ಇಡೀ ಜಗತ್ತಿನಲ್ಲಿ ಮಾಲಿನ್ಯಕ್ಕೆ ದೆಹಲಿಯೇ ನಂಬರ್ 1; ಮುಂದೆ ಓದಿ ಟಾಪ್ 10 ಪಟ್ಟಿ

ನವದೆಹಲಿ, ಮಾರ್ಚ್ 22: ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಗಳಲ್ಲಿ ಭಾರತದ ರಾಜಧಾನಿ ದೆಹಲಿ ಗುರುತಿಸಿಕೊಂಡಿದೆ. 2021 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ವಾಯು ಗುಣಮಟ್ಟದ ಮಾನದಂಡವನ್ನು ಒಂದೇ ಒಂದು ದೇಶವು ಪೂರೈಸಲಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.

ಮಂಗಳವಾರ ಬಿಡುಗಡೆಯಾದ ಸಮೀಕ್ಷೆಯ ಪ್ರಕಾರ, ನವದೆಹಲಿ ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ರಾಜಧಾನಿಯಾಗಿದೆ. ಸ್ವಿಸ್ ಮಾಲಿನ್ಯ ತಂತ್ರಜ್ಞಾನ ಕಂಪನಿಯಾದ IQAir ನಡೆಸಿದ ಸಮೀಕ್ಷೆಯು 6,475 ನಗರಗಳಲ್ಲಿನ ಮಾಲಿನ್ಯದ ಅಂಕಿ-ಅಂಶಗಳನ್ನು ಆಧರಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕಳೆದ 2021 ರಲ್ಲಿ ಭಾರತದಲ್ಲಿನ ಒಟ್ಟಾರೆಯಾಗಿ ಮಾಲಿನ್ಯದ ಗುಣಮಟ್ಟವು ಹದಗೆಟ್ಟಿದೆ. ಬಾಂಗ್ಲಾದೇಶವು ವಿಶ್ವದ ಅತ್ಯಂತ ಕಲುಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಚಾಡ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತವು ವಿಶ್ವದಲ್ಲಿ ಐದನೇ ಅತ್ಯಂತ ಕಲುಷಿತ ರಾಷ್ಟ್ರ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

New Delhi Is World’s Most Polluted Capital, Indias 63 Cities in Top 100: Report

"2014 ರಿಂದ ಮಾಲಿನ್ಯದ ವಿರುದ್ಧ ಯುದ್ಧ ನಡೆಸುತ್ತಿರುವ ಚೀನಾ, 2021ರಲ್ಲಿ PM2.5 ಶ್ರೇಯಾಂಕದಲ್ಲಿ 22ನೇ ಸ್ಥಾನಕ್ಕೆ ಕುಸಿದಿತ್ತು, ಒಂದು ವರ್ಷದ ಹಿಂದೆ 32.6 ಮೈಕ್ರೋಗ್ರಾಂಗಳಷ್ಟು ಸುಧಾರಿಸಿದ್ದು, 14 ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ," ಎಂದು IQAir ಹೇಳಿದೆ.

ಅನೇಕ ಇತರ ವಾಯು ಗುಣಮಟ್ಟದ ವರದಿಗಳು ಮತ್ತು ಅಪ್ಲಿಕೇಶನ್‌ಗಳು ಉಪಗ್ರಹ ಅಂಕಿ-ಅಂಶಗಳ ಆಧಾರದ ಮೇಲೆ ಗಾಳಿಯ ಗುಣಮಟ್ಟದ ಮಾಹಿತಿಯನ್ನು ವರದಿ ಮಾಡಿದರೆ, ಈ ಸಮೀಕ್ಷೆಯನ್ನು "ನೆಲಮಟ್ಟದ ಮೇಲ್ವಿಚಾರಣಾ ಕೇಂದ್ರಗಳಿಂದ ಪಡೆದ PM2.5 ಮಾಪನಗಳಿಂದ ಪ್ರತ್ಯೇಕವಾಗಿ" ನಡೆಸಲಾಗಿದೆ. "ವಾಯು ಗುಣಮಟ್ಟದ ಡೇಟಾವನ್ನು ಸರ್ಕಾರಗಳು ನಿರ್ವಹಿಸುವ ನಿಯಂತ್ರಕ ಮೇಲ್ವಿಚಾರಣಾ ಕೇಂದ್ರಗಳು ಮತ್ತು ಖಾಸಗಿ ಒಡೆತನದ ವ್ಯಕ್ತಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳು ನಿರ್ವಹಿಸುವ ನಿಯಂತ್ರಕವಲ್ಲದ ಕೇಂದ್ರಗಳಿಂದ ಸಂಗ್ರಹಿಸಲಾಗಿದೆ. ವರದಿಯಲ್ಲಿ ಬಳಸಲಾದ ಹೆಚ್ಚಿನ ಡೇಟಾವನ್ನು ನೈಜ ಸಮಯದಲ್ಲಿ ಸಂಗ್ರಹಿಸಲಾಗಿದೆ.

New Delhi Is World’s Most Polluted Capital, Indias 63 Cities in Top 100: Report

ಟಾಪ್ 10 ವಿಶ್ವದ ಅತ್ಯಂತ ಮಾಲಿನ್ಯ ನಗರಗಳು:

ದೆಹಲಿ

ಢಾಕಾ

ಎನ್'ಜಮೆನಾ

ದುಶಾನ್ಬೆ

ಮಸ್ಕತ್

ಕಠ್ಮಂಡು

ಮನಮಾ

ಬಾಗ್ದಾದ್

ಬಿಷ್ಕೆಕ್

ತಾಷ್ಕೆಂಟ್

ಟಾಪ್ 10 ವಿಶ್ವದ ಅತ್ಯಂತ ಕಲುಷಿತ ದೇಶಗಳು:

ಬಾಂಗ್ಲಾದೇಶ

ಚಾಡ್

ಪಾಕಿಸ್ತಾನ

ತಜಕಿಸ್ತಾನ್

ಭಾರತ

ಕಿರ್ಗ್ರಿಸ್ತಾನ್

ಬಹ್ರೇನ್

ಇರಾಕ್

ನೇಪಾಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+