ಹೊಸ vande bharat express ಬಿಡುಗಡೆಗೆ ಸಿದ್ಧ, ಸ್ಥಳ, ಮಾರ್ಗ ತಿಳಿಯಿರಿ

ಜೈಪುರ-ದೆಹಲಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕವನ್ನು ತರಲು ವಾಯುವ್ಯ ರೈಲ್ವೆಯಿಂದ 30 ಕೋಟಿ ರೂಪಾಯಿ ಒದಗಿಸಲಾಗಿದೆ ಎನ್ನಲಾಗಿದೆ.

ನವದೆಹಲಿ, ಫೆಬ್ರವರಿ 6: ಭಾರತೀಯ ರೈಲ್ವೆಯ ಜನಪ್ರಿಯ ವಂದೇ ಭಾರತ್ ರೈಲು ಮುಂದಿನ ಕೆಲವು ತಿಂಗಳುಗಳಲ್ಲಿ ದೆಹಲಿ ಜೈಪುರ ಮಾರ್ಗದಲ್ಲಿ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ.

ನವದೆಹಲಿ ಸಮೀಪದ ಮಿಲೇನಿಯಮ್ ಸಿಟಿ ಗುರುಗ್ರಾಮ್‌ ರಸ್ತೆ ಮತ್ತು ಮೆಟ್ರೋ ಮೂಲಕ ಸಂಪರ್ಕ ಹೊಂದಿದೆ. ಈಗ, ಉದ್ದೇಶಿತ ಜೈಪುರ- ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಅವಳಿ ನಗರಗಳು ಶೀಘ್ರದಲ್ಲೇ ಹೈಸ್ಪೀಡ್ ರೈಲು ಸಂಪರ್ಕವನ್ನು ಪಡೆಯಬಹುದು ಎಂಬ ವರದಿಗಳು ಬಂದಿವೆ.

2023ರ ಬಜೆಟ್ ನಾರ್ತ್ ವೆಸ್ಟರ್ನ್ ರೈಲ್ವೆಗೆ 6,724.9 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಅನ್ನು ಒದಗಿಸಿದೆ. ಕಳೆದ ವರ್ಷಕ್ಕಿಂತ 28% ಹೆಚ್ಚಾಗಿದೆ. ಜೈಪುರ-ದೆಹಲಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕವನ್ನು ತರಲು ವಾಯುವ್ಯ ರೈಲ್ವೆಯಿಂದ 30 ಕೋಟಿ ರೂಪಾಯಿ ಒದಗಿಸಲಾಗಿದೆ ಎನ್ನಲಾಗಿದೆ. ನಾರ್ತ್ ವೆಸ್ಟರ್ನ್ ರೈಲ್ವೆ ಅಧಿಕಾರಿಗಳು ಹೇಳುವಂತೆ ಮುಂದಿನ ಕೆಲವು ತಿಂಗಳುಗಳಲ್ಲಿ ಜೈಪುರ ಮತ್ತು ದೆಹಲಿ ನಡುವೆ ರೈಲನ್ನು ಓಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಜೈಪುರ-ದೆಹಲಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಎರಡು ಉತ್ತರ ಭಾರತದ ನಗರಗಳ ನಡುವಿನ ಪ್ರಯಾಣದ ಸಮಯವು ಪ್ರಸ್ತುತ 2.5 ರಿಂದ 3.5 ಗಂಟೆಗಳಿಂದ 2 ಗಂಟೆಗಳ ಒಳಗೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಸೆಮಿ-ಹೈ ಸ್ಪೀಡ್‌ ವಂದೇ ಭಾರತ್ ರೈಲುಗಳು ಗಂಟೆಗೆ 180 ಕಿಮೀ ವೇಗವನ್ನು ತಲುಪುತ್ತವೆ.

ದೆಹಲಿ-ಜೈಪುರ ರೈಲಿನ ಮಾರ್ಗ

ದೆಹಲಿ-ಜೈಪುರ ರೈಲಿನ ಮಾರ್ಗ

ಅಲ್ಲದೆ ಕೆಲವು ಮಾರ್ಗಗಳಲ್ಲಿ ಗಂಟೆಗೆ 130 ಕಿಮೀಯಷ್ಟು ವೇಗವನ್ನು ತಲುಪುತ್ತಾರೆ. ಆದರೆ ಅನೇಕ ಅಂಶಗಳು ಅವುಗಳ ಸಾಮರ್ಥ್ಯವನ್ನು ಸೀಮಿತಗೊಳಿಸಿವೆ. ಪ್ರಸ್ತಾವಿತ ವಂದೇ ಭಾರತ್ ದೆಹಲಿ-ಜೈಪುರ ರೈಲಿನ ಮಾರ್ಗ ಅಥವಾ ಟಿಕೆಟ್ ದರದ ವಿವರಗಳನ್ನು ಇಲ್ಲಿಯವರೆಗೆ ದೃಢೀಕರಿಸಲಾಗಿಲ್ಲ. ರೈಲು ತನ್ನ ಪ್ರಯಾಣದ ಸಮಯದಲ್ಲಿ ಸಂಕ್ಷಿಪ್ತವಾಗಿ ನಿಲ್ಲುವ ನಿಲ್ದಾಣಗಳಲ್ಲಿ ಒಂದಾಗಿ ಈ ಮಾರ್ಗವು ಗುರುಗಾಂವ್‌ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮಾರ್ಗವು ದೆಹಲಿ- ಗುರ್‌ಗಾಂವ್- ರೇವಾರಿ- ಅಲ್ವಾರ್-ಬಂಡಿಕುಯಿ-ದೌಸಾ-ಜೈಪುರ ಮಾರ್ಗವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಪಾಟ್ನಾ-ರಾಂಚಿ, ಪಾಟ್ನಾ-ಹೌರಾ ಮತ್ತು ವಾರಣಾಸಿ-ಹೌರಾ ಮಾರ್ಗ

ಪಾಟ್ನಾ-ರಾಂಚಿ, ಪಾಟ್ನಾ-ಹೌರಾ ಮತ್ತು ವಾರಣಾಸಿ-ಹೌರಾ ಮಾರ್ಗ

ಇದರೊಂದಿಗೆ ಬಿಹಾರಕ್ಕೆ ಶೀಘ್ರದಲ್ಲೇ ಮೂರು ಹೊಸ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸುವ ಸಾಧ್ಯತೆ ಇದೆ. ಹೊಸ ಸೆಮಿ-ಹೈ-ಸ್ಪೀಡ್ ರೈಲುಗಳು ಪಾಟ್ನಾ-ರಾಂಚಿ, ಪಾಟ್ನಾ-ಹೌರಾ ಮತ್ತು ವಾರಣಾಸಿ-ಹೌರಾ ಮಾರ್ಗಗಳಲ್ಲಿ ಚಲಿಸುವ ನಿರೀಕ್ಷೆಯಿದೆ. ಹೊಸ ವಂದೇ ಭಾರತ್ ರೈಲುಗಳು ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

ಮುಂಬೈನಿಂದ ಸೊಲ್ಲಾಪುರ, ಮುಂಬೈನಿಂದ ಶಿರಡಿ

ಮುಂಬೈನಿಂದ ಸೊಲ್ಲಾಪುರ, ಮುಂಬೈನಿಂದ ಶಿರಡಿ

ಈಗಾಗಲೇ ಮುಂಬೈಗೆ ಎರಡು ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಯೋಗಿಕ ಸಂಚಾರಯನ್ನು ಮುಗಿಸಿವೆ. ಈ ಎರಡೂ ಹೊಸ ವಂದೇ ಭಾರತ್ ರೈಲುಗಳನ್ನು ಮುಂಬೈನಿಂದ ಸೊಲ್ಲಾಪುರ (ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್) ಮತ್ತು ಮುಂಬೈನಿಂದ ಶಿರಡಿ (ಮುಂಬೈ-ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್) ನಡುವೆ ಸಂಚರಿಸಲಿದೆ. ಕೇಂದ್ರ ರೈಲ್ವೇ (ಸಿಆರ್‌) ವಿಭಾಗವು ಮುಂಬೈ ಮತ್ತು ಶಿರಡಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಯೋಗಿಕ ಸಂಚಾರ ಯಶಸ್ವಿಯಾಗಿ ಮುಗಿಸಿದೆ.

ಫೆಬ್ರವರಿ 10ರಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ

ಫೆಬ್ರವರಿ 10ರಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ

ಭಾರತೀಯ ರೈಲ್ವೆಯು ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ ಎರಡು ವಂದೇ ಭಾರತ್ ರೈಲುಗಳನ್ನು ಏಕಕಾಲದಲ್ಲಿ ಉಡುಗೊರೆಯಾಗಿ ನೀಡಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 10ನೇ ಫೆಬ್ರವರಿ 2023 ರಂದು ಮುಂಬೈನಿಂದ ಈ ಎರಡೂ ರೈಲುಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಪ್ರಧಾನಿ ಕಚೇರಿಯಿಂದ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+