ಬಾಲಿವುಡ್ ಬೆಡಗು: ಹೌಸ್‌ಫುಲ್-3 ಟ್ರೇಲರ್ ಲಾಂಚ್

Subscribe to Oneindia Kannada

ನವದೆಹಲಿ, ಏಪ್ರಿಲ್, 25: ಸೋಮವಾರ ಸುದ್ದಿಗಳಿಗೇನು ಬರವಿಲ್ಲ. ಈಶಾನ್ಯ ಭಾರತದಲ್ಲಿ ವಿಧಾನಸಭೆ ಚುನಾವಣೆ ಕಾವು ಏರಿದೆ. ಜನರು ಮತದಾದ ಮಾಡಿ ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರದಲ್ಲಿ ಭದ್ರ ಮಾಡಿದ್ದಾರೆ.

ಇದೇ ಸಂದರ್ಭ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಟಿ ರೂಪಾ ಗಂಗೂಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ಇಡೀ ದಿನ ಸುದ್ದಿಯಲ್ಲಿತ್ತು. ಹೌರಾದಲ್ಲಿ ನಡೆಯುತ್ತಿದ್ದ ನಾಲ್ಕನೇ ಹಂತದ ಮತದಾನದ ಸಂದರ್ಭ ಈ ಘಟನೆ ನಡೆದಿತ್ತು. ಅಲ್ಲದೇ ಗಂಗೂಲಿ ಮತಗಟ್ಟೆಯೊಳಗೆ ಆಗಮಿಸಿ ಫೋಟೋ ಸಹ ತೆಗೆದುಕೊಂಡರು.

ಹೌಸ್ ಫುಲ್ 3 ಬಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆ ಸಹ ಸುದ್ದಿಯಲ್ಲಿತ್ತು. ಅಕ್ಷಯ್ ಕುಮಾರ್ , ರಿತೇಶ್ ದೇಶ್ ಮುಖ್, ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ತಂದೆ ಕಳೆದುಕೊಂಡ ಬಾಲಕಿಯನ್ನು ಜೆಮ್ ಶೆಡ್ ಪುರದಲ್ಲಿ ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ...ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ (ಪಿಟಿಐ ಚಿತ್ರಗಳು)

ಬಾಲಿವುಡ್ ಬೆಡಗು

ಬಾಲಿವುಡ್ ಬೆಡಗು

ಹೌಸ್ ಫುಲ್ 3 ಚಿತ್ರದ ಟ್ರೇಲರ್ ಬಿಡುಗಡೆ ಮುಂಬೈನಲ್ಲಿ ಕಾಣಿಸಿಕೊಂಡ ಲೀಸಾ ಹೇಡನ್, ರಿತೇಶ್ ದೇಶ್ ಮುಖ್, ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅಭಿಶೇಖ್ ಬಚ್ಚನ್.

ಮತದಾನ ನಮ್ಮ ಹಕ್ಕು

ಮತದಾನ ನಮ್ಮ ಹಕ್ಕು

ಹೌರಾತ್ ನಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಮತದಾರರು.

ರೂಪಾ ಗಂಗೂಲಿ

ರೂಪಾ ಗಂಗೂಲಿ

ಹೌರಾತ್ ನ ಮತಗಟ್ಟೆಯೊಂದರ ಚಿತ್ರಗಳನ್ನು ತೆಗೆದುಕೊಂಡ ಬಿಜೆಪಿ ಮುಖಂಡೆ ರೂಪಾ ಗಂಗೂಲಿ.

ಸುಂದರ ದೃಶ್ಯಕ್ಕೆ ಯಾವುದು ಸಾಟಿ?

ಸುಂದರ ದೃಶ್ಯಕ್ಕೆ ಯಾವುದು ಸಾಟಿ?

ಶಿಮ್ಲಾದ ಅರಣ್ಯದ ನಡುವೆ ಚಿಕ್ಕ ರೈಲೊಂದು ಹಾದು ಹೋಗುತ್ತಿದ್ದಾಗ ಕಂಡ ದೃಶ್ಯ.

ಅಯ್ಯೋ ಬೆಂಕಿ

ಅಯ್ಯೋ ಬೆಂಕಿ

ನವದೆಹಲಿಯ ನೇತಾಜಿ ಸುಭಾಷ್ ಪ್ಯಾಲೇಸ್ ನಲ್ಲಿ ಕಾಣಿಸಿಕೊಂಡಿದ್ದ ಆಕಸ್ಮಿಕ ಬೆಂಕಿ ನಂದಿಸಲು ಅಗನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿದರು.

ಬಾಲಕಿ ಭೇಟಿ

ಬಾಲಕಿ ಭೇಟಿ

2013 ರಲ್ಲಿ ಮೋದಿಯವರ ಮೆರವಣಿಗೆ ಸಂದರ್ಭ ನಡೆದಿದ್ದ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ಕಾರ್ಯಕರ್ತರೊಬ್ಬರ ಪುತ್ರಿಯನ್ನು ಮೋದಿ ಭೇಟಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi meets the child who lost her father in the Patna bomb blast which happened during Modi's rally in 2013, at a function in Jamshedpur. Lisa Haydon, Riteish Deshmukh, Akshay Kumar, Jacqueline Fernandez, Nargis Fakhri and Abhishek Bachchan during the trailer launch of film Housefull 3 in Mumbai.
Please Wait while comments are loading...