Airport: ಏರ್‌ಪೊರ್ಟ್ ಟರ್ಮಿನಲ್-2 ಸ್ಥಗಿತ: ಅತ್ಯಾಧುನಿಕ ತಂತ್ರಜ್ಞಾನ ಸಹಿತ ನವೀಕರಣ ಆರಂಭ
ಬೆಂಗಳೂರು, ಜನವರಿ 13: ರಾಜ್ಯ ರಾಜಧಾನಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ 2024ರಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಅತ್ಯಧಿಕ ಪ್ರಯಾಣಿಕರ ವಹೀವಾಟಿಗೆ ಬೆಂಗಳೂರು ಏರ್‌ಪೋರ್ಟ್ ಸಾಕ್ಷಿಯಾಗಿದೆ. ಮುಂಬೈನ ಏರ್‌ಪೋರ್ಟ್ ಪ್ರತಿಷ್ಠಿತ ಲೆವೆಲ್ 5 ಮಾನ್ಯತೆ ಪಡೆದುಕೊಂಡಿದೆ. ದೆಹಲಿಯ ಇಂದಿರಾಗಾಂಧಿ ಏರ್‌ಪೋರ್ಟ್ ನವೀಕರಣವನ್ನು ಪ್ರಕಟಿಸಿದೆ.
ಕರ್ನಾಟಕದ ಬೆಂಗಳೂರು ಏರ್‌ಪೋರ್ಟ್ ಮೈಲಿಗಲ್ಲು ಸಾಧಿಸಿದ ಬೆನ್ನಲ್ಲೆ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ಜಾಗತಿಕವಾಗಿ ಮೆಚ್ಚುಗೆ ಪಡೆದ ವಿಮಾನ ನಿಲ್ದಾಣಗಳ ಮಂಡಳಿ ಅಂತರರಾಷ್ಟ್ರೀಯ (ACI) ಯಿಂದ ಪ್ರತಿಷ್ಠಿತ ಲೆವೆಲ್ 5 ಮಾನ್ಯತೆ ಪಡೆದುಕೊಂಡಿದೆ.

ಬೆಂಗಳೂರು ಏರ್‌ಪೋರ್ಟ್ ಅದ್ಬುತ ವಿನ್ಯಾಸದ ಟರ್ಮಿನಲ್ 2 ಹೊಂದಿದ ಬಳಿಕ ಹಲವು ಪ್ರಶಸ್ತಿ, ಮನ್ನಣೆಗೆ ಪಾತ್ರವಾಗಿದೆ. ಇದೀಗ ದೆಹಲಿ ವಿಮಾನ ನಿಲ್ದಾಣವು ಟರ್ಮಿನಲ್ 2 ಅನ್ನು ವಿಶೇಷ ರೀತಿಯಲ್ಲಿ ನವೀಕರಣ ಮಾಡುವುದು, ಪುನರ್ ಆರಂಭಿಸುವುದಾಗಿ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ಕಾಣುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ದೆಹಲಿಯ, ಬೆಂಗಳೂರು, ಮುಂಬೈ ಮಹಾನಗರಗಳ ವಿಮಾನ ನಿಲ್ದಾಣಗಳಿಗೆ ದಶಕಗಳ ಐತಿಹಾಸಿಕ ಹಿನ್ನೆಲೆ ಇದೆ. ಈ ನಿಲ್ದಾಣಗಳು ಭಾರತದ ವಾಯುಯಾನ ಉದ್ಯಮದಲ್ಲಿ ಗಮನಾರ್ಹ ಪ್ರಗತಿ ಕಂಡ ಏರ್‌ಪೋರ್ಟ್‌ಗಳಾಗಿವೆ. ವಿಮಾನ ಪ್ರಯಾಣಿಕರಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.

ದೆಹಲಿ ಟರ್ಮಿನಲ್ 2 ಸ್ಥಗಿತ, ಏನೆಲ್ಲ ಅಭಿವೃದ್ಧಿ
ರಾಷ್ಟ್ರ ರಾಜಧಾನಿ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (IDAL) ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DAL) ಟರ್ಮಿನಲ್ 2 (T2) 40 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಈ ಟರ್ಮಿನಲ್ 2025 ಮತ್ತು 26 ರ ನಡುವೆ ಮಧ್ಯದ ಅವಧಿಗೆ ಕಾರ್ಯ ನಿರ್ವಹಿಸುವುದಿಲ್ಲ. ಇಲ್ಲಿಂದ ಪ್ರಯಾಣಿಕರ ವಹೀವಾಟು ಯಾವುದು ಇರುವುದಿಲ್ಲ. ಮುಂದಿನ ವರ್ಷ ಮಧ್ಯದ ಅವಧಿಗೆ ನವರೀಕರಣ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಟರ್ಮಿನಲ್ 2 ಸುಮಾರು 6 ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮುಚ್ಚಲಿದೆ. ಇದರ ಎಲ್ಲ ಕಾರ್ಯ ಚಟುವಟಿಕೆಗಳನ್ನು ಟರ್ಮಿನಲ್ 1ಕ್ಕೆ ಸ್ಥಳಾಂತರಿಸಲಾಗುತ್ತದೆ. ಸದ್ಯ ಈ ಏರ್‌ಪೋರ್ಟ್‌ನಲ್ಲಿ ದೇಶಿಯ ವಾಯು ಸಂಚಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಅದರ ಅಗತ್ಯತೆ ಪೂರೈಕೆ ಕಾರಣಕ್ಕೆ ಹಾಗೂ ಭವಿಷ್ಯ ದೃಷ್ಟಿಯಿಂದ ನವೀಕರಣ ಮಾಡಲಾಗುತ್ತದೆ.
ದೆಹಲಿ ಏರ್‌ಪೋರ್ಟ್: ನವೀಕರಣದ ವೈಶಿಷ್ಟ್ಯಗಳು
ದೆಹಲಿಯ ಈ ಏರ್‌ಪೋರ್ಟ್ ಟರ್ಮಿನಲ್ 2 ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿದೆ. ಅತ್ಯಾಧುನಿಕ ತಂತ್ರಜ್ಞಾನ ಸಹಿತ ತಲೆ ಎತ್ತಲಿದೆ. ಇಲ್ಲಿ 06 ಹೊಸ ಪ್ರಯಾಣಿಕರ ಬೋರ್ಡಿಂಗ್ ರೂಂ ನಿರ್ಮಿಸಲಾಗುತ್ತದೆ. ಸ್ವಾಯತ್ತ ಡಾಕಿಂಗ್ ತಂತ್ರಜ್ಞಾನ ಸುಸಜ್ಜಿತ ಬೋಡಿಂಗ್ ಸೇತುವೆ ಇದಾಗಿರಲಿದೆ. ವೀಲ್‌ಚೇರ್ ಮೂಲಕ ವಯೋವೃದ್ಧರು ಓಡಾಡಲು ಅನುಕೂಲವಾಗು ವ್ಯವಸ್ಥೆ ಮಾಡಲಾಗುತ್ತದೆ. ಸುರಕ್ಷಿತ ಸ್ವಿಂಗ್ ಬಾಗಿಲು ಇರಲಿದ್ದು, ಅದ್ಭುತ ವಿನ್ಯಾಸದಿಂದ ನಿರ್ಮಿಸಲಾಗುವುದು.
ಸುಧಾರಿತ ಮೂಲಸೌಕರ್ಯ ಒದಗಿಸುವ ಗುರಿ
ಆಧುನೀಕರಿಸಿದ HVAC ವ್ಯವಸ್ಥೆಗಳು (Heating, Ventilation, and Air Conditioning) ಅಳವಡಿಕೆ ಆಗಲಿದೆ. ಇದು ಎಲ್ಲ ಹವಾಮಾನದ ಪರಿಸ್ಥಿತಿಯಲ್ಲೂ ಒಳಗೆ ಸಮತೋಲನ ಕಾಪಾಡಲಿದೆ. ಅಗ್ನಿ ಸುರಕ್ಷತೆ ವ್ಯವಸ್ಥೆ, ಸ್ಮಾರ್ಟ್ ವಾಶ್‌ರೂಮ್‌ಗಳು ಇರಲಿವೆ.
ಮೊದಲಿಗಿಂತಲೂ ಉತ್ತಮ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನದ ಜೊತೆಗೆ ನಿರ್ಮಾಣಗೊಳ್ಳಲಿದೆ. ಸ್ಕೈಲೈಟ್‌ಗಳು, ಆಧುನಿಕ ಛಾವಣಿಗಳು, ಹೈ ರೆಸಿಲ್ಯೂಶನ್ ವಿಮಾನಗಳ ಮಾಹಿತಿ ಪ್ರದರ್ಶನ ವ್ಯವಸ್ಥೆ(FIDS), , ಸ್ಕ್ರೀನ್ಸ್ ಮತ್ತು ಸ್ಪಷ್ಟ ಸಂಕೇತಗಳ ಇರಲಿದ್ದು, ಇವು ಪ್ರಯಾಣಿಕರ ಅನುಕೂಲತೆ ಒದಗಿಸಲಾಗುವುದು ಎಂದು ಏರ್‌ಪೋರ್ಟ್‌ನ (DIAL) ಸಿಇಒ ವಿದೇಶ್ ಕುಮಾರ್ ಜೈಪುರಿಯರ್ ಹೇಳಿದರು.
ಈ ವಿಮಾನ ನಿಲ್ದಾದ ಟರ್ಮಿನಲ್-2 2026ರ ಹೊತ್ತಿಗೆ ಮತ್ತೆ ಪುನರ್ ಆರಂಭವನ್ನು ನಿರೀಕ್ಷಿಸಬಹುದಾಗದೆ. ಹೊಸ ವಿನ್ಯಾಸದಲ್ಲಿ ಗರಿಷ್ಠ ಪ್ರಯಾಣಿಕರ ಸೇವೆ ನಿರೀಕ್ಷೆಯೊಂದಿಗೆ ಮತ್ತೆ ಪುನಾರಂಭಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications