30 ಕೋಟಿ ಆದ್ಯತೆಯ ಲಸಿಕೆ ವಿತರಣೆಗೆ ಮತಗಟ್ಟೆಗಳಂತಹ ಸೌಲಭ್ಯ ಸ್ಥಾಪನೆ

ನವದೆಹಲಿ, ನವೆಂಬರ್ 25: ಕೊರೊನಾ ವೈರಸ್ ಲಸಿಕೆ ಲಭ್ಯವಾದ ಬಳಿಕ ಆದ್ಯತೆ ಆಧಾರದಲ್ಲಿ ಲಸಿಕೆ ನೀಡಲು ಸುಮಾರು 30 ಕೋಟಿ ಜನರನ್ನು ಅತ್ಯಧಿಕ ತೊಂದರೆಯಲ್ಲಿರುವ ಗುಂಪು ಎಂದು ವರ್ಗೀಕರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಈ ಸರದಿಯ ಮುಂಚೂಣಿಯಲ್ಲಿದ್ದು, ಬಳಿಕ 65 ವರ್ಷ ಮೇಲ್ಪಟ್ಟ ಜನರು ಇದ್ದಾರೆ. ಬಳಿಕ ಇತರೆ ಅನಾರೋಗ್ಯಗಳಿಂದ ಬಳಲುತ್ತಿರುವವರು ಇದ್ದಾರೆ.

ಮಂಗಳವಾರ ಮುಖ್ಯಮಂತ್ರಿಗಳಿಗೆ ಲಸಿಕೆ ವಿತರಣೆಯ ರೂಪುರೇಷೆಯನ್ನು ವಿವರಿಸಿದ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್, ಲಸಿಕೆ ಕೇಂದ್ರಗಳಿಗಾಗಿ ಚುನಾವಣೆಯ ಮತಗಟ್ಟೆಗಳಂತೆ ತಂಡಗಳನ್ನು ರಚಿಸಲಾಗುತ್ತದೆ. ಬ್ಲಾಕ್ ಮಟ್ಟದ ಕಾರ್ಯತಂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ತರಬೇತಿಗಳಿಗಾಗಿ ಸರ್ಕಾರಿ ಮತ್ತು ಖಾಸಗಿ ವೈದ್ಯರು ವಿಶೇಷ ಜವಾಬ್ದಾರಿ ಮತ್ತು ಪ್ರಯತ್ನಗಳನ್ನು ನಡೆಸಬೇಕಾಗುತ್ತದೆ ಎಂದು ಹೇಳಿದರು.

ಕಳೆದ ಒಂದು ವಾರದಿಂದ ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ಅತ್ಯಧಿಕ ಪಾಸಿಟಿವ್ ಪರೀಕ್ಷೆ ವರದಿ ಮತ್ತು ಸಾವುಗಳು ಸಂಭವಿಸುತ್ತಿರುವುದರ ಬಗ್ಗೆ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಕಳವಳ ವ್ಯಕ್ತಪಡಿಸಿದರು.

Niti Aayog Member VK Paul Says Poll Booth Like Teams To Vaccinate 30 Crore On A Priority

ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಸರಾಸರಿ 111 ಸಾವುಗಳು ವರದಿಯಾಗುತ್ತಿದೆ. ರಾಜಸ್ಥಾನದಲ್ಲಿ ಶೇ 21ರಷ್ಟು ಪರೀಕ್ಷೆ ಪಾಸಿಟಿವ್ ವರದಿ ಬಂದಿದೆ. ಕೇರಳದಲ್ಲಿ ಶೇ 15.3 ಮತ್ತು ದೆಹಲಿಯಲ್ಲಿ ಶೇ 13.5ರಷ್ಟು ಪಾಸಿಟಿವ್ ಪ್ರಮಾಣವಿದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ ಶೇಕಡಾವಾರು ಪಾಸಿಟಿವಿಟಿ ಪ್ರಮಾಣ ಶೇ 8.2ಕ್ಕೆ ಕಡಿಮೆಯಾಗಿದ್ದರೂ ಸರಾಸರಿ 93 ಸಾವುಗಳು ವರದಿಯಾಗುತ್ತಿವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+