ಬಾಂಗ್ಲಾ ಜೆನ್-ಝೀ ಹೋರಾಟವೇ ನಮಗೆ ಸ್ಫೂರ್ತಿ ಎಂದ AISA ನಾಯಕಿ ನೇಹಾ ಬೋರಾ: ಬಿಜೆಪಿ ಫುಲ್‌ ಗರಂ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಜೆನ್-ಝೀ ಯುವಕರ ಬೃಹತ್ ಪ್ರತಿಭಟನೆಗಳು ಮತ್ತು ಅಲ್ಲಿನ ಸರ್ಕಾರ ಪತನಗೊಂಡ ಘಟನೆಗಳು ಇದೀಗ ಭಾರತದ ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿವೆ. ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ಬಾಂಗ್ಲಾದೇಶದ ಯುವಜನರ ಹೋರಾಟವೇ ನಮಗೆ ಸ್ಫೂರ್ತಿ ಎಂದು ಹೇಳಿರುವುದು ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ನೇಹಾ ಬೋರಾ ಅವರ ಈ ಹೇಳಿಕೆಗೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಬೆಂಬಲ ಸೂಚಿಸಿದ್ದು, ಸರ್ಕಾರ ಬದಲಾವಣೆಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇನ್ನೊಂದೆಡೆ, ಈ ಹೇಳಿಕೆಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ ( ಬಿಜೆಪಿ) ತೀವ್ರ ವಾಗ್ದಾಳಿ ನಡೆಸಿದೆ.

Neha Bora Controversy AISA Leader Calls Bangladesh Gen Z Protest an Inspiration BJP Slams Left

ಬಾಂಗ್ಲಾದೇಶ ಜೆನ್ ಝೀ ಹೋರಾಟ ಸ್ಪೂರ್ತಿ ಎಂದ ನೇಹಾ ಬೋರಾ

ಎಡಪಂಥೀಯ ವಿದ್ಯಾರ್ಥಿ ಸಂಘಟನೆ ನಾಯಕಿ ನೇಹಾ ಬೋರಾ ಅವರು ಇತ್ತೀಚೆಗೆ ಬಾಂಗ್ಲಾದೇಶದ ಅತಿದೊಡ್ಡ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ವಿದ್ಯಾರ್ಥಿ ರಂಗ ಆಯೋಜಿಸಿದ್ದ ಸಮ್ಮೇಳನವೊಂದನ್ನ ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ್ದರು.

ಈ ವೇಳೆ ಅವರು, "ಭಾರತದಲ್ಲಿ ಪ್ರಸ್ತುತ ಬೆಳೆಯುತ್ತಿರುವ ಜೆನ್-ಝೀ ಯುವಕರ ಪ್ರತಿಭಟನೆಗಳಿಗೆ ಬಾಂಗ್ಲಾದೇಶದ ಯುವಜನರ ಹೋರಾಟವೇ ನಿಜವಾದ ಸ್ಫೂರ್ತಿ. ಬಾಂಗ್ಲಾದೇಶದ ಯುವಕರು ತೋರಿದ ದಿಟ್ಟತನ ಹಾಗೂ ಅವರ ಅನುಭವಗಳು ಭಾರತದ ಯುವಕರಿಗೆ ಮುಂದಿನ ದಾರಿ ತೋರಿಸಲಿವೆ" ಎಂದು ಹೇಳಿಕೆ ನೀಡಿದ್ದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆಗಳು ಆರಂಭವಾದವು. ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲೂ ಅರಾಜಕತೆ ಸೃಷ್ಟಿಸಲು ಎಡಪಂಥೀಯ ಸಂಘಟನೆಗಳು ಯತ್ನಿಸುತ್ತಿವೆ ಎಂಬ ಆರೋಪಗಳು ಕೇಳಿಬಂದವು.

ಪ್ರಶಾಂತ್ ಭೂಷಣ್ ಬೆಂಬಲ

ನೇಹಾ ಬೋರಾ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ನೇಹಾ ಬೆಂಬಲಕ್ಕೆ ನಿಂತಿದ್ದಾರೆ. ಬಾಂಗ್ಲಾದೇಶದ ಹೋರಾಟವನ್ನು ಉಲ್ಲೇಖಿಸಿ ಮಾತನಾಡಿರುವ ಅವರು, "ದೇಶದಲ್ಲಿ ಆಡಳಿತ ಬದಲಾವಣೆ ಆಗಬೇಕು. ಅಸ್ತಿತ್ವದಲ್ಲಿರುವ ಸರ್ಕಾರವನ್ನ ಪ್ರಶ್ನಿಸುವುದು ಮತ್ತು ಬದಲಾವಣೆಗೆ ಆಗ್ರಹಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಾಗೂ ಪ್ರಜಾಸತ್ತಾತ್ಮಕ ಹಕ್ಕಾಗಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಮತ್ತು ಯುವಕರು ದೇಶದ ಆಗುಹೋಗುಗಳ ಬಗ್ಗೆ ದನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕು, ಇದನ್ನು ದೇಶದ್ರೋಹ ಎಂದು ಬಿಂಬಿಸಬಾರದು ಎಂದು ಪ್ರಶಾಂತ್ ಹೇಳಿದ್ದಾರೆ.

ಅರಾಜಕತೆ ಸೃಷ್ಟಿಸುವ ಹುನ್ನಾರ ಎಂದ ಬಿಜೆಪಿ

ಇತ್ತ ನೇಹಾ ಬೋರಾ ಹಾಗೂ ಪ್ರಶಾಂತ್ ಭೂಷಣ್ ಅವರ ಹೇಳಿಕೆಗಳನ್ನ ಆಡಳಿತಾರೂಢ ಬಿಜೆಪಿ ಅತ್ಯಂತ ಕಟುವಾಗಿ ಟೀಕಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, "ಕೆಲವು ವಿಪಕ್ಷಗಳು ಮತ್ತು ಎಡಪಂಥೀಯ ಚಿಂತಕರು ಭಾರತದಲ್ಲಿ ಕ್ಷಿಪ್ರಕ್ರಾಂತಿ ನಡೆಸಲು ಸಂಚು ರೂಪಿಸುತ್ತಿದ್ದಾರೆ. ಭಾರತವನ್ನ ಮತ್ತೊಂದು ಬಾಂಗ್ಲಾದೇಶವನ್ನಾಗಿ ಮಾಡಲು ಅವರು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಈ ಹೇಳಿಕೆಗಳೇ ಉದಾಹರಣೆ" ಎಂದು ಕಿಡಿಕಾರಿದ್ದಾರೆ.

ಭಾರತವು ಬಲಿಷ್ಠ ಪ್ರಜಾಪ್ರಭುತ್ವವನ್ನ ಹೊಂದಿದ್ದು, ಇಲ್ಲಿ ಜನಾದೇಶದ ಮೂಲಕ ಸರ್ಕಾರಗಳು ಆಯ್ಕೆಯಾಗುತ್ತವೆ. ಆದರೆ ವಿಪಕ್ಷಗಳು ಹಿಂಬಾಗಿಲಿನಿಂದ ಅಥವಾ ಹೋರಾಟದ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿವೆ. ಇಂತಹ ಕೃತ್ಯಗಳನ್ನು ಭಾರತದ ಜನತೆ ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+