ಜೈಲಿಗೆ ಹೋಗಿ ಬಂದ ಉಮರ್ ಖಾಲೀದ್ ಹೇಳಿದ್ದೇನು?

Subscribe to Oneindia Kannada

ನವದೆಹಲಿ, ಮಾರ್ಚ್.19: ದೆಹಲಿ ಜವಾಹರಲಾಲ್ ವಿವಿ ವಿವಾದ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ದೇಶದ್ರೋಹದ ಆರೋಪದ ಮೇಲೆ ಜೈಲು ಸೇರಿದ್ದವರು ಜಾಮೀನಿನ ಮೇಲೆ ಹೊರಬಂದ ತಕ್ಷಣ ಪುಂಖಾನುಪುಂಖ ಭಾಷಣ ಬಿಗಿಯುತ್ತಿದ್ದಾರೆ.

ಜೈಲಿನಿಂದ ಬಂದ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ. ಇದೀಗ ಜೈಲಿನಿಂದ ಹೊರಬಂದ ಉಮರ್ ಖಾಲೀದ್ ಕೂಡ ಮಾತನಾಡಿದ್ದಾನೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

ದೇಶದ್ರೋಹದ ಆರೋಪದಲ್ಲಿ ಜೈಲಿಗೆ ಹೋದದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ, ನಮ್ಮ ಒಗ್ಗಟ್ಟು ಮುರಿಯಲು ಅನೇಕರು ಮಾಡಿದ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಿದ್ದಾನೆ.

jnu

ದೇಶದ್ರೋಹದ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿರುವ ಖ್ಯಾತ ಲೇಖಕಿ, ಹೋರಾಟಗಾರ್ತಿ ಅರುಂದತಿ ರಾಯ್‌ ಮತ್ತು ಬಿನಾಯಕ್‌ ಸೇನ್‌ ಅವರ ಸಾಲಿಗೆ ನಾವೀಗ ಸೇರಿದ್ದೇವೆ ಎಂದು ಜಾಮೀನಿನ ಮೇಲೆ ಹೊರಬಂದ ಉಮರ್‌ ಖಾಲಿದ್‌ ಮತ್ತು ಅನಿರ್ಬನ್‌ ಭಟ್ಟಾಚಾರ್ಯ ಇಬ್ಬರು ಹೇಳಿದ್ದಾರೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿ ಸುಮಾರು 35 ನಿಮಿಷಗಳ ಕಾಲ ಭಾಷಣ ಮಾಡಿದ ಉಮರ್‌ ಖಾಲಿದ್‌, ಪ್ರವೀಣ್‌ ತೊಗಾಡಿಯಾ, ಯೋಗಿ ಆದಿತ್ಯನಾಥ್‌ ಮೊದಲಾದವರಿಗೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಅಂದ ಮೇಲೆ ನಮಗೂ ಇರಬೇಕಲ್ಲವೇ? ನನಗೆ ಭಯೋತ್ಪಾದಕನೆಂಬ ಹಣೆ ಪಟ್ಟಿ ಹಚ್ಚಲಾಗಿದೆ. ಇದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲಲ್ಲ ಎಂದು ಹೇಳಿದ್ದಾನೆ.[ಎಬಿವಿಪಿ ತೊರೆದವರು ದೆಹಲಿಯಲ್ಲಿ ಮನುಸ್ಮೃತಿ ಸುಟ್ಟರು]

ಸುಮಾರು ಎರಡೂವರ ಸಾವಿರಕ್ಕೂ ಅಧಿಕ ಜೆ ಎನ್ ಯು ವಿದ್ಯಾರ್ಥಿಗಳು ಖಲೀದ್ ಭಾಷಣಕ್ಕೆ ಸಾಕ್ಷಿಯಾದರು. ಇದೆ ವೇಳೆ ಹಾಜರಿದ್ದ ಖಲೀದ್ 12 ವರ್ಷದ ಸಹೋದರಿ ನಮ್ಮ ಸಹೋದರರು ವಾಪಸ್ ಬಂದಿರುವುದು ನ್ಯಾಯಕ್ಕೆ ಸಿಕ್ಕ ಜಯ ಎಂದು ಹೇಳಿದಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hours after his release from Tihar jail in a sedition case, JNU student Umar Khalid today said he has no regrets of being jailed and was rather proud of being booked under the said charges. "We have no regrets of being jailed in this particular case. We are in fact proud of the fact that we have been booked under sedition, a law under which activists like Arundhati Roy and Binayak Sen were booked.
Please Wait while comments are loading...