NIRF Ranking 2023: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿಗೆ 2ನೇ ಸ್ಥಾನ
ಬೆಂಗಳೂರು ಜೂನ್ 5: ಇಂಡಿಯನ್ ಆಫ್ ಟೆಕ್ನಾಲಜಿ ಮದ್ಸಾಸ್ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಕಳೆದ ಕೆಲವು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ದೇಶದ ಎರಡನೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಸ್ಥಾನ ಪಡೆದುಕೊಂಡಿದೆ.
ಈ ಬಾರಿ ದೇಶದ 8,686 ಶಿಕ್ಷಣ ಸಂಸ್ಥೆಗಳು ಈ ರ್‍ಯಾಂಕಿಂಗ್ ಪೈಪೋಟಿಯಲ್ಲಿ ಭಾಗಿಯಾಗಿದ್ದವು. ಒಟ್ಟು 12 ವಿಭಾಗಗಳಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಾಜ್‌ಕುಮಾರ್ ರಾಜನ್ ಸಿಂಗ್ ಸೋಮವಾರ ರಾಷ್ಟ್ರೀಯ ಸಾಂಸ್ಥಿಕ ರ್‍ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ದೆಹಲಿ ಐಐಟಿ ಪಡೆದುಕೊಂಡಿದೆ.

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ 14 ಸ್ಥಾನ ಪಡೆದುಕೊಂಡಿದ್ದರೆ, ಸುರತ್ಕಲ್‌ನ ಎನ್‌ಐಟಿ 33 ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 33 ಸ್ಥಾನ ಪಡೆದುಕೊಂಡಿದ್ದ ಮೈಸೂರು ವಿಶ್ವವಿದ್ಯಾಲಯ ಈ ಬಾರಿ 47 ಸ್ಥಾನಕ್ಕೆ ಕುಸಿದಿದೆ.
ಇನ್ನೂ ಎನ್‌ಐಆರ್‌ಎಫ್ ಕಾನೂನು ರ್‍ಯಾಂಕಿಂಗ್್ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಶೋಧನಾ ರ್‍ಯಾಂಕಿಂಗ್್ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮೊದಲ ಸ್ಥನವನ್ನು ಕಾಪಾಡಿಕೊಂಡಿದೆ.
ಜೊತೆಗೆ ಎನ್‌ಐಆರ್‌ಎಫ್ ಮ್ಯಾನೇಜ್‌ಮೆಂಟ್ ರ್‍ಯಾಂಕಿಂಗ್್ನಲ್ಲಿ ಬೆಂಗಳೂರು ಐಐಎಂ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲಹಾಬಾದ್ ಐಐಎಂ ಮೊದಲ ಸ್ಥಾನ ಪಡೆದುಕೊಂಡಿದೆ. ದೇಶದ ಅತ್ಯುತ್ತಮ ಡೆಂಟಲ್ ಕಾಲೇಜುಗಳ ಪಟ್ಟಿಯಲ್ಲಿ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಐದನೇ ಸ್ಥಾನ ಪಡೆದುಕೊಂಡಿದೆ.
ಐಐಟಿ ಮದ್ರಾಸ್ ಅಗ್ರಸ್ಥಾನದಲ್ಲಿದ್ದು, ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕಗಳನ್ನು ಪಡೆದುಕೊಂಡಿವೆ. ಐಐಟಿ ಕಾನ್ಪುರ ಮತ್ತು ಐಐಟಿ ಖರಗ್‌ಪುರ ಕೂಡ ತಮ್ಮ ಹಿಂದಿನ ವರ್ಷಗಳ ಶ್ರೇಯಾಂಕದಲ್ಲಿ ನಾಲ್ಕು ಮತ್ತು ಐದನೇ ಸ್ಥಾನವನ್ನು ಉಳಿಸಿಕೊಂಡಿವೆ. ಐಐಟಿ ರೂರ್ಕಿ ಆರನೇ ಸ್ಥಾನದಲ್ಲಿದ್ದರೆ ಐಐಟಿ ಗುವಾಹಟಿ ಏಳನೇ ಸ್ಥಾನದಲ್ಲಿದೆ. ಐಐಟಿ ಹೈದರಾಬಾದ್ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ 2021 ರ ಶ್ರೇಯಾಂಕದಂತೆ ಹತ್ತನೇ ಸ್ಥಾನವನ್ನು ಉಳಿಸಿಕೊಂಡಿದೆ.
ಜಾದವ್‌ಪುರ ವಿಶ್ವವಿದ್ಯಾಲಯ, ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ಬಿಎಚ್‌ಯು, ಐಐಟಿ ಧನ್‌ಬಾದ್, ಎನ್‌ಐಟಿ ರೂರ್ಕೆಲಾ, ಐಐಟಿ ಇಂದೋರ್, ಅಣ್ಣಾ ವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಅಮೃತ ವಿಶ್ವ ವಿದ್ಯಾಪೀಠಂ ಮತ್ತು ಐಐಟಿ ಮಂಡಿ ಕಳೆದ ವರ್ಷ ಕ್ರಮವಾಗಿ 11 ರಿಂದ 20 ನೇ ಶ್ರೇಯಾಂಕದಲ್ಲಿ ಕಾಣಿಸಿಕೊಂಡವು.












Click it and Unblock the Notifications