ಶಾಂತಿದೂತ ನರೇಂದ್ರ ಮೋದಿ-ಜೀವನಚರಿತ್ರೆ ಲೋಕಾರ್ಪಣೆ

ನವದೆಹಲಿ, ಮೇ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾರ್ಷಿಕೋತ್ಸವ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭ ಒದಗಿದೆ. ಪ್ರಧಾನಿ ಮೋದಿ ಅವರ ಕುರಿತ ಹೊಸ ಜೀವನಚರಿತ್ರೆ ಲೋಕಾರ್ಪಣೆಗೊಂಡಿದೆ.

Narendra Modi - Harbinger of Prosperity & Apostle of World Peace" ಹೆಸರಿನ ಜೀವನಚರಿತ್ರೆಯನ್ನು ಭಾರತೀಯ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ ಬಾಲಕೃಷ್ಣನ್ ಅವರು ಲೋಕಾರ್ಪಣೆ ಮಾಡಿದರು. 6 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಮೋದಿ ಅವರು ಕೈಗೊಂಡ ನಿರ್ಧಾರಗಳು, ಭಾರತಕ್ಕಾಗಿ ಕಂಡ ಕನಸುಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಮೋದಿ ಅವರ ಅಪರೂಪದ ಚಿತ್ರಗಳು, ಬಾಲ್ಯದ ಕಥೆಗಳು, ಕುತೂಹಲ ಅಂಕಿ ಅಂಶಗಳು ಈ ಕೃತಿಯಲ್ಲಿವೆ.

ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಇಂಟರ್ನೆಟ್ ನಲ್ಲಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಅಂತಾರಾಷ್ಟ್ರೀಯ ಜ್ಯೂರಿಸ್ಟ್ ಕೌನ್ಸಿಲ್, ಭಾರತದ ಬಾರ್ ಅಸೋಸಿಯೇಷನ್ಸ್ ಮುಖ್ಯಸ್ಥ ಆದೀಶ್ ಸಿ ಅಗರ್ವಾಲ, ಅಮೆರಿಕದ ಕವಿ, ಸಾಹಿತಿ ಎಲಿಸಬೇತ್ ಹೊರನ್ ಅವರು ಈ ಕೃತಿಯನ್ನು ರಚಿಸಿದ್ದಾರೆ.

New biography on PM Modi released

ಪ್ರಿಂಟ್ ಕಾಪಿ, ಇ ಬುಕ್ ಮಾದರಿಯಲಿ ಲಭ್ಯವಿರುವ ಈ ಕೃತಿ, ಇಂಗ್ಲೀಷ್, ಅರೇಬಿಕ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಫ್ರೆಂಚ್, ಜರ್ಮನ್, ಜಾಪನೀಸ್, ಮ್ಯಾಂಡ್ರೀನ್, ರಷ್ಯನ್ ಹಾಗೂ ಸ್ಪಾನೀಷ್ ಭಾಷೆಗಳಲ್ಲಿ ಲಭ್ಯವಿದೆ. ಭಾರತೀಯ ಭಾಷೆಗಳಾದ ಹಿಂದಿ, ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದುವಿನಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+