ಕಪ್ಪು ಹಣದ ಅಂದಾಜಿನ ಮಾಹಿತಿ ಆರ್ಥಿಕ ಸಚಿವಾಲಯದ ಬಳಿಯಿಲ್ಲ
ಸ್ವಿಟ್ಜರ್ ಲೆಂಡ್ ನಿಂದ ದೊರೆತಿರುವ ಕಪ್ಪು ಹಣ ಪ್ರಕರಣದ ಮಾಹಿತಿಯ ರಹಸ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, ದೇಶದ ಒಳಗೆ ಅಥವಾ ಹೊರಗೆ ಇರುವ ಕಪ್ಪು ಹಣದ ಅಂದಾಜು ಇಲ್ಲ ಎಂದು ತಿಳಿಸಲಾಗಿದೆ.
ಆರ್ಥಿಕ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ನಡೆದ ಆಧಾರದ ಮೇಲೆ ಪ್ರಕರಣಗಳ ಲೆಕ್ಕದಲ್ಲಿ ಭಾರತ ಮತ್ತು ಸ್ವಿಟ್ಜರ್ ಲೆಂಡ್ ಮಾಹಿತಿ ವಿನಿಮಯ ಮಾಡುತ್ತವೆ. ಇದು ನಿರಂತರವಾದ ಪ್ರಕ್ರಿಯೆ ಎಂದು ತಿಳಿಸಲಾಗಿದೆ. "ಸ್ವಿಟ್ಜರ್ ಲೆಂಡ್ ಕಪ್ಪು ಹಣದ ಬಗ್ಗೆ ಹಂಚಿಕೊಳ್ಳುವ ಮಾಹಿತಿಯನ್ನು ರಹಸ್ಯವಾಗಿ ನಿರ್ವಹಿಸಲಾಗುತ್ತದೆ" ಎಂದು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಲಾಗಿದೆ.
ಸ್ವಿಟ್ಜರ್ ಲೆಂಡ್ ನಿಂದ ದೊರೆತ ಕಪ್ಪು ಹಣ ಪ್ರಕರಣಗಳ ಮಾಹಿತಿ, ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಹಾಗೂ ಆಯಾ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮ ಏನು ಎಂಬ ಬಗ್ಗೆ ವಿವರ ಕೇಳಲಾಗಿತ್ತು. ಭಾರತ ಹಾಗೂ ಸ್ವಿಟ್ಜರ್ ಲೆಂಡ್ ಮಧ್ಯೆ ಖಾತೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಬಗ್ಗೆ ದ್ವಿಪಕ್ಷೀಯ ಒಪ್ಪಂದ ಆಗಿದೆ.

ಭಾರತೀಯರು ತೆರಿಗೆ ತಪ್ಪಿಸಿ, ಸ್ವಿಟ್ಜರ್ ಲೆಂಡ್ ನಲ್ಲಿ ಇರಿಸಿರುವ ಹಣವನ್ನು ದೇಶಕ್ಕೆ ವಾಪಸ್ ತರುವಲ್ಲಿ ಈಗಿನ ಒಪ್ಪಂದದಿಂದ ಅನುಕೂಲ ಆಗಲಿದೆ.












Click it and Unblock the Notifications