ಬಿರಿಯಾನಿಗಾಗಿ ಜೊತೆಗಿದ್ದವನನ್ನ 55 ಬಾರಿ ಇರಿದು ಕೊಂದ 16 ವರ್ಷದ ಬಾಲಕ: ದೃಶ್ಯ ವೈರಲ್
ದೆಹಲಿ, ನವೆಂಬರ್ 23: ಕೇವಲ ಒಂದು ಬಿರಿಯಾನಿಗಾಗಿ ಬಾಲಕನೊಬ್ಬ ತನ್ನ ಸ್ನೇಹಿತನನ್ನೇ ಬರೋಬ್ಬರಿ 55 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿದೆ. ಬಾಲಕ ಕೊಲೆ ಮಾಡಿ ವಿಕೃತವಾಗಿ ನೃತ್ಯ ಮಾಡಿರುವ ಎದೆ ಝಲ್ ಎನಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆರೋಪಿ ಹದಿನಾರು ವರ್ಷದ ಬಾಲಕನಾಗಿದ್ದು, ಮೃತಪಟ್ಟ ಬಾಲಕ ಕೇವಲ ಹದಿನೇಳು ವರ್ಷದ ಬಾಲಕನಾಗಿದ್ದಾನೆ. ಪೂರ್ವ ದೆಹಲಿಯ ವೆಲ್‌ಕಮ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಕರಣದ ಆರೋಪಿ ಹದಿನಾರು ವರ್ಷದ ಬಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈತ ಕೇವಲ ಒಂದು ಬಿರಿಯಾನಿಗಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆರೋಪಿ ಬಿರಿಯಾನಿಗೆ ಹಣ ನೀಡಲು ನಿರಾಕರಿಸಿದ ಹದಿನೇಳು ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ರಭಸಕ್ಕೆ ಮೃತ ಬಾಲಕ ಆತ ಮೂರ್ಚೆ ಹೋಗಿದ್ದಾನೆ. ಬಳಿಕ ಆರೋಪಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಮುಖ, ಕುತ್ತಿಗೆ, ಬೆನ್ನು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ 55 ಬಾರಿ ಇರಿದಿದ್ದಾನೆ. ಅಲ್ಲದೇ ವಿಕೃತವಾಗಿ ನಡೆದುಕೊಂಡಿದ್ದು, ಮೃತದೇಹವನ್ನು ರಸ್ತೆ ಪಕ್ಕಕ್ಕೆ ಎಳೆದೊಯ್ದಿದ್ದಾನೆ. ಮೃತ ಬಾಲಕನ ರೋಧನೆ ಕೇಳಿ ಬಾಗಿಲು ತೆರೆದು ನೋಡಿದ ಸ್ಥಳೀಯರಿಗೆ ಆರೋಪಿ ಚಾಕು ತೋರಿಸಿ ಬೆದರಿಸಿದ್ದಾನೆ ಎನ್ನಲಾಗಿದೆ.
ಕೃತ್ಯದ ನಂತರ ಮೃತ ಬಾಲಕನ ತಲೆಕೂದಲು ಹಿಡಿದು ಎಳೆದು ಆರೋಪಿ ಕೊಲೆ ಮಾಡಿದ ಅದೇ ಜಾಗಕ್ಕೆ ತಂದು ಆರೋಪಿ ಹಾಕಿದ್ದಾನೆ. ಬಳಿಕ ತಾನು ಕೇಳಿ ಆತನ ಕೊಡದ ಹಣಕ್ಕಾಗಿ ಹುಡುಕಾಡಿದ್ದಾನೆ. ಮೃತ ಬಾಲಕನ ಜೇಬಿನಲ್ಲಿದ್ದ ₹350 ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆಯ 2.23 ನಿಮಿಷಗಳ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸದ್ಯ ಈತನನ್ನು ಬಂಧಿಸಲಾಗಿದೆ. ಆತನಿಂದ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದ ಸಂದರ್ಭದಲ್ಲಿ ಆರೋಪಿ ಮದ್ಯ ಸೇವಿಸಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.












Click it and Unblock the Notifications