ದೇಶದ 30 ಕೋಟಿ ಜನರಿಗೆ ಮಾತ್ರ ಉಚಿತ ಲಸಿಕೆ, ಎಲ್ಲರಿಗೂ ಅಲ್ಲ

ನವದೆಹಲಿ, ಜನವರಿ 2: ದೇಶದಲ್ಲಿ ಸುಮಾರು 30 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿಭಾಯಿಸಲಿದೆ ಎಂದು ನೀತಿ ಆಯೋಗದ ಸದಸ್ಯ ಮತ್ತು ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ವಿನೋದ್ ಪಾಲ್ ತಿಳಿಸಿದ್ದಾರೆ. ಲಸಿಕೆ ಕಾರ್ಯಕ್ರಮದ ಮೊದಲ ಹಂತದಲ್ಲಿನ 30 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಅನಾರೋಗ್ಯಪೀಡಿತರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ.

ಮುಂದಿನ 6-8 ತಿಂಗಳವರೆಗೆ ಮುಂಚೂಣಿ ಕಾರ್ಯಕರ್ತರು, ಮುಖ್ಯವಾಗಿ ಆರೋಗ್ಯ ಕಾಳಜಿ ಕಾರ್ಯಕರ್ತರು ಮತ್ತು ವೃದ್ಧರನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗುತ್ತದೆ. ಪ್ರತಿ ಮೂಲೆಗೂ ಲಸಿಕೆ ಲಭ್ಯವಾಗುವಂತೆ ಪೂರೈಕೆ ಮಾಡಲು 31 ಹಬ್‌ಗಳನ್ನು ಸ್ಥಾಪಿಸಲಾಗಿದ್ದು, 29,000 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋವಿಡ್ ಲಸಿಕೆಗಳ ವಿತರಣೆಗೆ ಅಗತ್ಯವಾದ ಸಕಲ ಸಿದ್ಧತೆಗಳನ್ನು ಕೂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಔಷಧ ಕ್ಷೇತ್ರ, ಸರ್ಕಾರ ಮತ್ತು ಉತ್ಪಾದಕರು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಅನುಷ್ಠಾನ ವಿಭಾಗಗಳು ಪ್ರತಿಯೊಬ್ಬರೊಂದಿಗೂ ಹೊಂದಾಣಿಕೆ ಮಾಡುವ ಕೆಲಸದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

Niti Aayog Member Vinod Paul Says Govt Will Cover Vaccination Cost Of 30 Crore People

ರಾಷ್ಟ್ರವ್ಯಾಪಿ ಆರೋಗ್ಯ ಕಾರ್ಯಕರ್ತರನ್ನು ತಕ್ಷಣದ ಚುಚ್ಚುಮದ್ದು ಹಂತದಲ್ಲಿ ಪರಿಗಣಿಸಲಾಗುತ್ತದೆ. ಮೊದಲು 300 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗುತ್ತದೆ. ಇತರೆ ಗುಂಪುಗಳನ್ನು ಕೂಡ ಇದರೊಳಗೆ ಸೇರಿಸಿಕೊಳ್ಳಲು ಸರ್ಕಾರ ಗಮನ ಹರಿಸಿದೆ ಎಂದಿದ್ದಾರೆ.

ಆದ್ಯತೆಯ ಗುಂಪುಗಳು 300 ಮಿಲಿಯನ್ ವ್ಯಕ್ತಿಗಳನ್ನು ಒಳಗೊಂಡಂತೆ ಗುರುತಿಸಲಾಗಿದೆಯೇ ವಿನಾ, ಇಡೀ ಜನಸಂಖ್ಯೆಯನ್ನಲ್ಲ. ಅಧಿಕ ಅಪಾಯವಿರುವ ಜನರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+