Vande Bharat Express: ಟ್ರ್ಯಾಕ್ ಮೇಲೆ ಬಂದೇ ಬಿಡ್ತು ಕೇಸರಿ ಬಣ್ಣದ ವಂದೇ ಭಾರತ್ ರೈಲು- ವರದಿ, ವಿವರ ತಿಳಿಯಿರಿ
ಚೆನ್ನೈ, ಆಗಸ್ಟ್ 19: ಭಾರತದಲ್ಲಿ ಜನಪ್ರಿಯತೆ ಗಳಿಸಿರುವ ವಂದೇ ಭಾರತ್ ರೈಲು ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದೆ. ಇಷ್ಟು ದಿನ ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದ ವಂದೇ ಭಾರತ್ ರೈಲು ಈಗ ಕೇಸರಿ ಹಾಗೂ ಬಿಳಿ ಬಣ್ಣದಲ್ಲಿ ಗೋಚರವಾಗಿದೆ.
ಈ ಹೊಸ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) ಟ್ರ್ಯಾಕ್‌ಗೆ ಬಂದಿದೆ. ಹೊಸ ರೈಲು 31 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಇದನ್ನು ಐಸಿಎಫ್ ಹೊರತಂದಿದೆ.

ಕೆಲವು ವಾರಗಳ ಹಿಂದೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ನಿರ್ಮಾಣಗೊಳ್ಳುತ್ತಿದ್ದ ಕೇಸರಿ ಹಾಗೂ ಬಿಳಿ ಬಣ್ಣದ ರೈಲಿನ್ನು ಪರಿಶೀಲಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಕೇಸರಿ ಹಾಗೂ ಬಿಳಿ ಬಣ್ಣದ ರೈಲನ್ನು ತನ್ನ ಪರೀಕ್ಷಾ ಟ್ರ್ಯಾಕ್‌ಗಳಲ್ಲಿ ಐಸಿಎಫ್ ಇಂದು ಬಿಡುಗಡೆ ಮಾಡಿದೆ. ಐಸಿಎಫ್ ಹೊಸ ಬಣ್ಣದ ಥೀಮ್‌ನೊಂದಿಗೆ ಪ್ರಯೋಗ ಮಾಡುತ್ತಿದೆ. ಕೇಸರಿ ಹಾಗೂ ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಂದು ರೈಲನ್ನು ಮಾತ್ರ ಪ್ರಾರಂಭಿಸಲು ಭಾರತೀಯ ರೈಲ್ವೆ ತಯಾರಿ ನಡೆಸಿದೆ.

ಹೊರಭಾಗವು ಹೊಸ ಬಣ್ಣವನ್ನು ಹೊಂದಿದ್ದರೂ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಳಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ಅಡಿಯಲ್ಲಿ ಈಗಾಗಲೇ 25 ರೈಲುಗಳು ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲಾ ರೈಲುಗಳು ನೀಲಿ ಹಾಗೂ ಬಿಳಿ ಬಣ್ಣವನ್ನು ಹೊಂದಿವೆ.
8 ಕೋಚ್ ಎಸಿ ಚೇರ್ ಕಾರ್ ರೈಲು ಸುರಕ್ಷತಾ ವೈಶಿಷ್ಟ್ಯಗಳನ್ನು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು ಹೊಂದಿದೆ.
ಸದ್ಯಕ್ಕೆ ಭಾರತೀಯ ರೈಲ್ವೇಯು 25 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು (ಎರಡೂ ಬದಿಯ ಪ್ರಯಾಣವನ್ನು ಒಳಗೊಂಡಂತೆ) ನಿರ್ವಹಿಸುತ್ತಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ರೂಪಾಂತರದ ಒಳಾಂಗಣ ವಿನ್ಯಾಸವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ರೈಲ್ವೇ ಇಲಾಖೆ ಇದೆ.

ವಂದೇ ಭಾರತ್ ರೈಲುಗಳ ಪಟ್ಟಿ
-ಹೌರಾ-ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
-ಹಜರತ್ ನಿಜಾಮುದ್ದೀನ್ - ರಾಣಿ ಕಮಲಪತಿ ವಂದೇ ಭಾರತ್ ಎಕ್ಸ್‌ಪ್ರೆಸ್
-ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜೆ&ಕೆ) ವಂದೇ ಭಾರತ್ ಎಕ್ಸ್‌ಪ್ರೆಸ್
-ನವದೆಹಲಿ - ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
-ಕೆಎಸ್‌ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್
-ರಾಣಿ ಕಮಲಾಪತಿ - ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್
-ಇಂದೋರ್ - ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್
-ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್
-ಮುಂಬೈ- ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್
-ನವದೆಹಲಿ - ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್
-ಅಜ್ಮೀರ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್
-ಮುಂಬೈ - ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್
-ಪಾಟ್ನಾ - ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್
-ಜೋಧಪುರ - ಸಬರಮತಿ (ಅಹಮದಾಬಾದ್) ವಂದೇ ಭಾರತ್ ಎಕ್ಸ್‌ಪ್ರೆಸ್
-ಗೋರಖ್‌ಪುರ - ಲಕ್ನೋ ಚಾರ್‌ಬಾಗ್ ವಂದೇ ಭಾರತ್ ಎಕ್ಸ್‌ಪ್ರೆಸ್
-ತಿರುವನಂತಪುರಂ ಸೆಂಟ್ರಲ್ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್
-ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್
-ಸಿಕಂದರಾಬಾದ್- ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್
-ದೆಹಲಿ- ಡೆಹ್ರಾಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್
-ಚೆನ್ನೈ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್
-ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್
-ನಾಗ್ಪುರ - ಬಿಲಾಸ್ಪುರ್ ವಂದೇ ಭಾರತ್ ಎಕ್ಸ್ಪ್ರೆಸ್
-ಹೊಸ ಜಲ್ಪೈಗುರಿ - ಗುವಾಹಟಿ ವಂದೇ ಭಾರತ್ ಎಕ್ಸ್‌ಪ್ರೆಸ್
-ಗಾಂಧಿನಗರ - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್
-ಹೌರಾ - ನ್ಯೂ ಜಬಲ್ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್












Click it and Unblock the Notifications