ಉಗ್ರ ನವೀದ್‌ ಬಗ್ಗೆ ಮಾಹಿತಿ ಕೊಡಿ ಪಾಕ್‌ಗೆ ಪತ್ರ

ಬೆಂಗಳೂರು, ಆಗಸ್ಟ್ 12 : ಉದಾಂಪುರ್‌ನಲ್ಲಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ನವೀದ್‌ ಬಗ್ಗೆ ಮಾಹಿತಿ ನೀಡುವಂತೆ ಎನ್‌ಐಎ ಪಾಕಿಸ್ತಾನಕ್ಕೆ ಪತ್ರ ಬರೆದಿದೆ. ಆದರೆ, ಇದುವರೆಗೂ ಪಾಕಿಸ್ತಾನ ನವೀದ್ ನಮ್ಮ ದೇಶದ ಪ್ರಜೆಯಲ್ಲ ಎಂದು ಹೇಳುತ್ತಲೇ ಬಂದಿದೆ.

ಉಗ್ರ ನವೀದ್‌ನನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದೆ. ಇದರ ನಡುವೆಯೇ ನವೀದ್ ಮನೆ, ಕುಟುಂಬ ಸದಸ್ಯರು ಮುಂತಾದ ಮಾಹಿತಿಗಳನ್ನು ನೀಡುವಂತೆ ಕೋರಿ ಪಾಕಿಸ್ತಾನಕ್ಕೆ ಪತ್ರ ಬರೆಯಲಾಗಿದೆ. [ಉಗ್ರ ನವೀದ್ NIA ವಶಕ್ಕೆ]

mohammad naved

ಜಮ್ಮು-ಕಾಶ್ಮೀರದಲ್ಲಿ ಬಿಎಸ್‌ಎಫ್ ಪಡೆಗಳ ಮೇಲೆ ಉಗ್ರ ನವೀದ್ ದಾಳಿ ಮಾಡಿ ಸಿಕ್ಕಿಬಿದ್ದ ನಂತರ ಆತ ಪಾಕ್‌ಗೆ ಸೇರಿದವನು ಎಂದು ಗೊತ್ತಾಗಿತ್ತು. ಆದರೆ, ಪಾಕಿಸ್ತಾನ ಮಾತ್ರ ಆತ ನಮ್ಮ ದೇಶದ ಪ್ರಜೆಯಲ್ಲ ಎಂದು ಹೇಳುತ್ತಿದೆ. [ನವೀದ್ ಬಾಲಾಪರಾಧಿ ಎಂದು ಸಾಬೀತಾದರೆ?]

26/11ರ ಮುಂಬೈ ದಾಳಿಯ ಸಂದರ್ಭದಲ್ಲಿಯೂ ಭಾರತ ಉಗ್ರರ ಬಗ್ಗೆ ಮಾಹಿತಿ ಕೇಳಿದಾಗ ಪಾಕ್ ಸೂಕ್ತ ಸಾಕ್ಷಿಗಳನ್ನು ಕೊಟ್ಟಿರಲಿಲ್ಲ. ಈಗಲೂ ಪಾಕ್ ಅದೇ ಮಾತನ್ನು ಹೇಳುತ್ತಿದೆ. ನಮ್ಮಲ್ಲಿರುವ ಮಾಹಿತಿ ಪ್ರಕಾರ ನವೀದ್ ಎನ್ನುವವರು ಫೈಸ್ಲಾಬಾದ್‌ನಲ್ಲಿ ವಾಸವಾಗಿಲ್ಲ ಎಂದು ಹೇಳಿದೆ.

ಉಗ್ರ ನವೀದ್‌ನನ್ನು ಎನ್‌ಐಎ ವಶಕ್ಕೆ ಒಪ್ಪಿಸಿ ರಾಷ್ಟ್ರೀಯ ತನಿಖಾ ದಳದ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ. ಪಾಕಿಸ್ತಾನ ಉಗ್ರನ ಬಗ್ಗೆ ಮಾಹಿತಿ ನೀಡುವುದೇ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+