ಏನಿದು Online ಅಂಗಳದಲ್ಲಿ ಶಕ್ತಿಮಾನ್ ನಟನ Sexy ಮಾತು!?
ಮುಂಬೈ, ಆಗಸ್ಟ್ 10: ಶಕ್ತಿಮಾನ್ ಖ್ಯಾತಿಯ ಮುಕೇಶ್ ಖನ್ನಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. "ಸೆಕ್ಸ್ ಗಾಗಿ ಹುಡುಗರನ್ನು ಕರೆಯುವ ಮಹಿಳೆಯರು ನಿಜವಾಗಿಯೂ ಮಹಿಳೆಯರೇ ಅಲ್ಲ, ಅವರು ದಂಧೆ ಮಾಡುವವರು," ಎಂದಿರುವುದು ನೆಟ್ಟಿಗರನ್ನು ಕೆರಳಿಸಿದೆ.
ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ನಟ ಮುಕೇಶ್ ಖನ್ನಾ, ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ತಮ್ಮ ಅಭಿಪ್ರಾಯವನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಾರೆ. ಹೀಗೆ ಒಂದು ವಿಷಯದ ಬಗ್ಗೆ ಅವರು ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅವರು ಇತ್ತೀಚಿಗೆ ಮಾಡಿರುವ ವಿಡಿಯೋದಲ್ಲಿ, "ಹುಡುಗರನ್ನು ಲೈಂಗಿಕತೆಗಾಗಿ ಕೇಳುವ ಹುಡುಗಿಯರ ಪಾತ್ರವನ್ನು ಪ್ರಶ್ನಿಸಿದ್ದಾರೆ. ಅಂತಹ ಮಹಿಳೆಯರು ಮಹಿಳೆಯರಲ್ಲ, ಅವರೆಲ್ಲ ದಂಧೆ (ವ್ಯಾಪಾರ) ಮಾಡುವವರು," ಎಂದಿದ್ದಾರೆ. ಇವರು ನೀಡಿರುವ ಹೇಳಿಕೆಗೆ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.

ಮಹಿಳೆಯರು ಮತ್ತು ಸೆಕ್ಸ್ ಬಗ್ಗೆ ಶಕ್ತಿಮಾನ್ ನಟ ಹೇಳಿದ್ದೇನು?
ಶಕ್ತಿಮಾನ್ ಖ್ಯಾತಿಯ ನಟ ಮುಕೇಶ್ ಖನ್ನಾ ಇತ್ತೀಚಿಗೆ ಮಾಡಿರುವ "ನೀವು ಅಂತಹ ಹುಡುಗಿಯರನ್ನು ಇಷ್ಟಪಡುತ್ತೀರಾ?"(Kya Aapko Bhi Aisi Ladkiyan Lubhati Hain) ಎಂಬ ಟೈಟಲ್ ಹೊಂದಿರುವ ವಿಡಿಯೋದಲ್ಲಿ ಹೀಗೆ ಹೇಳಿಕೆ ನೀಡಿದ್ದಾರೆ. "ಯಾವುದೇ ಹುಡುಗಿ ಹುಡುಗನಲ್ಲಿ ಅವನೊಂದಿಗೆ ಸೆಕ್ಸ್ ಮಾಡಬೇಕೆಂದು ಹೇಳಿದರೆ ಅವಳು ಹುಡುಗಿ ಅಲ್ಲ, ಅವಳು ಲೈಂಗಿಕ ಕಾರ್ಯಕರ್ತೆ. ಏಕೆಂದರೆ ಸುಸಂಸ್ಕೃತ ಸಮಾಜಕ್ಕೆ ಸೇರಿದ ಸಭ್ಯ ಹುಡುಗಿ ಎಂದಿಗೂ ಇಂತಹ ಮಾತುಗಳನ್ನು ಹೇಳುವುದಿಲ್ಲ," ಎಂದು ಹೇಳಿದ್ದಾರೆ.

ಹುಡುಗಿಯರ ಬಗ್ಗೆ ಮುಗ್ಧ ಪುರುಷರಿಗೆ ಎಚ್ಚರಿಕೆ ಸಂದೇಶ
ಅಂತರ್ಜಾಲದಲ್ಲಿ ಮಹಿಳೆಯರಿಂದ ಆಮಿಷಕ್ಕೆ ಒಳಗಾಗುವ ಬಗ್ಗೆ ಎಚ್ಚರ ವಹಿಸುವಂತೆ ಹುಡುಗರಿಗೆ ನಟ ಮುಕೇಶ್ ಖನ್ನಾ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಮಹಿಳೆಯರು ಈಗ ದಂಧೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. 'ಮುಗ್ಧ ಪುರುಷರನ್ನು' ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ," ಎಂದು ಅವರು ಆರೋಪಿಸಿದ್ದರು. ಅಷ್ಟೇ ಅಲ್ಲ, ಮಹಿಳೆಯರು 'ಮಿತಿ'ಯೊಳಗೆ ಇರುವಂತೆ ಮತ್ತು ಸಂಪ್ರದಾಯಗಳನ್ನು ಗೌರವಿಸುವಂತೆಯೂ ಮುಖೇಶ್ ಕೇಳಿಕೊಂಡಿದ್ದರು.

ಶಕ್ತಿಮಾನ್ ನಟನನ್ನು ಸೆಕ್ಸಿಸ್ಟ್ ಎಂದ ನೆಟ್ಟಿಗರು
ನಗ್ನ ಚಿತ್ರಗಳನ್ನು ಕಳುಹಿಸುವ ಮೂಲಕ ಉಚಿತ ಲೈಂಗಿಕತೆಯ ಆಫರ್ ನೀಡುವ ಯುವತಿಯ ಖಾತೆಯಿಂದ ಸಂದೇಶಗಳು ಬರುತ್ತವೆ. ಹಾಟ್ ಫೋಟೋಗಳನ್ನು ನೋಡಿ ಬಲೆಗೆ ಬೀಳುವ ಯುವಕರಿಗೆ ನಂತರದಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗುತ್ತದೆ. ಇತ್ತೀಚಿಗೆ ನಡೆದಿರುವ ಹಲವು ಪ್ರಕರಣಗಳಲ್ಲಿ ಇಂಥ ನಕಲಿ ಖಾತೆಗಳಿಂದ ಸಂದೇಶ ಸ್ವೀಕರಿಸಿರುವುದನ್ನು ಬಹುತೇಕ ಜನರು ಒಪ್ಪಿಕೊಂಡಿದ್ದಾರೆ ಎಂಬುದನ್ನು ಮುಕೇಶ್ ಖನ್ನಾ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದರು. ಈ ವಿಡಿಯೋವನ್ನು ನೋಡಿದ ಅನೇಕ ನೆಟ್ಟಿಗರು ಮುಖೇಶ್ ಖನ್ನಾ ಅಭಿಪ್ರಾಯಗಳಿಗೆ ಕರೆ ಮಾಡಿ ಅವರನ್ನು 'ಸೆಕ್ಸಿಸ್ಟ್' ಎಂದು ಕರೆದಿದ್ದಾರೆ.

ಕ್ಷಮಿಸಿ ಶಕ್ತಿಮಾನ್, ನೀವು ತಪ್ಪಾಗಿದ್ದೀರಿ
ನಟ ಮುಕೇಶ್ ಖನ್ನಾ ವಿಡಿಯೋದ ಕ್ಲಿಪ್ ವೈರಲ್ ಆಗುತ್ತಿದ್ದಂತೆ, ಜನರ ಕಾಮೆಂಟ್‌ಗಳು ತೀಕ್ಷ್ಣವಾಗುತ್ತಿವೆ. "ಶಕ್ತಿ ಮತ್ತು ಮಾನ ಎರಡೂ ನಿಮ್ಮನ್ನು ತೊರೆದು ಹೋಗಿವೆ" ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಕ್ಷಮಿಸಿ ಶಕ್ತಿಮಾನ್, ಈ ಬಾರಿ ನೀವು ಇಲ್ಲಿ ತಪ್ಪಾಗಿದ್ದೀರಿ," ಎಂದು ಬರೆದಿದ್ದಾರೆ. "ಅರೇ ಶಕ್ತಿಮಾನ್, ನೀವು ಯಾವ ದಾರಿಯಲ್ಲಿದ್ದೀರಿ," ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.
-
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications