Parliament Building Inauguration: ಪ್ರಧಾನಿ ನರೇಂದ್ರ ಮೋದಿಗೆ 'ಸೆಂಗೋಲ್' ಹಸ್ತಾಂತರ

ನವದೆಹಲಿ, ಮೇ 27: ನೂತನ ಸಂಸತ್ ಭವನ ಉದ್ಘಾಟನೆಗೆ ಒಂದು ದಿನದ ಮೊದಲು ಚೆನ್ನೈನಿಂದ ದೆಹಲಿಗೆ ಆಗಮಿಸಿದ ಅಧೀನಂ ಪುರೋಹಿತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಂಗೋಲ್ ಅನ್ನು ಹಸ್ತಾಂತರಿಸಿದ್ದಾರೆ. ಮೇ 28ರಂದು ಭಾನುವಾರ ಬೆಳಿಗ್ಗೆ ನೂತನ ಸಂಸತ್ ಕಟ್ಟಡವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಅಧೀನಂ ಅರ್ಚಕರು ಶನಿವಾರ ಸಂಜೆ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ನೀಡಿದರು. ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆ 8:30 ರಿಂದ 9 ಗಂಟೆಯ ನಡುವೆ ಹೊಸ ಸಂಸತ್ತಿನ ಲೋಕಸಭಾ ಆವರಣದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಲಾಗುವುದು.

New Parliament Building Inauguration

ಸೆಂಗೋಲ್ ಅನ್ನು ಭಾರತದ ಸ್ವಾತಂತ್ರ್ಯದ ಮುನ್ನಾದಿನದಂದು ಮಾಜಿ ಪ್ರಧಾನಿ ಜವಹರ ಲಾಲ್ ನೆಹರು ಅವರಿಗೆ ಅಧಿಕಾರ ಹಸ್ತಾಂತರದ ಗುರುತಾಗಿ ಬ್ರಿಟೀಷರಿಂದ ಸ್ವೀಕರಿಸಿದ್ದರು. ಕೇಂದ್ರ ಸರ್ಕಾರ ಕೊಟ್ಟಿರುವ ಮಾಹಿತಿ ಪ್ರಕಾರ ಸೆಂಗೋಲ್ ಅನ್ನು ಅಲಹಾಬಾದ್‌ನ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು.

ಕಾಂಗ್ರೆಸ್-ಬಿಜೆಪಿ ವಾಕ್ಸಮರ

'ಸೆಂಗೋಲ್' ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಜಟಾಪಟಿಯನ್ನು ಸೃಷ್ಠಿಸಿದೆ. ಕಾಂಗ್ರೆಸ್ ಇದನ್ನು ಚಿನ್ನದ ರಾಜದಂಡವನ್ನು ಬ್ರಿಟಿಷರಿಂದ ಭಾರತೀಯರಿಗೆ "ಅಧಿಕಾರದ ವರ್ಗಾವಣೆ" ಸಂಕೇತವೆಂದು ಒಪ್ಪಲು ನಿರಾಕರಿಸಿದೆ.

ಕಾಂಗ್ರೆಸ್ ಪಕ್ಷದ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಸೆಂಗೋಲ್ ಅನ್ನು ವಾಕಿಂಗ್ ಸ್ಟಿಕ್ ಎಂದು ಕರೆಯುವುದು ಗಾಂಧಿ ಕುಟುಂಬ ಪ್ರಜಾಪ್ರಭುತ್ವದ ಬಗ್ಗೆ ಏನು ಯೋಚಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಭಾನುವಾರ ನಡೆಯಲಿರುವ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಯಮದ ಪ್ರಕಾರ ನೂತನ ಸಂಸತ್ ಭವನದ ಕಟ್ಟಡವನ್ನು ದ್ರೌಪದಿ ಮುರ್ಮು ಬದಲಿಗೆ ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿರುವುದಕ್ಕೆ ಅನೇಕ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು 20 ವಿರೋಧ ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ.

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಸುಮಾರು 970 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. 888 ಆಸನ ಸಾಮರ್ಥ್ಯ ಹೊಂದಿರುವ ಲೋಕಸಭೆಯು ನವಿಲು-ಮಾದರಿಯ ವಿನ್ಯಾಸ ಹೊಂದಿದ್ದು, ರಾಜ್ಯಸಭಾ ಸಭಾಂಗಣವು ಕಮಲದ ಮಾದರಿಯಲ್ಲಿ ನಿರ್ಮಿಸಲಾಗಿದ್ದು 384 ಆಸನಗಳ ಸಾಮರ್ಥ್ಯ ಹೊಂದಿದೆ.

ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಸಂಸದರಿಗೆ ಕಚೇರಿಗಳು, ಸಭಾಂಗಣಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+