Indigo Airlines: ದೆಹಲಿಯಿಂದ ಈ ನಗರಕ್ಕೆ ಸೆ.4ರಿಂದ ಇಂಡಿಗೋ ಕಾರ್ಯಾಚರಣೆ

ನವದೆಹಲಿ, ಆಗಸ್ಟ್ 17: ಮುಂದಿನ ಕೆಲವೇ ದಿನಗಳಲ್ಲಿ ದೆಹಲಿಯಿಂದ ಹೊಸ ಮಾರ್ಗಕ್ಕೆ ಕಾರ್ಯಾಚರಣೆ ನಡೆಸಲು ಇಂಡಿಗೋ ಏರ್‌ಲೈನ್ಸ್‌ಗೆ (Indigo Airlince) ಅನುಮೋದನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ತಿಳಿಸಿದೆ.

ಮುಂದಿನ ತಿಂಗಳೂ ಸೆಪ್ಟೆಂಬರ್ 6 ರಿಂದ ಇಂಡಿಗೋ ಏರ್‌ಲೈನ್ಸ್‌ನ ರಾಷ್ಟ್ರರಾಜಧಾನಿ ದೆಹಲಿಯಿಂದ ತಾಷ್ಕೆಂಟ್‌ಗೆ ಕಾರ್ಯಾಚರಣೆ ನಡೆಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅನುಮೋದಿಸಿದೆ. ದೆಹಲಿ ಮತ್ತು ತಾಷ್ಕೆಂಟ್ ನಡುವೆ ವಾರದಲ್ಲಿ ನಾಲ್ಕು ದಿನ ಪ್ರಯಾಣಿಕರನ್ನು ಇಂಡಿಗೋ ಹೊತ್ತೊಯ್ಯಲಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.

new-delhi-tashkent-direct-flight

ದೆಹಲಿ ಮತ್ತು ತಾಷ್ಕೆಂಟ್ ಮಧ್ಯೆ ಇಂಡಿಗೋ ವಿಮಾನಯಾನ ಸಂಸ್ಥೆಯ ನಾಲ್ಕು ದಿನಗಳ ಸಾಪ್ತಾಹಿಕ ತಡೆರಹಿತ ವಿಮಾನಗಳು ಕಾರ್ಯನಿರ್ವಹಿಸುತ್ತವೆ. ಈ ಮೂಲಕ ದೆಹಲಿಯಂತಹ ಮಹಾನಗರದಲ್ಲಿ ವಿಮಾನಯನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬೇಡಿಕೆ ಪೂರೈಸುವ ಸಂಬಂಧ ಇಂಡಿಗೋ ವಿಮಾನಯಾನ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ವ್ಯಾಪಾರಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಭಾರತ ಮತ್ತು ಉಜ್ಬೇಕಿಸ್ತಾನ್ ಮಧ್ಯೆ ಬಲವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.

ಇಂಡಿಗೋ ಮುಖ್ಯಸ್ಥರ ಪ್ರತಿಕ್ರಿಯೆ

IndiGo ನ ಜಾಗತಿಕ ಮಾರಾಟ ವಿಭಾಗದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಅವರು ಈ ಕುರಿತು ಪ್ರತಿಕ್ರಿಯಿಸಿ, ನಮ್ಮ 6E ನೆಟ್‌ವರ್ಕ್‌ ವ್ಯಾಪ್ತಿಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ತಾಣಗಳಲ್ಲಿಒಂದಾದ ದೆಹಲಿಯಿಂದ ಬೃಹತ್ ನಗರವಾಗಿರುವ ಮತ್ತು ಉಜ್ಬೇಕಿಸ್ತಾನ್‌ ರಾಜಧಾನಿ ತಾಷ್ಕೆಂಟ್‌ನ ಸಂಪರ್ಕ ಕಲ್ಪಿಸಲು ನಾವು ಉತ್ಸುಕರಾಗಿದ್ದಾರೆ ಎಂದರು.

ಸಾಂಸ್ಕೃತಿಕ ಕೇಂದ್ರವು ಆಗಿರುವ ಮತ್ತು ಗ್ರೇಟ್ ಸಿಲ್ಕ್ ಟ್ರೇಡ್-ಮಾರ್ಗದ ಉದ್ದಕ್ಕೂ ವ್ಯಪಾರಿ ಮಾರ್ಗ ಹೊಂದಿರುವ ತಾಷ್ಕೆಂಟ್ ಮಧ್ಯ ಏಷ್ಯಾದ ಹೃದಯಭಾಗದಲ್ಲಿ ಅನ್ವೇಷಿಸಲು ಪ್ರಯಾಣಿಕರನ್ನು ಆಹ್ವಾನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

new-delhi-tashkent-direct-flight

ಈ ತಾಷ್ಕೆಂಟ್ ನಗರವು ಈಶಾನ್ಯ ಉಜ್ಬೇಕಿಸ್ತಾನ್‌, ಕಝಕಿಸ್ತಾನ್‌ನ ಗಡಿಯ ಸಮೀಪದಲ್ಲಿದೆ. ಇದು ಭಾರತೀಯ ಪ್ರಯಾಣಿಕರಿಗೆ ಉಜ್ಬೇಕಿಸ್ತಾನ್‌ ನಂತೆಯೆ ಆಕರ್ಷಿಸುವ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಭಾರತ ಮತ್ತು ಉಜ್ಬೇಕಿಸ್ತಾನ್ ಎರಡು ರಾಷ್ಟ್ರಗಳ ನಡುವೆ ವಾಣಿಜ್ಯ ಮತ್ತು ಸಂಸ್ಕೃತಿಯ ಶ್ರೀಮಂತ ಸಂಬಂಧಗಳನ್ನು ಬೆಳೆಯಲು ಈ ಅನುಮೋದನೆ ಹೆಚ್ಚು ಸಹಾಯವಾಗಲಿದೆ.

ಇಂಡಿಗೋ ವಿಮಾನಯಾನ ಸೇವೆ

ಪ್ರಯಾಣಿಕರನ್ನು ಸೂಕ್ತ ಸಮಯಕ್ಕೆ ಉತ್ತಮ ನೆಟ್‌ವರ್ಕ್‌ ನಡಿ ನಿಗದಿತ ಸ್ಥಳಕ್ಕೆ ತಲುಪಿಸಲು ಬದ್ಧವಾಗಿದೆ. ಇಂಡಿಗೋ ಅಪ್ರತಿಮ ನೆಟ್‌ವರ್ಕ್‌ ತೊಂದರೆ ಇಲ್ಲದ ಸುರಕ್ಷಿತ ಪ್ರಯಾಣದ ಅನುಭವಗಳನ್ನು ನೀಡುತ್ತಾ ಬಂದಿದೆ.

ತಾಷ್ಕೆಂಟ್ ನಗರದ ಉಜ್ಬೇಕಿಸ್ತಾನ್‌ನ ಆಕರ್ಷಕ ರಾಜಧಾನಿ ಆಗಿದೆ. ಅಲ್ಲಿನ ಸಾಂಸ್ಕೃತಿಕ ಇತಿಹಾಸಕ್ಕೆ ರಾಜಧಾನಿ ಹೆಸರುವಾಸಿಯಾಗಿದೆ. ಇಲ್ಲಿ ವೈವಿಧ್ಯಮಯ ಆಕರ್ಷಕ ವಸ್ತುಸಂಗ್ರಹಾಲಯಗಳು ಮತ್ತು ಪ್ರದರ್ಶನ ಸಭಾಂಗಣಗಳನ್ನು ಹೊಂದಿದೆ. ಪ್ರವಾಸಿಗಿರಗೆ ಇದು ನೆಚ್ಚಿನ ತಾಣವು ಹೌದು. ಇಂಡಿಗೋ ತನ್ನ ಅಂತಾರಾಷ್ಟ್ರೀಯ ಕಾರ್ಯಾಚರಣೆ ಪಟ್ಟಿಯಲ್ಲಿ ಅಲ್ಮಾಟಿ, ಕಝಕಿಸ್ತಾನ್ ರಾಷ್ಟ್ರಗಳನ್ನು ಸೇರಿಸಿದೆ ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+