• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರೆನ್ಸಿ ಎಮರ್ಜೆನ್ಸಿ : ಕರ್ನಾಟಕದಲ್ಲೂ ನೋ ಕ್ಯಾಷ್, ಜನರ ಪರದಾಟ

|

ಬೆಂಗಳೂರು, ಏಪ್ರಿಲ್ 18: ತುರ್ತು ಹಣದ ಅಗತ್ಯವಿದೆ, ಬ್ಯಾಂಕ್ ಖಾತೆಯಲ್ಲಿ ದುಡ್ಡಿದ್ದರೂ ಕೈಗೆ ಸಿಗುತ್ತಿಲ್ಲ, ಯಾವ ಎಟಿಎಂ ನೋಡಿದರೂ ನೋ ಕ್ಯಾಷ್ , ಔಟ್ ಆಫ್ ಸರ್ವೀಸ್ ಬೋರ್ಡ್ ಕಿಲೋಮೀಟರ್ ಗಟ್ಟಲೆ ಸುತ್ತಾಡಿದರೂ ಪ್ರಯೋಜನವಾಗುತ್ತಿಲ್ಲ. ಇದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೇಳಿ ಬರುತ್ತಿರುವ ಗ್ರಾಹಕರ ದೂರು.

ಎಟಿಎಂಗಳಲ್ಲಿ ಹಣವಿಲ್ಲ, ಮಷೀನ್ ಗೆ ಒದ್ದು ಸಿಟ್ಟು ತೀರಿಸುವ ಗ್ರಾಹಕರು

ಕಿಸೆಯಲ್ಲಿ ದುಡ್ಡು ಖಾಲಿಯಾದರೆ ಸಾಕು ಯಾರು ಚಿಂತಿ ಮಾಡುತ್ತಿದ್ದಿಲ್ಲ, ತಕ್ಷಣ ಸಿಗುವ ಎಟಿಎಂ ಗಳಿಗೆ ಹೋಗಿ ತಮಗೆ ಬೇಕಾದಷ್ಟು ಹಣ ಡ್ರಾ ಮಾಡಿಕೊಂಡು ಬರುತ್ತಿದ್ದರು, ಆದರೆ ಈಗ ಕಿಸೆ ಖಾಲಿಯಾದರೆ ಹೇಗಪ್ಪ ಎಂಬ ಚಿಂತೆ ಮಾಡಬೇಕಾಗಿದೆ, ಕಾರಣ ಎಟಿಎಂಗಳಲ್ಲಿ ದುಡ್ಡು ಬರುತ್ತಿಲ್ಲ, ಚುನಾವಣೆ ಹಾಗು ಬೇಸಿಗೆಯ ರಜೆಯ ಕಾಲದಲ್ಲಿ ಎಟಿಎಂಗಳಲ್ಲಿ ದುಡ್ಡು ಸಿಗದೆ ಇರುವುದಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ, ಇದು ಬರುವ ಚುನಾವಣೆಯ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೇಸಿಗೆ ರಜೆ ಇದೇ ಸಂದರ್ಭದಲ್ಲಿ ಕೆಲವರು ಪ್ರಯಾಣ ಮಾಡುತ್ತಾರೆ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ, ಯಾರಿಗೂ ಬ್ಯಾಂಕಿಗೆ ಹೋಗಿ ಹಣ ಪಡೆಯಲು ಆಗುತ್ತಿಲ್ಲ, ಎಟಿಎಂ ಗಳು ಬಂದ ನಂತರ ಯಾರು ಹಣ ತೆಗೆಯಲು ಹಾಗು ಹಾಕಲು ಬ್ಯಾಂಕ್ ಗಳಿಗೆ ಹೋಗುತ್ತಿಲ್ಲ. ಆದರೆ ಈಗ ಎಟಿಎಂಗಳಲ್ಲಿ ಹಣ ಸಿಗದೆ ಇರುವದರಿಂದ ಮತ್ತೆ ಬ್ಯಾಂಕಿನಲ್ಲಿ ಕ್ಯೂ ನಿಂತು ಹಣ ಪಡೆಯಬೇಕಾಗಿದೆ, ಇದೇ ಪರಿಸ್ಥಿತಿ ಈಗ ಎಟಿಎಂಗಳಲ್ಲಿ ಇದ್ದು, ಮುಂಜಾನೆಯಿಂದಲೇ ಕೆಲವರು ಎಟಿಎಂಗಳಲ್ಲಿ ನಿಂತು ಹಣ ಪಡೆಯಬೇಕಾದ ಅನಿವಾರ್ಯತೆ, ಸರದಿಯಲ್ಲಿ ನಿಂತಿರುವ ಎಲ್ಲಾ ಗ್ರಾಹಕರಿಗೆ ಹಣ ಸಿಗುತ್ತದೆ ಎಂಬುವುದು ಗ್ಯಾರಂಟಿ ಇಲ್ಲ, ಇದರಿಂದಾಗಿ ಗ್ರಾಹಕರು ಸಹಜವಾಗಿಯೆ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 ಎಟಿಎಂಗಳಲ್ಲಿ ಹಣ ಸಿಗದೆ ಜನರು ಆತಂಕ

ಎಟಿಎಂಗಳಲ್ಲಿ ಹಣ ಸಿಗದೆ ಜನರು ಆತಂಕ

ಎಲ್ಲಿ ನೋಡಿದರೂ ಎಟಿಎಂಗಳ ಮುಂದೆ ನೋ ಕ್ಯಾಶ್ ಬೋರ್ಡು, ಇನ್ನೂ ಕೆಲವು ಕಡೆ ಎಟಿಎಂಗಳಲ್ಲಿ ದುಡ್ಡು ಇದ್ದರೂ ದುಡ್ಡು ಪಡೆಯಲು ಸಾಲುಗಟ್ಟಿ ನಿಂತಿರುವ ಜನ, ಕಳೆದ ಎರಡು ತಿಂಗಳನಿಂದ ಎಟಿಎಂಗಳಲ್ಲಿ ಹಣ ಸಿಗದೆ ಜನತೆ ಪರಿದಾಡುವಂತಾಗಿದೆ, ಯಾರಾದರೂ ಅರ್ಜೆಂಟಾಗಿ ಹಣ ಬೇಕಿದ್ದರೆ ಈ ಮೊದಲು ಎಟಿಎಂ ಗಳಿಗೆ ಹೋಗಿ ಹಣ ಪಡೆಯುತ್ತಿದ್ದರು, ಆದರೆ ಈಗ ಎಟಿಎಂಗಳಲ್ಲಿ ಹಣ ಸಿಗದೆ ಹಣಕ್ಕಾಗಿ ಪರಿದಾಡುವಂತಾಗಿದೆ, ನಗರದಲ್ಲಿ ಬಹುತೇಕ ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡು ಖಾಯಂ ಆಗಿ ಕಾಣುತ್ತಿದೆ ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಎಟಿಎಂನಲ್ಲಿ ಹಣವಿಲ್ಲ ಸೆಕ್ಯುರಿಟಿಗೆ ಕೆಲಸವಿಲ್ಲ

ಎಟಿಎಂನಲ್ಲಿ ಹಣವಿಲ್ಲ ಸೆಕ್ಯುರಿಟಿಗೆ ಕೆಲಸವಿಲ್ಲ

ಎಟಿಎಂಗಳು ಮಲಗಿಬಿಟ್ಟಿವೆ. ಹಣ ಇಲ್ಲ ಎಂಬ ಬೋರ್ಡ್ ನೇತು ಹಾಕಿಕೊಂಡಿರುವ ಎಟಿಎಂಗಳೇ ಬೆಂಗಳೂರಿನ ಬಹುತೇಕ ಕಡೆ ಕಾಣುತ್ತಿವೆ. ಅಯ್ಯೋ ಇದೇನು ಹಳೇ ಸುದ್ದಿ ಅಂತ ಕೇಳಬೇಡಿ. ಏಕೆಂದರೆ, ಈ ಸಮಸ್ಯೆ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮಾತ್ರ ಅಲ್ಲ. ದೇಶದ ನಾನಾ ರಾಜ್ಯಗಳ ಎಟಿಎಂಗಳಲ್ಲಿ ಹಣವಿಲ್ಲ ಎನ್ನುವ ಬೋರ್ಡ್ ಗಳೇ ಗ್ರಾಹಕರಿಗೆ ಸ್ವಾಗತ ಕೋರುತ್ತಿವೆ. ಕರ್ನಾಟಕ, ಆಂಧ್ರಪ್ರದೇಶ, ರಾಜಸ್ತಾನ, ಉತ್ತರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಹಾಗೂ ದೆಹಲಿಯಲ್ಲಿ ಎಟಿಎಂಗಳಲ್ಲಿ ಹಣ ಇಲ್ಲದೇ ಖಾಲಿ ಖಾಲಿಯಾಗಿದೆ. ಅದರ ಜತೆಗೆ ಸೆಕ್ಯುರಿಟಿಯೂ ಕೂಡ ಕೆಲಸವಿಲ್ಲದೆ ನಿದ್ದೆಗೆ ಜಾರಿದ್ದಾರೆ.

 ಸ್ವೀಡನ್ ಪ್ರಧಾನಿ ಜತೆ ಮೋದಿ ಮಾತುಕತೆ

ಸ್ವೀಡನ್ ಪ್ರಧಾನಿ ಜತೆ ಮೋದಿ ಮಾತುಕತೆ

ಸ್ವೀಡನ್ ರಾಜಧಾನಿ ಸ್ಟಾಕ್ ಹೋಂಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಮಂತ್ರ ಜಪಿಸಿದ್ದಾರೆ. ಸ್ವೀಡನ್ ಪ್ರಧಾನಿ ಸ್ಟೀಫನ್ ಲಾಫ್ ವೆನ್ ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ರಕ್ಷಣೆ, ಸೈಬರ್ ಸುರಕ್ಷತೆಗೆ ಟಾಸ್ಕ್ ಫೋರ್ಸ್ ರಚನೆ, ಪರಿಸರ ಸ್ನೇಹಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸಹಕಾರ ಒಪ್ಪಂದ ಏರ್ಪಟ್ಟಿದೆ. ಸ್ವೀಡನ್ ರಾಜ ಕಾರ್ಲ್ 16 ಗಸ್ಟಾಫ್ ಅವರನ್ನು ಭೇಟಿ ಮಾಡಿದ ಪ್ರಧಾನಿ, ಫಿನ್ ಲೆಂಡ್, ಡೆನ್ಮಾರ್ಕ್, ಐಸ್ ಲೆಂಡ್, ನಾರ್ವೆ ಮುಖಂಡರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತೀಯ ಸಮುದಾಯದೊಂದಿಗೆ ಸಂವಾದ, ಭಾರತ ನಾಡಿಕ್ ರಾಷ್ಟ್ರಗಳ ಮೊದಲ ಶೃಂಗ ಸಭೆಯೂ ಸೇರಿ ಸುಮಾರು 10 ಕಾರ್ಯಕ್ರಮಗಳಲ್ಲಿ ಮೋದಿಯವರು ಪಾಲ್ಗೊಂಡಿದ್ದರು. ಸ್ಮಾರ್ಟ್ ಸಿಟಿ, ವಸತಿ, ನವೀಕರಿಸಬಹುದಾದ ಇಂಧನ , ಇ-ಮೊಬಿಲಿಟಿ, ಸ್ಟಾರ್ಟಪ್ , ತ್ಯಾಜ್ಯ ವಿಲೇವಾರಿ ಸಹಿತ ಅನೇಕ ವಲಯಗಳಲ್ಲಿ ಪರಸ್ಪರ ಸಹಕಾರಕ್ಕೆ ವಿಫುಲ ಅವಕಾಶಗಳಿವೆ ಎಂದರು. ಇನ್ನು ಏಪ್ರಿಲ್ 17ರಂದು, ದೇಶ ವಿದೇಶದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಚಿತ್ರ ಸಮೇತ ನೋಡಬಹುದಾಗಿದೆ.

 ಸ್ವೀಡನ್ ಪ್ರಧಾನಿ ಹಾಗೂ ಉದ್ಯಮಿಗಳ ಜತೆಗೆ ಮೋದಿ

ಸ್ವೀಡನ್ ಪ್ರಧಾನಿ ಹಾಗೂ ಉದ್ಯಮಿಗಳ ಜತೆಗೆ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವೀಡನ್ ರಾಜಧಾನಿ ಸ್ಟಾಕ್ ಹೋಂಮ್ ಗೆ ಮಂಗಳವಾರ ತೆರಳಿದ್ದರು. ಸ್ವೀಡನ್ ಪ್ರಧಾನಿ ಸ್ಟೀಫನ್ ಲಾಫ್ ವೆನ್ ಹಾಗೂ ಪ್ರಮುಖ ಉದ್ಯಮಿಗಳ ಜತೆಗೆ ನಡೆದ ರೌಂಡ್ ಟೇಬಲ್ ಕಾನ್ಫರೆನ್ಸ್ ಬಳಿಕ ಫೋಟೊವೊಂದರಲ್ಲಿ ಕಾಣಿಸಿಕೊಂಡಿದ್ದು ಹೀಗೆ.

ಸ್ವೀಡನ್ ರಾಜಧಾನಿ ಸ್ಟಾಕ್ ಹೋಂಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಮಂತ್ರ ಜಪಿಸಿದ್ದಾರೆ. ಸ್ವೀಡನ್ ಪ್ರಧಾನಿ ಸ್ಟೀಫನ್ ಲಾಫ್ ವೆನ್ ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ರಕ್ಷಣೆ, ಸೈಬರ್ ಸುರಕ್ಷತೆಗೆ ಟಾಸ್ಕ್ ಫೋರ್ಸ್ ರಚನೆ, ಪರಿಸರ ಸ್ನೇಹಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸಹಕಾರ ಒಪ್ಪಂದ ಏರ್ಪಟ್ಟಿದೆ.

ಹೊಸ ಆವಿಷ್ಕಾರ ನಡೆಸಲು ಜಂಟಿ ಕ್ರಿಯಾ ಯೋಜನೆಗೂ ಉಭಯ ನಾಯಕರು ಸಮ್ಮತಿಸಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೂಡಿಕೆ ಮಾಡುವಂತೆ ಅಲ್ಲಿನ ಉದ್ಯಮಿಗಳಿಗೆ ಅವರು ಕರೆ ನೀಡಿದ್ದಾರೆ, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಉಭಯ ದೇಶಗಳ ಮಧ್ಯೆ ರಕ್ಷಣಾ ಕ್ಷೇತ್ರ ಒಪ್ಪಂದ ಮಹತ್ವದ್ದಾಗಿದೆ.

 ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಲೈಟ್ ಮಾರ್ಚ್

ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಲೈಟ್ ಮಾರ್ಚ್

ವಿವಿಧ ಧರ್ಮದ ಮುಖಂಡರು ಇತ್ತೀಚೆಗೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ಕೊಲ್ಕತ್ತದ ಸೇಂಟ್ ಪೌಲ್ ಚರ್ಚ್ ಎದುರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು. ಇತ್ತೀಚೆಗೆ ಕತುವಾ-ಉನ್ನಾವೋ ಅತ್ಯಾಚಾರ ಪ್ರಕರಣ ಸಂಭವಿಸಿತ್ತು. ಅತ್ಯಾಚಾರ ವಿರುದ್ಧ ಶ್ರೀನರ, ಬೆಂಗಳೂರು, ನವದೆಹಲಿ, ಚೆನ್ನೈನಲ್ಲಿ ಪ್ರತಿ ದಿನವೂ ಪ್ರತಿಭಟನೆ ನಡೆಯುತ್ತಲೇ ಇದೆ. ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
here could be a combination of factors. Some of these include the printing of Rs 2000 notes in smaller numbers, the conversion of Rs 2000 cassettes in ATMs to Rs 200 cassettes, which has reduced the machines’ cash-carrying capacity; hoarding of cash by the public ahead of festivals; a mismatch between the growth of currency in circulation with the growth in economic activity in the 18 months since demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more