Get Updates
Get notified of breaking news, exclusive insights, and must-see stories!

ಐಎಸ್‌ಐಎಸ್‌ ಮಾದರಿ ಶಂಕೆ : ಕಾರಸಗೋಡಿನಲ್ಲಿ ಎನ್‌ಐಎ ಶೋಧ

ಕಾಸರಗೋಡು, ಏಪ್ರಿಲ್ 28 : ರಾಷ್ಟ್ರೀಯ ತನಿಖಾ ದಳ ಕಾಸರಗೋಡಿನ ಹಲವು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದೆ. ಐಎಎಸ್ಐಎಸ್ ಉಗ್ರ ಸಂಘಟನೆ ಜೊತೆ ಮೂವರು ನಂಟು ಹೊಂದಿರುವ ಶಂಕೆ ಮೇಲೆ ಹುಡುಕಾಟ ನಡೆಸಲಾಗಿದೆ.

ಮೂವರು ಕೇರಳದಿಂದ ಐಎಸ್‌ಐಎಸ್ ಉಗ್ರ ಸಂಘಟನೆ ಸೇರಲು ಹೋಗಿದ್ದಾರೆ ಎಂಬ ಆರೋಪವಿದೆ. ಈ ಮೂವರೊಂದಿಗೆ ಕೆಲವರು ನಂಟು ಹೊಂದಿದ್ದಾರೆ ಎಂಬ ಮಾಹಿತಿ ಅನ್ವಯ ಎಸ್‌ಐಎ ಅಧಿಕಾರಗಳು ಹುಡುಕಾಟ ನಡೆಸಿದ್ದಾರೆ.

ಹುಡುಕಾಟದ ಸಂದರ್ಭದಲ್ಲಿ ಮೊಬೈಲ್ ಫೋನ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಪೆನ್ ಡ್ರೈವ್, ಡೈರಿ ಕೈಯಲ್ಲಿ ಬರೆಯಲಾದ ಮಲೆಯಾಳಂ ಮತ್ತು ಅರೆಬಿಕ್ ಸಾಹಿತ್ಯದ ಪುಸ್ತಕಗಳು, ಡಾ.ಝಾಕೀರ್ ನಾಯ್ಕ್ ಡಿವಿಡಿಗಳು ಪತ್ತೆಯಾಗಿವೆ.

NIA questioning 3 suspects in Kasargod, Zakir Naik speeches seized

ಡಾ.ಝಾಕೀರ್ ನಾಯ್ಕ್ ಭಾಷಣದ ಸಿಡಿ, ಡಿವಿಡಿಗಳನ್ನು ಪತ್ತೆ ಹಚ್ಚಲಾಗಿದೆ. ಹುಡುಕಾಟ ನಡೆಸಿದ ಮನೆಗಳ ಮಾಲೀಕರಿಗೆ ಕೊಚ್ಚಿನ ಎನ್‌ಐಎ ಕಚೇರಿಗೆ ವಿಚಾರಣೆಗೆ ಬರಬೇಕು ಎಂದು ನೋಟಿಸ್ ನೀಡಲಾಗಿದೆ.

ಕಾಸರಗೋಡಿನ ಎರಡು ಮನೆಗಳಲ್ಲಿ ಮತ್ತು ಪಾಲಕ್ಕಾಡ್‌ನ ಒಂದು ಪ್ರದೇಶದಲ್ಲಿ ಎನ್‌ಐಎ ಅಧಿಕಾರಿಗಳು ಹುಟುಕಾಟ ನಡೆಸಿದ್ದು, ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತೊಂದು ಕಡೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಕಾಟ ನಡೆಸಲಾಗಿದೆ ಎಂಬ ಸುದ್ದಿಗಳು ಹಬ್ಬಿವೆ. ಸರಣಿ ಬಾಂಬ್ ಸ್ಫೋಟ ನಡೆಸಿದ ಆರೋಪ ಹೊತ್ತಿರುವ ನ್ಯಾಷನಲ್ ತೌಹೀದ್ ಜಮಾಅತ್ ಸಂಘಟನೆ ಮುಖ್ಯಸ್ಥ ಸಹ್ರಾನ್ ಹಾಶಿಂ ಕಾಸರಗೋಡಿಗೆ ಹಲವು ಬಾರಿ ಭೇಟಿ ನೀಡಿದ್ದ ಎಂಬ ಆರೋಪವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+