Gold: ಚಿನ್ನ ಪ್ರಿಯರಿಗೆ ಹೊಸ ಶಾಕ್‌: ಈ ಕಾರಣಕ್ಕೆ ಬಂಗಾರದ ಬೆಲೆ ಜಾಸ್ತಿ ಆಗುವ ಆತಂಕ!

Gold Price: ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ. ಇದರ ನಡುವೆ ಚಿನ್ನ ಪ್ರಿಯರು ಶಾಕ್‌ ಆಗುವಂತಹ ಸುದ್ದಿ ಬಂದಿದೆ. ಹೌದು ದೇಶದಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಚಿನ್ನದ ಬೆಲೆ ವಿಪರೀತ ಎನ್ನುವಂತೆ ಹೆಚ್ಚಳವಾಗಿದೆ. ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿರುವುದಕ್ಕೆ ಅಮೆರಿಕದ ಹೊಸ ಆರ್ಥಿಕ ನೀತಿಯೂ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಭಾರೀ ಟ್ಯಾಕ್ಸ್‌ ಹಾಕುತ್ತಿದ್ದಾರೆ. ಟ್ರಂಪ್‌ ಹೊಸ ನೀತಿಗಳಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳು ಆರ್ಥಿಕ ಸಂಕಷ್ಟದ ಆತಂಕವನ್ನು ಎದುರಿಸುತ್ತಿವೆ. ಇದೀಗ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ. ಅದಕ್ಕೆ ಕಾರಣವೇನು ಎನ್ನುವ ವಿವರ ನೋಡೋಣ..

ಚಿನ್ನದ ಬೆಲೆ ಈಗಾಗಲೇ 80,000 ಸಾವಿರದ ಗಡಿದಾಟಿಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಆಗುವ ಸಾಧ್ಯತೆಯೂ ಇದೆ ಅಂತಲೇ ಹೇಳಲಾಗುತ್ತಿದೆ. ಕೇವಲ ಎರಡರಿಂದ ಮೂರು ವರ್ಷಗಳ ಹಿಂದೆಯಷ್ಟೇ ಚಿನ್ನದ ಬೆಲೆ 24 ಕ್ಯಾರೇಟ್‌ ಪ್ರತಿ 10 ಗ್ರಾಂಗೆ 50,000 ರಿಂದ 55,000 ಸಾವಿರ ರೂಪಾಯಿ ಇತ್ತು. ಆದರೆ ಇಂದು ಚಿನ್ನದ ಬೆಲೆ ಹಲವು ಪಟ್ಟು ಹೆಚ್ಚಳವಾಗಿದೆ. ಇದರ ನಡುವೆ ನಡೆದಿರುವ ಮತ್ತೊಂದು ಬೆಳವಣಿಗೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವುದು ಫಿಕ್ಸ್‌ ಎನ್ನುವಂತೆ ಇದೆ. ಅದೇನು ಅಂತ ನೋಡೋಣ..

New Stock for Gold lovers Fears Price of Gold Will Increase Due to This

ಚಿನ್ನ ಎಂದರೆ ಹೂಡಿಕೆ. ಚಿನ್ನವನ್ನು ವಿವಿಧ ಕಾರಣಗಳಿಗೆ ಜನ ಖರೀದಿ ಮಾಡುವುದು ಹಾಗೂ ಅದರ ಮೇಲೆ ಹೂಡಿಕೆ ಮಾಡುವುದು ಇದೆ. ಅಮೆರಿಕದ ಹೊಸ ಆರ್ಥಿಕ ನೀತಿಯಿಂದಾಗಿ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು. ಭಾರತ ಸೇರಿದಂತೆ ವಿವಿಧ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ನಿರಂತರವಾಗಿ ಟ್ಯಾಕ್ಸ್‌ ಹಾಕುವುದಕ್ಕೆ ಶುರು ಮಾಡಿಕೊಂಡಿದೆ. ಇದರ ಪರಿಣಾಮವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾದಂತೆಲ್ಲ ಬೆಲೆ ಏರಿಕೆಯಾಗುವುದು ಸಾಮಾನ್ಯ. ಇದೇ ರೀತಿ ಚಿನ್ನದ ಬೆಲೆ ಸಹ ಹೆಚ್ಚಳವಾಗುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ, ದೇಶದಲ್ಲಿ ಚಿನ್ನದ ಆಮದು ಹೆಚ್ಚಾಗಿರುವುದು ಅಂದರೆ ಚಿನ್ನವನ್ನು ಬೇರೆ ದೇಶಗಳಿಂದ ಭಾರತಕ್ಕೆ ತರಿಸಿಕೊಳ್ಳುತ್ತಿರುವುದು ಹೆಚ್ಚಳವಾಗಿರುವುದು.

ಹೌದು ಭಾರತದಲ್ಲಿ ಚಿನ್ನವನ್ನು ತರಿಸಿಕೊಳ್ಳುವ ಪ್ರಮಾಣ ಹೆಚ್ಚಳವಾಗಿದೆ. ಜನವರಿಯಲ್ಲಿ ಬರೋಬ್ಬರಿ ಶೇ. 40.79ರಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಇದರ ಮೌಲ್ಯ ಬರೋಬ್ಬರಿ 23,300 ಕೋಟಿ ರೂಪಾಯಿ ಅಂತ ಹೇಳಲಾಗುತ್ತಿದೆ. ದೇಶದಲ್ಲಿ ಚಿನ್ನದ ಬೇಡಿಕೆ ಜಾಸ್ತಿ ಆಗ್ತಿರೋದರಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವುದು ಹೆಚ್ಚಾಗಿದೆ ಅಂತ ಕೇಂದ್ರ ವಾಣಿಜ್ಯ ಸಚಿವಾಲಯವು ಮಾಹಿತಿ ನೀಡಿದೆ.

New Stock for Gold lovers Fears Price of Gold Will Increase Due to This

ಚಿನ್ನದ ಬೆಲೆ ಭರ್ಜರಿ ಏರಿಕೆ: ಇನ್ನು ದೇಶದಲ್ಲಿ ಚಿನ್ನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಚಿನ್ನದ ಆಮದು ಮಾಡಿಕೊಳ್ಳುವುದು ಜಾಸ್ತಿ ಆಗುತ್ತಿದ್ದು. 2025ನೇ ಸಾಲಿನ ಜನವರಿಯಿಂದ ಇಲ್ಲಿಯ ವರೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಇದು ಸಹಜವಾಗಿಯೇ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವ ಮುನ್ಸೂಚನೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+