15 ವರ್ಷ ದೇಶವಾಳಿದ ಮಹಿಳೆಗೆ ಪುರುಷ ದಿನಾಚರಣೆಯಂದು ನಮನ
ನವದೆಹಲಿ, ನವೆಂಬರ್. 19: ಭಾರತದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ 98ನೇ ಜನ್ಮದಿನವನ್ನು ಗುರುವಾರ ದೇಶಾದ್ಯಂತ ಆಚರಣೆ ಮಾಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲೂ ಇಂದಿರಾ ಕುರಿತ ವಿಚಾರಗಳು ಹರಿದಾಡಿದವು. ನವದೆಹಲಿಯಲ್ಲಿರುವ ಇಂದಿರಾ ಸಮಾಧಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಗೌರವ ಸಲ್ಲಿಕೆ ಮಾಡಿದರು.[ಟ್ವಿಟ್ಟರ್ ನಲ್ಲಿ ಉಕ್ಕಿನ ಮಹಿಳೆ ಇಂದಿರಾ ಹುಟ್ಟುಹಬ್ಬ]
ಇಂದಿರಾ ಸಂಪುಟದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಭಾರತವನ್ನು ಬಹುಕಾಲ ಆಳಿದ ಇಂದಿರಾ ಗಾಂಧಿ ತಮ್ಮ ಕ್ಯಾಬಿನೆಟ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿಕೊಂಡಿದ್ದರು. ಅವರ ಆಡಳಿತ ವೈಖರಿಯೇ ಹಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವಿಟ್ಟರ್‌ನಲ್ಲಿ ಇಂದಿರಾ ಗಾಂಧಿಯವರನ್ನು ಸ್ಮರಿಸಿಕೊಂಡಿದ್ದಾರೆ. ಇಂದಿರಾಜಿ ಜನ್ಮದಿನಾಚರಣೆ ನಿಮಿತ್ತ ಅವರಿಗೆ ಗೌರವಗಳನ್ನು ಸಲ್ಲಿಸುತ್ತೇನೆ', ಎಂದು ಹೇಳಿ ನಮನ ಸಲ್ಲಿಕೆ ಮಾಡಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕಾರ ಮಾಡಿದ ಮಕ್ಕಳ ಮಕ್ಕಳು...(ಪಿಟಿಐ ಚಿತ್ರಗಳು)

ಗೌರವ ಸಲ್ಲಿಸಿದ ಸೋನಿಯಾ
ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಸಮಾಧಿಗೆ ನವದೆಹಲಿಯಲ್ಲಿ ನಮನ ಸಲ್ಲಿಕೆ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

ರಾಹುಲ್ ಮತ್ತು ಪ್ರಣಬ್ ಭೇಟಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿರಾ ಗಾಂಧಿ ಅವರಿಗೆ ನಮನ ಸಲ್ಲಿಕೆ ವೇಳೆ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ.

ಮನಮೋಹನ್ ಸಿಂಗ್ ನಮನ
ಮಾಜಿ ಪ್ರಧಾನಿ, ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ಮನಮೋಹನ್ ಸಿಂಗ್ ನಮನ ಸಲ್ಲಿಕೆ ಮಾಡಿದರು.

ಪ್ರಶಸ್ತಿ ಸ್ವೀಕಾರ
ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿದರು.

ಸೇವಾ ಪ್ರಶಸ್ತಿ
ನವದೆಹಲಿಯಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಸೇವಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ವೀಲ್ ಚೇರನಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದ ಯುವತಿ.

ಆಗಮಿಸಿದ ಸೋನಿಯಾ
ಇಂದಿರಾ ಗಾಂಧಿ ಅವರಿಗೆ ನಮನ ಸಲ್ಲಿಕೆ ಮಾಡಲು ನವದೆಹಲಿಯ ಶಕ್ತಿ ಸ್ಥಳಕ್ಕೆ ಆಗಮಿಸಿದ ಸೋನಿಯಾ ಗಾಂಧಿ.

ಹಾಜರಿದ್ದ ಗಣ್ಯರು
ಇಂದಿರಾ ಗಾಂಧಿ ಅವರಿಗೆ ನಮನ ಸಲ್ಲಿಕೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ.












Click it and Unblock the Notifications