ಅವಿವಾಹಿತ ತಾಯಿ ತಂದೆಯ ಹೆಸರು ಬಹಿರಂಗಪಡಿಸಬೇಕಿಲ್ಲ
ನವದೆಹಲಿ, ಜುಲೈ 06 : ಮಕ್ಕಳ ಪಾಲನೆ ಅಧಿಕಾರ ಪಡೆಯಲು ಅವಿವಾಹಿತ ತಾಯಿ ಮಗುವಿನ ತಂದೆಯ ಹೆಸರನ್ನು ಬಹಿರಂಗಪಡಿಸಬೇಕಿಲ್ಲ, ಮಕ್ಕಳ ಪಾಲನೆಯೇ ಇಲ್ಲಿ ಮುಖ್ಯ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.
ಅವಿವಾಹಿತ ತಾಯಿ ಮಕ್ಕಳ ಪಾಲನೆ ಸಂದರ್ಭದಲ್ಲಿ ತಂದೆಯ ಒಪ್ಪಿಗೆ ಪಡೆಯಬೇಕು ಮತ್ತು ತಂದೆಯ ಹೆಸರನ್ನು ಬಹಿರಂಗಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ತಂದೆಯ ಹೆಸರಿಗಿಂತ ಮಕ್ಕಳ ಪಾಲನೆಯೇ ಇಲ್ಲಿ ಮುಖ್ಯ ಎಂದು ಅಭಿಪ್ರಾಯಪಟ್ಟಿದೆ. [ಪವಾಡ: ಭೂ ಕುಸಿದರೂ ಬಚಾವಾದ ತಾಯಿ-ಮಗು!]

ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ನೇತೃತ್ವದ ಪೀಠ ಸೋಮವಾರ ಈ ಮಹತ್ವದ ಆದೇಶ ನೀಡಿದೆ. ಒಂದು ವೇಳೆ ಅವಿವಾಹಿತ ತಾಯಿ ತಂದೆಯ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದಿದ್ದರೆ. ಪಾಲನೆ ಅಧಿಕಾರ ಪಡೆಯುವ ಸಂದರ್ಭದಲ್ಲಿ ತಂದೆಯ ಒಪ್ಪಿಗೆ ಅಗತ್ಯವಿಲ್ಲ ಎಂದ ಕೋರ್ಟ್ ಸ್ಪಷ್ಟಪಡಿಸಿದೆ. [ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]
ತಂದೆಯ ಹೆಸರನ್ನು ಏಕೆ ಬಹಿರಂಗಪಡಿಸಬೇಕು ಎಂದು ಗೆಜೆಟೆಡ್ ಅಧಿಕಾರಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್ ವಜಾಗೊಳಿಸಿ ಹೆಸರನ್ನು ಬಹಿರಂಗಪಡಿಸಬೇಕು ಎಂದು ಆದೇಶ ನೀಡಿತ್ತು. 2011ರಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. [ಪಿಟಿಐ ಚಿತ್ರ]












Click it and Unblock the Notifications