NGO: ಬೊಕ್ಕಸಕ್ಕೆ ಕೇವಲ 3000 ಕೋಟಿ ತೆರಿಗೆ ನಷ್ಟ

ಯಾವುದೇ ಮಾನದಂಡ/ಅರ್ಹತೆಯಿಲ್ಲದ ದೊಡ್ಡ ದೊಡ್ಡ ದಾನ/ ದತ್ತಿ ಸಂಸ್ಥೆಗಳು, ಟ್ರಸ್ಟ್ ಗಳಿಗೆ ಅನಗತ್ಯ ತೆರಿಗೆ ವಿನಾಯಿತಿ ನೀಡುವ ಮೂಲಕ ಕೇಂದ್ರ ಸರಕಾರ ಈ ಪಾಟಿ ನಷ್ಟ ಅನುಭವಿಸಿದೆಯಂತೆ.
ದೇಶದ ಮಹಾಲೆಕ್ಕ ಪರಿಶೋಧಕ ಸಂಸ್ಥೆಯೇ Comptroller and Auditor General (CAG) ಈ ವರದಿಯನ್ನು ನೀಡಿದೆ. ದುರ್ದೈವ ಅಂದರೆ ಈ ಭಾರಿ ಮೊತ್ತವನ್ನು ನೋಡಿ ಆಘಾತಕ್ಕೊಳಗಾದ ಸರಕಾರ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲು ಹಿಂಜರಿದಿದೆ.
ಒಟ್ಟು 6 ಲಕ್ಷ ನೋಂದಾಯಿತ ಟ್ರಸ್ಟ್ ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಆದಾಯ ತೆರಿಗೆ ವರದಿಗಳನ್ನು ಆಧರಿಸಿ, 80 ಸಾವಿರ NGO ಸಂಸ್ಥೆಗಳ ಲೆಕ್ಕ ಪರಿಶೋಧನೆ ನಡೆಸಿದ CAG ಅನಗತ್ಯವಾಗಿ/ಅನಪೇಕ್ಷಿತವಾಗಿ 3000 ಕೋಟಿ ತೆರಿಗೆ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಪತ್ತೆಹಚ್ಚಿದೆ.
ಅಂದಹಾಗೆ ಇದು 2009-10 ವರೆಗಿನ ಆರ್ಥಿಕ ವರ್ಷದ ಲೆಕ್ಕ. ಆ ನಂತರದ ವರದಿಯಿಂದ ಪಾಪ ಕೇಂದ್ರ ಸರಕಾರ ಅದಿನ್ನೆಷ್ಟು ನಷ್ಟ ಅನುಭವಿಸಿದೆಯೋ ಎಂದು ಪ್ರಮಾಣಿಕವಾಗಿ ತಿಂಗಳಾ ತಿಂಗಳಾ ಬರೋ ಆರು ಕಾಸು ಮೂರು ಕಾಸು ಸಂಬಳಕ್ಕೆ ತೆರಿಗೆ ಪಾವತಿಸುವ ಬಡ ಸಂಬಳದಾರ ಪ್ರಶ್ನಿಸಿದ್ದಾನೆ.












Click it and Unblock the Notifications