Nikhil Kamath: ರಿಯಾ ಜೊತೆ ₹18 ಲಕ್ಷದ ಬೈಕ್‌ನಲ್ಲಿ ನಿಖಿಲ್ ಕಾಮತ್ ರೈಡ್; ಇನ್ಸುರೆನ್ಸ್ ಅವಧಿ ಮುಗಿದಿದೆ ಎಂದ ನೆಟ್ಟಿಗರು

ಝೆರೋಧಾ ಸಹ-ಸಂಸ್ಥಾಪಕರಾದ 37 ವರ್ಷದ ನಿಖಿಲ್ ಕಾಮತ್ ಮುಂಬೈನಲ್ಲಿ ಐಷಾರಾಮಿ ಬೈಕ್‌ ಓಡಿಸುತ್ತಿರುವ ದೃಶ್ಯ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ. ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಜೊತೆ ನಿಖಿಲ್ ಕಾಮತ್ 18 ಲಕ್ಷ ಮೌಲ್ಯದ ಬೈಕ್‌ನಲ್ಲಿ ಮುಂಬೈನ ಬೀದಿಗಳಲ್ಲಿ ಓಡಾಡುತ್ತಿರುವ ದೃಶ್ಯಗಳು ವೈರಲ್ ಆಗುತ್ತಿದ್ದು, ಕೆಲವು ಇಂಟರ್ನೆಟ್ ಬಳಕೆದಾರರು ಬೈಕ್‌ನ ಇನ್ಸುರೆನ್ಸ್ ಅವಧಿ ಮುಗಿದಿದೆ ಎನ್ನುವುದನ್ನು ಪತ್ತೆಹಚ್ಚಿದ್ದಾರೆ.

ಎರಡು ದಿನಗಳ ಹಿಂದೆ ವಿಡಿಯೋ ವೈರಲ್ ಆಗಿದ್ದು , ನಿಖಿಲ್ ಕಾಮತ್ ಮುಂಬೈನ ಬಾಂದ್ರಾದಲ್ಲಿ ಸುಜುಕಿ ಇಂಟ್ರುಡರ್ VZR 1800 ZL2 ಬೈಕ್‌ ಓಡಿಸುತ್ತಿರುವುದು ಕಂಡುಬಂದಿದೆ. ತಮ್ಮ ಗುರುತನ್ನು ಮರೆಮಾಚರು ನಿಖಿಲ್ ಕಾಮತ್ ಮಾಸ್ಕ್ ಹಾಕಿಕೊಂಡಿದ್ದಾರೆ. ಹಿಂದೆ ಕೂತಿದ್ದ ರಿಯಾ ಚಕ್ರವರ್ತಿ ಜೊತೆ ಅವರು ಮಾತನಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

Nikhil Kamath Rides 18 Lakh Bike Without Valid Insurance in Mumbai

ಬೈಕ್ ಸ್ವಂತದ್ದಾ ಬಾಡಿಗೆಯದ್ದಾ?

ಸೋಶಿಯಲ್ ಮೀಡಿಯಾ ಬಳಕೆದಾರರು ಬೈಕ್‌ನ ನಂಬರ್ ಪ್ಲೇಟ್‌ ಅನ್ನು ಗಮನಿಸಿ ಹೆಚ್ಚಿನ ಮಾಹಿತಿ ಹೊರತೆಗೆದಿದ್ದಾರೆ. ಬೈಕ್‌ನ ವಿಮೆ ಕಳೆದ ವರ್ಷ ಮುಗಿದಿದೆ ಎಂದು ಎಕ್ಸ್ ಬಳಕೆದಾರರು ಕಂಡುಹಿಡಿದಿದ್ದಾರೆ. ನಿಖಿಲ್ ಕಾಮತ್ ಮುಂಬೈನಲ್ಲಿ ಬೈಕ್‌ ಅನ್ನು ಬಾಡಿಗೆಗೆ ಪಡೆದಿದ್ದಾರ ಅಥವಾ ಸ್ವಂತದ್ದಾ ಎನ್ನುವ ಪ್ರಶ್ನೆಗೆ ಮತ್ತೊಬ್ಬ ಎಕ್ಸ್ ಬಳಕೆದಾರ ಪ್ರತಿಕ್ರಿಯೆ ನೀಡಿದ್ದು, ನಿಖಿಲ್ ಕಾಮತ್ ಬೈಕ್‌ನ ಮಾಲೀಕ ಎಂದು ಬಹಿರಂಗಪಡಿಸಿದ್ದು, ಇನ್ಸುರೆನ್ಸ್ ಅವಧಿ ಮುಗಿದಿರುವುದನ್ನು ಗುರುತಿಸಿದ್ದಾರೆ.

VZR 1800 ZL2 ಇಂಟ್ರುಡರ್ ಸುಜುಕಿ ಬೈಕ್ ಐಷಾರಾಮಿ ಬೈಕ್‌ಗಳಲ್ಲಿ ಒಂದಾಗಿದೆ. ಇದನ್ನು ಸುಜುಕಿ ಇಂಟ್ರುಡರ್ M1800R ಎಂದು ಕೂಡ ಕರೆಯಲಾಗುತ್ತದೆ. ಭಾರತದಲ್ಲಿ ₹15.95 ಲಕ್ಷದಿಂದ ₹16.45 ಲಕ್ಷ ಬೆಲೆ ಇದ್ದು ಆನ್‌ರೋಡಡ್ ಪ್ರೈಸ್ 18 ಲಕ್ಷ ರೂಪಾಯಿ ಮೀರುತ್ತದೆ. ಸದ್ಯ ಭಾರತದಲ್ಲಿ ಈ ಬೈಕ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಕಾರ್‌ಇನ್‌ಫೋ ಆ್ಯಪ್‌ ನೀಡಿರುವ ಮಾಹಿತಿಯ ಪ್ರಕಾರ ನಿಖಿಲ್ ಕಾಮತ್‌ 2012ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಬೈಕ್‌ ನೋಂದಣಿ ಮಾಡಿದ್ದಾರೆ. ಇದರ ವಿಮೆ ಜುಲೈ 2023 ರಲ್ಲಿ ಕೊನೆಗೊಂಡಿದೆ.

ನಿಖಿಲ್ ಕಾಮತ್ ಬ್ರೋಕರೇಜ್ ಸಂಸ್ಥೆಯಾದ ಝೆರೋಧಾ ಸಹ ಸಂಸ್ಥಾಪಕರಾಗಿದ್ದಾರೆ. ಅವರ ಸಹೋದರ ನಿತಿನ್ ಕಾಮತ್ 2010 ರಲ್ಲಿ ಝೆರೋದಾವನ್ನು ಸ್ಥಾಪನೆ ಮಾಡಿದರು.

ನಿಖಿಲ್ ಕಾಮತ್ ಅವರು ಸ್ವಂತ ಮನೆ ಹೊಂದುವುದಕ್ಕಿಂತ ಬಾಡಿಗೆ ಮನೆಯಲ್ಲಿರುವುದು ಲಾಭದಾಯಕ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು. ಸ್ವಂತ ಮನೆಗೆ ಹಾಕುವ ಬಂಡವಾಳ, ನಿರ್ವಹಣಾ ವೆಚ್ಚದ ಬದಲಿಗೆ ಬಾಡಿಗೆ ಮನೆಯಲ್ಲಿ ಅದಕ್ಕಿಂತ ಕಡಿಮೆ ಹಣದಲ್ಲಿ ಜೀವನ ನಡೆಸಬಹುದು ಎಂದು ವಾದಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+