ಶುಭ್ರಾ ಮುಖರ್ಜಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು
ನವದೆಹಲಿ, ಆಗಸ್ಟ್ 19: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಶುಭ್ರಾ ಮುಖರ್ಜಿ ಅವರ ಅಂತಿಮ ದರ್ಶನ ಪಡೆದರು. ಕೆಲಕಾಲದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶುಭ್ರಾ ಮಂಗಳವಾರ ಬೆಳಗ್ಗೆ ನಿಧನರಾಗಿದ್ದರು.
ರಷ್ಯಾ ಅಧ್ಯಕ್ಷ ವಾಡ್ಲಿಮರ್ ಪುಟಿನ್ ಕಪ್ಪು ಸಮುದ್ರದ ಆಳಕ್ಕೆ ಇಳಿದು ಸಮೀಕ್ಷೆ ನಡೆಸಿದರು,. ಕಾಂಗ್ರೆಸ್ ಉಪಾಧ್ಯಕ್ಷ ಅಮೇಥಿಯಲ್ಲಿ ರೈತರ ಹೊಲಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡ ಬಾಲಿವುಡ್ ನಟರಾದ ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ.ಬುಧವಾರ ದೇಶ-ವಿದೇಶಗಳಲ್ಲಿ ನಡೆದ ವಿವಿಧ ಘಟನಾವಳಿಗಳ ಚಿತ್ರ ಹೂರಣ ಇಲ್ಲಿದೆ. (ಪಿಟಿಐ ಚಿತ್ರಗಳು)

ಶುಭ್ರಾ ಮುಖರ್ಜಿ ಅವರಿಗೆ ಅಂತಿಮ ನಮನ
ಪ್ರಧಾನಿ ನರೇಂದ್ರ ಮೋದಿ ಶುಭ್ರಾ ಮುಖರ್ಜಿ ಅವರಿಗೆ ನವದೆಹಲಿಯಲ್ಲಿ ಅಂತಿಮ ನಮನ ಸಲ್ಲಿಸಿದರು.

ಗೌರವ ಸಲ್ಲಿಸಿದ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಶುಭ್ರಾ ಮುಖರ್ಜಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಪ್ರಣಬ್ ಮುಖರ್ಜಿ
ಹೆಂಡತಿಯ ಪಾರ್ಥಿವ ಶರೀರದ ಮುಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಕೆಲಕಾಲದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶುಭ್ರಾ ಮಂಗಳವಾರ ಬೆಳಗ್ಗೆ ನಿಧನರಾಗಿದ್ದರು.

ಎಲ್ ಕೆ ಅಡ್ವಾಣಿ
ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೇಂದ್ರ ಸಚಿವರಾದ, ಸುಷ್ಮಾ ಸ್ವಾರಾಜ್, ರಾಜನಾಥ್ ಸಿಂಗ್ ಸೆರಿದಂತೆ ಅನೇಕರು ಅಂತಿಮ ನಮನ ಸಲ್ಲಿಕೆ ಮಾಡಿದರು.

ಶೇರಖ್ ಹಸೀನಾ ಹಾಜರಿ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸಹ ಆಗಮಿಸಿ ಪ್ರಣಬ್ ಮುಖರ್ಜಿ ಅವರ ಪತ್ನಿಗೆ ಅಂತಿಮ ನಮನ ಸಲ್ಲಿಕೆ ಮಾಡಿದರು.

ಹಳ್ಳಿಗೆ ರಾಹುಲ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಅಮೇಥಿಗೆ ಭೇಟಿ ನೀಡಿ ರೈತರೊಂದಿಗೆ ಹೊಲಕ್ಕೆ ತರಳಿ ರೈತರ ಸಮಸ್ಯೆ ಆಲಿಸಿದರು.

ಸಮುದ್ರಕ್ಕಿಳಿದ ಪುಟಿನ್
ರಷ್ಯಾ ಅಧ್ಯಕ್ಷ ವಾಡ್ಲಿಮರ್ ಪುಟಿನ್ ಕ್ರಿಮಿಯಾ ಸಮೀಪ ಕಪ್ಪು ಸಮುದ್ರದ ಆಳಕ್ಕೆ ಇಳಿದು ಸಮೀಕ್ಷೆ ನಡೆಸಿದರು.

ಬಾಲಿವುಡ್ ಬೆಡಗಿಯರು
ಮುಂಬೈ ನಲ್ಲಿ ನಡೆದ ಕ್ಯಾಲೆಂಡರ್ ಗರ್ಲ್ ಚಿತ್ರದ ಪ್ರಮೋಷನ್ ವೇಳೆ ಕಾಣಿಸಿಕೊಂಡ ಬಾಲಿವುಡ್ ಬೆಡಗಿಯರು.

ರಾಜೀವ್ ಗೆ ಕ್ಷೀರಾಭಿಷೇಕ
ಸದ್ಭಾವನಾ ಯಾತ್ರೆ ದೆಹಲಿ ತಲುಪಿದ್ದು ರಾಜೀವ್ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿದ ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು.

ವಿವಾಹ ಸಂಭ್ರಮ
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರು ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ವಿವಾಹ.

ಪುಸ್ತಕ ಬಿಡುಗಡೆ
ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡ ಬಾಲಿವುಡ್ ನಟರಾದ ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ.

ವೈಟ್ ಹೌಸ್ ಗೆ ನೇಮಕ
ಅಮೆರಿಕದ ವೈಟ್ ಹೌಸ್ ನಿರ್ದೇಶಕರಾಗಿ ನೇಮಕವಾದ ಲೈಂಗಿಕ ಅಲ್ಪಸಂಖ್ಯಾತೆ ರಫಿ ಫ್ರೀಡ್ ಮೆನ್-ಗರ್ಸ್ ಪನ್.












Click it and Unblock the Notifications