ಸಿವೋಟರ್ ಸಮೀಕ್ಷೆ: ನಿತೀಶ್-ಲಾಲೂ ಮಹಾಕೂಟಕ್ಕೆ ಗೆಲುವು
ನವದೆಹಲಿ, ನ.05: ಬಿಹಾರದ ವಿಧಾನಸಭಾ ಚುನಾವಣೆಯ ಐದು ಹಂತಗಳ ಮತದಾನ ಗುರುವಾರ ಮುಕ್ತಾಯವಾಗಿದೆ. ನವೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆ ವರದಿಗಳು ಬಂದಿದ್ದು, ಟೈಮ್ಸ್ ನೌ ಸಿವೋಟರ್ ಸಮೀಕ್ಷೆಯಂತೆ ನಿತೀಶ್- ಲಾಲೂ ಮಹಾಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ನೆಲಕಚ್ಚಲಿದೆ ಎಂದು ಸಿವೋಟರ್ ಸಮೀಕ್ಷೆ ಹೇಳಿದೆ.

ಜೆಡಿಯು- ಆರ್ ಜೆಡಿ-ಕಾಂಗ್ರೆಸ್ ಮಹಾಮೈತ್ರಿಕೂಟಕ್ಕೆ 122 ಸ್ಥಾನಗಳು ಲಭಿಸಲಿದ್ದು, ಶೇ 42ರಷ್ಟು ಮತಗಳನ್ನು ಸೆಳೆಯಲಿದೆ. 243 ಸದಸ್ಯರ ಬಿಹಾರ ವಿಧಾನಸಭೆಯಲ್ಲಿ 122 ಪ್ಲಸ್ ಸ್ಥಾನ ಬಂದರೆ ಮಾತ್ರ ಬಹುಮತ ಸಾಬೀತುಪಡಿಸಲು ಸಾಧ್ಯ.[ಭಾರೀ ಕುತೂಹಲ ಹುಟ್ಟುಹಾಕಿದ 3 ಸಮೀಕ್ಷೆ]
ಬಿಜೆಪಿ ನೇತೃತ್ವದ ಎನ್ ಡಿಎ 111 ಸ್ಥಾನ ಪಡೆಯಲಿದೆ ಶೇ 41ರಷ್ಟು ಮತ ಪಡೆಯಲಿದೆ.ಶೇ 17ರಷ್ಟು ಮತಪಾಲು ಹೊಂದುವ ಮೂಲಕ 10 ಸ್ಥಾನಗಳು ಪಕ್ಷೇತರರ ಪಾಲಾಗಲಿದೆ ಎಂದು ಟೈಮ್ಸ್ ನೌ ಸಿವೋಟರ್ ಹೇಳಿದೆ. 2014ರ ಲೋಕಸಭೆ ಚುನಾವಣೆ ನಂತರ ಶೇ 12ರಷ್ಟು ಮತಪಾಲು ಸೆಳೆಯುವ ಮೂಲಕ 71 ಸ್ಥಾನಗಳನ್ನು ಹೆಚ್ಚಿಗೆ ಪಡೆದುಕೊಂಡಿದೆ.
ಜೆಡಿಯು ಮೈತ್ರಿಕೂಟ
ಜೆಡಿಯು : 63-71
ಆರ್ ಜೆಡಿ: 43-51
ಕಾಂಗ್ರೆಸ್ : 06-10
ಇತರೆ: 06-14
ಎನ್ ಡಿಎ
ಬಿಜೆಪಿ : 87-95
ಎಲ್ ಜೆಪಿ : 05-19
ಎಚ್ಎಎಂ: 07-11
ಆರ್ ಎಲ್ ಎಸ್ ಪಿ-02-06
ಉಳಿದಂತೆ,
* ಇಂಡಿಯಾ ಟಿವಿ ಎಕ್ಸಿಟ್ ಪೋಲ್ ಸಮೀಕ್ಷೆಯಂತೆ ಬಿಜೆಪಿ +: 101-121; ಜೆಡಿಯು+: 112-132; ಇತರೆ : 6-14
* ಐಟಿಜಿ ಸಿಸಿರೋ ಸಮೀಕ್ಷೆ: ಬಿಜೆಪಿ +: 113-127; ಜೆಡಿಯು+: 111-123; ಇತರೆ : 4-8.
(ಒನ್ ಇಂಡಿಯಾ ಸುದ್ದಿ)












Click it and Unblock the Notifications