WhatsAppನಿಂದ ಹೊಸ ಫೀಚರ್: ವೀಡಿಯೊ ಕರೆ ಈಗ ಸುಲಲಿತ
ಬೆಂಗಳೂರು, ಜುಲೈ 24: ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಈಗ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದ್ದು, ಇದು ಬಳಕೆದಾರರಿಗೆ ವಿಡಿಯೋ ಕರೆ ಮಾಡಲು ಮತ್ತಷ್ಟು ಸರಳತೆಯನ್ನು ತಂದಿದೆ. ಈ ಮೂಲಕ ಬಳಕೆದಾರರಿಗೆ ಹೆಚ್ಚು ಬಳಕೆಸ್ನೇಹಿಯಾಗಿ ಮಾರ್ಪಟ್ಟಿದೆ.
ವಾಟ್ಸಾಪ್ ವಿಡಿಯೋ ಕಾಲ್ ವೇಳೆ ಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪೋರ್ಟ್ರೈಟ್ ಮೂಡ್ ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್‌ನಿಂದ ವಿಡಿಯೋ ಕಾಲ್ ಮಾಡುವ ಬಳಕೆದಾರರು ಮೊಬೈಲ್‌ನ್ನು ಪೋರ್ಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್ ಯಾವ ಮೂಡ್‌ನಲ್ಲಾದರೂ ಕರೆ ಮಾಡಿ ಸಂಭಾಷಣೆ ನಡೆಸಬಹುದಾಗಿದ್ದು, ಹೊಸ ಫೀಚರ್ ಇದಕ್ಕೆ ಹೊಂದಿಕೊಳ್ಳಲಿದೆ.

ವಿಡಿಯೋ ಕಾಲ್ ವೇಳೆ ಲ್ಯಾಂಡ್‌ಸ್ಕೇಪ್ ಮೂಡ್‌ನಲ್ಲಿ ಮೊಬೈಲ್ ಇಟ್ಟು ಮಾತನಾಡಲು ಬಳಕೆದಾರರು ಬಲು ಪ್ರಯಾಸ ಪಡುತ್ತಿದ್ದರು. ಆದರೆ ಇದೀಗ ಬಳಕೆದಾರರು ಮೊಬೈಲ್‌ನ್ನು ಲ್ಯಾಂಡ್‌ಸ್ಕೇಪ್ ಮೂಡ್‌ನತ್ತ ತಿರುಗಿಸಿದರೆ ವಿಡಿಯೋ ಕಾಲ್‌ಗೆ ಯಾವುದೇ ಸಮಸ್ಯೆಯಾಗಲ್ಲ. ಈಗ ವಿಡಿಯೋ ಕಾಲ್‌ನಲ್ಲಿರುವ ವ್ಯಕ್ತಿ ಅದಲು ಬದಲಾಗಿ ಕಾಣುವುದಿಲ್ಲ.
ಲ್ಯಾಂಡ್‌ಸ್ಕೇಪ್ ಮೂಡ್ ವಿಡಿಯೋ ಕಾಲ್ ಜೊತೆಗೆ ಕಾಲ್ ಸೈಲೆಂಟ್ ಫೀಚರನ್ನು ವ್ಯಾಟ್ಸ್ಆ್ಯಪ್ ಪರಿಚಯಿಸಿದೆ. ಈ ಮೂಲಕ ಅನಗತ್ಯ, ಸ್ಪ್ಯಾಮ್ ಕಾಲ್, ಅಪರಿಚಿತ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ವ್ಯಾಟ್ಸ್ಆ್ಯಪ್ ಸೆಟ್ಟಿಂಗ್ ಮೂಲಕ ಪ್ರೈವೈಸ್ ಕಾಲ್ ಆಯ್ಕೆ ಮಾಡಿದರೆ ಕಿರಿಕಿರಿಯಿಂದ ದೂರ ಉಳಿಯಲು ಸಾಧ್ಯವಿದೆ. ಅಪರಿಚಿತ ಮತ್ತು ಸ್ಪಾ್ಯಮ್ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್ ಮಾಡುವ ಹೊಸ ಫೀಚರನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ.
ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್‌ನಲ್ಲಿ ಸೈಲೆಂಟ್ ಅನ್‌ನೋನ್ ನಂಬರ್ಸ್ ಆಯ್ಕೆಯನ್ನು ಎನೇಬಲ್ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್ ಸೈಲೆಂಟ್ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್ ಬಗ್‌ರ್, ಈಗ ವಾಟ್ಸಾಪ್ ಅನ್‌ನೋನ್ ಕಾಲ್‌ಗಳನ್ನು ಸೈಲೆಂಟ್ ಮಾಡಲಿದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಇದಲ್ಲದೆ ವಾಟ್ಸಾಪ್ ಚಾಟ್ ಟ್ರಾನ್ಸ್‌ಫರ್ ಆಯ್ಕೆಯನ್ನು ನೀಡಿದೆ. ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವಾಟ್ಸಾಪ್‌ನ ಚಾಟ್‌ಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಟ್ರಾನ್ಸ್‌ಫರ್ ಮಾಡಲು ಈ ಫೀಚರ್‌ನಿಂದ ಸಾಧ್ಯವಾಗಲಿದೆ. ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ ಟ್ರಾನ್ಸ್‌ಫರ್ ಸುಲಭವಾಗಿ ಮಾಡಲು ಸಾಧ್ಯವಿದೆ. ಹೊಸ ಫೀಚರ್‌ನಿಂದ ಐಫೋನ್‌ಗೂ ಚಾಟ್ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ. ಇದರ ಜೊತೆಗೆ ವ್ಯಾಟ್ಸ್ಆ್ಯಪ್ ಹೊಸ ಹೊಸ ಸ್ಟಿಕ್ಕರ್ ಬಿಡುಗಡೆ ಮಾಡಿದೆ.












Click it and Unblock the Notifications