಿಯಾನ ಗುರಿಯನ್ನು ಹಮ್ಮಿಕೊಂಡಿದ್ದು, ಈ ಗುರಿ ಪೂರೈಕೆಗೆ ಭಾರತೀಯ ಔಷಧ ನಿಯಂತ್ರಕ, 18 ವರ್ಷ ಮೇಲ್ಪಟ್ಟವರಿಗೆ ಮಾಡೆರ್ನಾ ಲಸಿಕೆಗೆ ಅನುಮೋದನೆ ನೀಡುವುದಾಗಿ ತಿಳಿದುಬಂದಿದೆ.

Nod For Moderna Vaccine In India Says Sources

ಭಾರತದಲ್ಲಿ ಮಾಡೆರ್ನಾ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಹಾಗೂ ಮಾರಾಟ ಮಾಡಲು ಅನುಮತಿ ನೀಡುವಂತೆ ಮುಂಬೈ ಮೂಲದ ಸಿಪ್ಲಾ ಔಷಧ ಸಂಸ್ಥೆ ಕೋರಿದೆ.

ಯಾವುದೇ ಲಸಿಕೆ USFDA ಅನುಮೋದನೆ ಪಡೆದಿದ್ದರೆ, ಯಾವುದೇ ಪ್ರಯೋಗವಿಲ್ಲದೇ ಭಾರತದಲ್ಲಿ ಮಾರಾಟ ದೃಢೀಕರಣ ನೀಡಬಹುದು ಎಂಬ ಸರ್ಕಾರದ ಈಚಿನ ನಿರ್ಧಾರವನ್ನು ಸಿಪ್ಲಾ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಆದರೆ ಅನುಮೋದನೆಗೆ ಮುನ್ನ ನಿರ್ದಿಷ್ಟ ಕೊರೊನಾ ಲಸಿಕೆಯ ಮೊದಲ ನೂರು ಫಲಾನುಭವಿಗಳ ಸುರಕ್ಷತಾ ಮಾಹಿತಿಯ ವರದಿ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ಇದೇ ವಾರದಲ್ಲಿ ಡಿಸಿಜಿಐ ಅಂತಿಮ ನಿರ್ಧಾರ ಪ್ರಕಟಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+