India's New GST: ಕರ್ನಾಟಕ ಸೇರಿ ದೇಶಾದ್ಯಂತ ಹೊಸ ಜಿಎಸ್‌ಟಿ ಜಾರಿ: ಬೈಕ್, ಕಾರು ಸೇರಿ ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
New GST In India: ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಇಂದಿನಿಂದ ಹೊಸ ಜಿಎಸ್‌ಟಿ ದರಗಳು ಜಾರಿಯಾಗಿವೆ. ಹಾಗಾದ್ರೆ, ಯಾವೆಲ್ಲಾ ವಸ್ತುಗಳ ದರ ಎಷ್ಟು ಇಳಿಕೆಯಾಗಿದೆ ಎನ್ನುವ ಪ್ರಶ್ನೆ ಬಹುತೇಕ ಜನರದ್ದಾಗಿರುತ್ತದೆ. ಇದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು... ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೆಂದ್ರ ಸರ್ಕಾರ ಘೋಷಣೆ ಮಾಡಿದಂತೆ ಇಂದಿನಿಂದ ಅಂದರೆ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ದರ ಜಾರಿಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರು ಜಿಎಸ್‌ಟಿ ಸಂಭೆಯಲ್ಲಿ ಹೊಸ ಜಿಎಸ್‌ಟಿ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಇನ್ನು ಇದೀದ ಇಂದಿನಿಂದ ಇದು ಜಾರಿಯಾಗಿದ್ದು, ಇದರಿಂದ ಸಾಮಾನ್ಯ ಜನರು ಬಳಸುವ ವಸ್ತುಗಳ ಬೆಲೆ ಇದೀಗ ಕೈಗೆಟಕುವ ದರಗಳಲ್ಲಿ ಸಿಗಲಿವೆ.

ಇಂದಿನಿಂದ ನವರಾತ್ರಿ ಆರಂಭ ಆಗಲಿದ್ದು, ಮೊದಲ ದಿನವೇ ದೇಶದ ಜನತೆಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದ ಜಿಎಸ್‌ಟಿ 2.0 ಅಧಿಕೃತವಾಗಿ ಸೆಪ್ಟೆಂಬರ್ 22ರ ಸೋಮವಾರದಿಂದಲೇ ಜಾರಿಗೆ ಬಂದಿದೆ. ಪರಿಣಾಮ ಜನ ಸಾಮಾನ್ಯರಿಗೆ 375 ಉತ್ಪನ್ನಗಳು ಭಾರೀ ಕಡಿಮೆ ದೊರೆಯಲಿವೆ.
ಹೊಸ ಜಿಎಸ್‌ಟಿ ಅನ್ವಯ ಎರಡು ಸ್ತರದಲ್ಲಿ ಹಿಂದಿದ್ದ ಶೇಕಡ 5, ಶೇಕಡ 15, ಶೇಕಡ 18 ಹಾಗೂ ಶೇಕಡ 28ಗಳನ್ನು ಬದಲಾಗಿ ಕೇವಲ ಶೇಕಡ 5 ಹಾಗೂ ಶೇಕ 18ರ ಸ್ತರಕ್ಕೆ ಇಳಿಕೆ ಮಾಡಲಾಗಿದೆ. ಇದರ ಪ್ರಕಾರ, ಶೇಕಡ 12ರಷ್ಟು ಜಿಎಸ್‌ಟಿ ಸ್ಲ್ಯಾಬ್‌ಗೆ ಒಳಪಟ್ಟಿದ್ದ ಶೇಕಡ 99 ಸರಕುಗಳು ಇಂದಿನಿಂದ ಶೇಕ 5ಕ್ಕೆ ಇಳಿಕೆಯಾಗುವೆ. ಶೇಕಡ 28ರಷ್ಟು ತೆರಿಗೆಗೆ ಒಳಪಡುತ್ತಿದ್ದ ಉತ್ಪನ್ನಗಳು ಶೇಕಡ 18ರ ವ್ಯಾಪ್ತಿಗೆ ಬರಲಿದ್ದು, ಶೇಕಡ 10ರಷ್ಟು ಜಿಎಸ್‌ಟಿ ದರ ಇಳಿಕೆದಂತಾಗಿದೆ.
ಬೈಕ್‌ಗಳ ದರ ಇಳಿಕೆ: ಜಿಎಸ್‌ಟಿ 2.0ನಿಂದ ಅಡುಗೆ ಮನೆಯ ಸಾಮಾಗ್ರಿಗಳಿಂದು ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳವರೆಗೆ, ಔಷಧಿಗಳಿಂದ ಹಿಡಿದು ಕೆಲ ಕಾರು, ಬೈಕ್‌ಗಳ ವರೆಗೂ 375 ಉತ್ಪನ್ನಗಳ ದರ ಇಳಿಕೆ ಆಗಿದೆ. ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದರೆ, 350 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಿಸಿ ಇರುವ ಬೈಕ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 28ರಿಂದ 18ಕ್ಕೆ ಇಳಿಕೆ ಮಾಡಲಾಗಿದೆ.
ಹೊಸ ಜಿಎಸ್‌ಟಿ ದರದಿಂದ ಇಂತಹ ಬೈಕ್ ಖರೀದಿ ಮಾಡುವವರಿಗೆ ಭರ್ಜರಿ ಶುಭ ಸುದ್ದಿ ಸಿಕ್ಕಂತಾದೆ. ಮತ್ತೊಂದೆಡೆ, 350 ಸಿಸಿ ಮೇಲೆ ಇರುವ ಬೈಕ್ ಖರೀದಿಸುವವರ ಬಿಗ್ ಶಾಕ್ ಎದುರಾಗಿದೆ. ಯಾಕಂದ್ರೆ ಇಂತಹ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 28ರಿಂದ 40ರ ವರೆಗೂ ಏರಿಕೆ ಮಾಡಲಾಗಿದೆ.
ಕಾರುಗಳ ದರ ಇಳಿಕೆ: ಈಗಾಗಲೇ ಕೆಲ ಕಾರುಗಳ ಜಿಎಸ್‌ಟಿಯನ್ನು ಶೇಕಡ 28ರಿಂದ 18ಕ್ಕೆ ಇಳಿಕೆ ಮಾಡಲಾಗಿದೆ. ಇದನ್ನು ಸ್ವತಃ ಕಂಪನಿಗಳೇ ಘೋಷಣೆ ಮಾಡಿವೆ. 1200 ಸಿಸಿ ಒಳಗಿನ ಕಾರಿನ ದರವನ್ನು ಶೇಕಡ 28ರಿಂದ ಶೇಕಡ 18ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗದವರು ಕೂಡ ಕಾರು ಖರೀದಿ ಮಾಡಲು ತುಂಬಾ ಅನುಕೂಲ ಆದಂತಾಗಿದೆ.
ಗೃಹ ಉಪಯೋಗಿ, ಕೃಷಿ ಉಪಕರಣಗಳ ದರ ಇಳಿಕೆ: ಇನ್ನು ಪನ್ನೀರ್, ತುಪ್ಪ, ಬೆಣ್ಣೆ, ಡ್ರೈಫ್ರೂಟ್ಸ್, ಕಾಫಿ, ಐಸ್‌ಕ್ರೀಮ್ ಸೇರಿದಂತೆ ಗೃಹ ಉಪಯೋಗಿ ವಸ್ತುಗಳು, ಟೀವಿ, ಎಸಿ ವಾಷಿಂಗ್ ಮಷಿನ್‌ನಂತಹ, ಮೊಬೈಲ್ ನಂತಹ ಗೃಹ ಪಯೋಗಿ ಉಪಕರಣಗಳು ಕಡಿಮೆಯಾಗಲಿವೆ. ಜೊತೆಗೆ ಕೃಷಿ ಯಂತ್ರೋಪಕರಣಗಳ ಬೆಲೆಯೂ ಕಡಿಮೆಯಾಗಿದೆ.
ಸೌಂದರ್ಯ ವರ್ದಕ ವಲಯಗಳಾದ ಹೆಲ್ತ್ ಕ್ಲಬ್, ಸಲೂನ್, ಕ್ಷೌರದ ಅಂಗಡಿ , ಫಿಟ್‌ನೆಸ್ ಸೆಂಟರ್, ಯೋಗಗಳ ಜಿಎಸ್‌ಟಿಸಿಯನ್ನು ಶೇಕಡ 5ರಷ್ಟು ಇಳಿಕೆ ಮಾಡಲಾಗಿದೆ. ನಿತ್ಯ ಬಳಸುವ ಕೂದಲಿಗೆ ಹಚ್ಚುವ ಎಣ್ಣೆ, ಶಾಂಪೂ, ಸೋಪ್, ಬ್ರಶ್, ಟೂತ್‌ಪೇಸ್ಟ್, ಫೇಸ್‌ಕ್ರೀಮ್‌ಗಳ ಮೇಲಿನ ಜಿಎಸ್‌ಟಿ ಶೇಕಡ 18ರಿಂದ 12ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಮಕ್ಕಳ ಅಗತ್ಯ ವಸ್ತುಗಳ ದರ ಸಹ ಕಡಿಮೆಯಾಗಿವೆ.
ದುಬಾರಿ ಔಷಧಗಳ ಬೆಲೆ ಇಳಿಕೆ: ಔಷಧ ವಲಯದಲ್ಲೂ ಸಹ ಕೆಲವುಗಳ ದರ ಇಳಿಕೆ ಮಾಡಲಾಗಿದೆ. ಹೆಚ್ಚಿನ ಔಷಧಗಳು, ಗ್ಲುಕೋಮೀಟರ್, ಡಯಾಗೋನಿಸ್ಟಿಕ್ ಕಿಟ್‌ಗಳಂತಹ ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 5ರಷ್ಟು ಇಳಿಸಿರುವುದರಿಂದ ಬಡ ಮಧ್ಯಮ ವರ್ಗದವರಿಗೆ ತುಂಬಾ ಸಹಾಯ ಆದಂತಾಗಿದೆ. ಸರ್ಕಾರ ಈಗಾಗಲೇ ಎಲ್ಲಾ ಔಷಧ ಕಂಪನಿಗೆ ಮೂಲ ದರವನ್ನು ಪರಿಷ್ಕರಿಸಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವಂತೆ ಸೂಚಿಸಿದೆ.
ಅದರಲ್ಲೂ 33 ಔಷಧಿಗಳಲ್ಲಿ ಕ್ಯಾನ್ಸರ್, ರಕ್ತ ಅಸ್ವಸ್ಥತೆಗಳು, ಅಪರೂಪದ ಆನುವಂಶಿಕ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ದುಬಾರಿ ಔಷಧಿಗಳು ಬೆಲೆ ಸೇರಿವೆ. ಇದರಿಂದ ಮಧ್ಯಮ ವರ್ಗದವರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಂತಾಗಿದೆ.
ಈ ಕೊಠಡಿಗಳ ದರ ಇಳಿಕೆ: ಹೊಸ ಜಿಎಸ್‌ಟಿ ದರದಿಂದ ಕೊಠಡಿಗಳ ದರ ಅಗ್ಗವಾಗಲಿದೆ. ಹೋಟೆಲ್ ಉದ್ಯಮದ ಮೇಲಿನ ಜಿಎಸ್ಟಿಯನ್ನು ಸರ್ಕಾರ ಶೇಕಡ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದರಿಂದ 7,500 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬಾಡಿಗೆ ಇರುವ ಕೊಠಡಿಗಳು ದರ 525 ರೂಪಾಯಿವರೆಗೂ ಕಡಿಮೆಯಾಗಲಿದೆ.
ಹೊಸ ಜಿಎಸ್‌ಟಿಯಿಂದ ಟಿವಿ ಉತ್ಪನ್ನಗಳು ಬೆಲೆಗಳು ಇಳಿಕೆಯಾಗಿದ್ದು, 32 ಇಂಚಿನ ಟೀವಿ ಮೇಲೆ ತೆರಿಗೆಯನ್ನು ಶೇಕಡ 28ರಿಂದ 18ಕ್ಕೆ ಇಳಿಕೆ ಮಾಡಲಾಗಿದೆ. ಅದಕ್ಕಿಂತ ದೊಡ್ಡದಾಗಿದ್ದರೆ ಶೇಕಡ 28ರಷ್ಟು ಆಗಲಿದೆ. ಇದರಿಂದ ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಹಣ ಉಳಿತಾಯ ಆದಂತಾಗಲಿದೆ. ಈಗಾಗಲೇ ಕೆಲ ಉದ್ಪಾಕರು ತಮ್ಮ ಕಂಪನಿಗಳ ಟಿವಿಗಳ ಬೆಲೆಯನ್ನು ಘೋಷಣೆ ಮಾಡಿದ್ದಾರೆ.
ಬಾಯಿ ಸುಡಲಿವೆ ತಂಬಾಕುಯುಕ್ತ ವಸ್ತುಗಳು: ಸಿಗರೇಟು, ಗುಟ್ಕಾ, ತಂಬಾಕು ಸೇರಿ ಹಲವು ಸಕ್ಕರೆ ಪಾನೀಯಗಳ ದರವನ್ನು ಶೇಡಕ 40ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಗುಟ್ಕಾ ಹಾಕುವವರ ಬಾಯಿಗೆ ಬರೆ ಎಳೆದಂತಾಗಿದೆ. ಒಂದು ರೀತಿಯಲ್ಲಿ ನೋಡೋದಾದ್ರೆ ಇದು ಉತ್ತಮ ನಿರ್ಧಾರ ಅಂತಲೇ ಹೇಳಬಹುದು. ಹೀಗೆ ಇಂತಹ ಆರೋಗ್ಯ ಹಾನಿಕಾರಕ ವಸ್ತುಗಳ ದರ ಏರಿಕೆಯಾದ್ರೆ, ಬಳಸುವವರ ಸಂಖ್ಯೆ ಕಡಿಮೆಯಾದಂತಾಗಲಿದೆ. ಮತ್ತೊಂದೆಡೆ ಇವುಗಳ ನೂತನ ತೆರಿಗೆ ಪದ್ಧತಿ ಸೆಪ್ಟೆಂಬರ್ 22ರಿಂದ ಜಾರಿಗೆ ಬಂದರೂ ಧಿಢೀತ್ ಏರಿಕೆ ಆಗುವುದಿಲ್ಲ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
-
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ









Click it and Unblock the Notifications