ಲಂಡನ್ ನಿಂದ ಬ್ರಸೆಲ್ಸ್ ಗೆ ಪರಾರಿಯಾದ ನೀರವ್ ಮೋದಿ

ಲಂಡನ್, ಜೂನ್ 14: ತಲೆ ಮರೆಸಿಕೊಂಡಿರುವ ಉದ್ಯಮಿ, ಪಿಎನ್ ಬಿ ಬ್ಯಾಂಕ್ ಹಗರಣದ ರೂವಾರಿ ನೀರವ್ ಮೋದಿ ಲಂಡನ್ ನಿಂದ ಬ್ರಸೆಲ್ಸ್ ಗೆ ಹಾರಿದ್ದಾರೆ. ಅವರ ಬಳಿಯಲ್ಲಿ ಭಾರತದ ಪಾಸ್ಪೋರ್ಟ್ ಇಲ್ಲ. ಹೀಗಿದ್ದೂ ಅವರು ತಮ್ಮ ಬಳಿಯಲ್ಲಿದ್ದ ಸಿಂಗಾಪುರ ಪಾಸ್ಪೋರ್ಟ್ ಬಳಸಿ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ.

ನೀರವ್ ಮೋದಿ ಲಂಡನ್ ನಲ್ಲಿ ರಾಜಕೀಯ ಆಶ್ರಯ ಬಯಸಿದ್ದಾರೆ ಎಂಬುದು ಸುದ್ದಿಯಾಗಿತ್ತು. ಇದಾದ ಬಳಿಕ ಅವರು ಲಂಡನ್ ತೊರೆದಿದ್ದಾರೆ. ಅವರಿಗೆ ಬ್ರಿಟನ್ ನಿಂದ ಒಳಗೆ ಮತ್ತು ಹೊರಗೆ ಆರಾಮವಾಗಿ ತಿರುಗಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಸಿಬಿಐ ನೀರವ್ ಮೋದಿ ಮತ್ತು ಆತನ ಸಹೋದರ ನಿಶಾಲ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್ ಪೋಲ್ ಗೆ ಮನವಿ ಮಾಡಿತ್ತು. ಜೊತೆಗೆ ಮಂಗಳವಾರ ಮುಂಬೈನ ವಿಶೇಷ ನ್ಯಾಯಾಲಯ ನೀರವ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

Nirav Modi flees from London, lands in Brussels

ಇದೀಗ ಅವರು ಮಂಗಳವಾರ ಅಥವಾ ಬುಧವಾರ ಬ್ರಸೆಲ್ಸ್ ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಭಾರತ ಸರಕಾರದ ಮೂಲಗಳು ಹೇಳಿವೆ. ಭಾರತ ತನ್ನ ಪಾಸ್ಪೋರ್ಟ್ ಮೇಲೆ ಯಾವುದೇ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಆದರೆ ಅವರು ಸಿಂಗಾಪುರದ ಪಾಸ್ಪೋರ್ಟ್ ಬಳಸುತ್ತಿದ್ದರೆ ಭಾರತ ಏನೂ ಮಾಡಲು ಸಾಧ್ಯವಿಲ್ಲ.

ಅವರು ಯಾವ ಪಾಸ್ಪೋರ್ಟ್ ಬಳಸುತ್ತಿದ್ದಾರೆ ತಿಳಿದಿಲ್ಲ. ನಮ್ಮ ಪ್ರಕಾರ ಅವರು ಬ್ರಿಟನ್ ಗೆ ಬಂದು ಹೋಗುತ್ತಿದ್ದಾರೆ. ಅವರು ಯಾವ ಪಾಸ್ಪೋರ್ಟ್ ಬಳಸುತ್ತಿದ್ದಾರೆ ಎಂಬುದು ಬ್ರಿಟನ್ ಇಮಿಗ್ರೇಷನ್ ನವರಿಗೆ ಮಾತ್ರ ತಿಳಿದಿದೆ ಎಂದು ಭಾರತದ ರಾಯಭಾರ ಕಚೇರಿಯ ಮೂಲಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+