NEET ಪ್ರತಿಭಟನೆ: ಯುವಜನರ ಮೇಲೆ ಬಲಪ್ರಯೋಗ ಬೇಡ, ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದ ಸುಪ್ರೀಂ ಕೋರ್ಟ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ಯುವಜನತೆ ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಸಲಹೆ ನೀಡಿದೆ. ಪ್ರತಿಭಟನಾನಿರತ ಯುವಜನರು ಹಾಗೂ ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ಅಥವಾ ಕಠಿಣ ಕ್ರಮ ಕೈಗೊಳ್ಳುವ ಬದಲು, ಅವರೊಂದಿಗೆ ಮಾತುಕತೆ ನಡೆಸಿ, ಕೌನ್ಸಿಲಿಂಗ್ ನೀಡಿ ಸಮಾಧಾನಪಡಿಸುವುದು ಸೂಕ್ತ ಮಾರ್ಗ ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸಿಜೆಐ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು, "ಯುವ ಪೀಳಿಗೆಯನ್ನ ಸಮಾಧಾನಪಡಿಸಲು ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ ಒಳ್ಳೆಯ ಮಾತುಕತೆ. ಅವರ ಮನವಿಯನ್ನ ಆಲಿಸಿ, ಸೂಕ್ತ ಸಲಹೆ ಮತ್ತು ಕೌನ್ಸಿಲಿಂಗ್ ನೀಡುವುದು ತುಂಬ ಮುಖ್ಯ.

NEET

ಕೆಲವು ಕಡೆಗಳಲ್ಲಿ ಕಲ್ಲು ತೂರಾಟದಂತಹ ಘಟನೆಗಳು ನಡೆದಿದ್ದರೂ ಸಹ ಯುವಕರ ಮೇಲೆ ಬಲಪ್ರಯೋಗ ಮಾಡುವುದು ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚು ಮಾಡಿದಂತಾಗುತ್ತದೆ," ಎಂದು ಪೀಠವು ಅಭಿಪ್ರಾಯಪಟ್ಟಿತು.

ಪ್ರಜಾಸತ್ತಾತ್ಮಕ ಚಳವಳಿಗಳಲ್ಲಿ ಶಾಂತಿಯುತವಾಗಿ ಆರಂಭವಾಗುವ ಪ್ರತಿಭಟನೆಗಳು ಕೆಲವೊಮ್ಮೆ ಹಾದಿ ತಪ್ಪುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರು ಅತ್ಯಂತ ಸಂಯಮದಿಂದ ವರ್ತಿಸಬೇಕು. ಹಿಂಸಾಚಾರಕ್ಕೆ ಆಸ್ಪದ ನೀಡದಂತೆ ಸ್ಥಿತಿಗತಿಯನ್ನ ತುಂಬ ಜಾಣ್ಮೆಯಿಂದ ನಿಭಾಯಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ವಾದ

ನಿವೃತ್ತ ಏರ್ ಫೋರ್ಸ್ ಅಧಿಕಾರಿ ಮನೀಶ್ ಕುಮಾರ್ ಸೋಲಂಕಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮೇಲಿನ ಮಾತುಗಳನ್ನ ಹೇಳಿದೆ. ಜುಲೈ 20 ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದಿದ್ದು, ಅದರ ಆಯೋಜಕರ ವಿರುದ್ಧ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಮತ್ತು ಸರ್ಕಾರ ಹಿನ್ನೆಡೆ ಅನುಭವಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲ ರಿಜ್ವಾನ್ ಅಹಮದ್ ವಾದಿಸಿದರು.

"ಪ್ರತಿಭಟನೆಯ ಹೆಸರಿನಲ್ಲಿ ಕಲ್ಲು ತೂರಾಟ ನಡೆಸುವವರನ್ನು ಸುಮ್ಮನೆ ಬಿಡುವುದು ತಪ್ಪು. ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಮತ್ತು ನ್ಯಾಯಾಂಗ ಹಿಂಜರಿಯಬಾರದು. ಪ್ರತಿಭಟನೆಯಲ್ಲಿ ತೊಡಗಿರುವ ಯುವಕರಿಗೆ ಕನಿಷ್ಠ ಏಳು ದಿನಗಳ ಸಮುದಾಯ ಸೇವೆಯನ್ನ ಶಿಕ್ಷೆಯಾಗಿ ವಿಧಿಸಬೇಕು," ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದರು.

ವಿಚಾರಣೆ ಆಗಸ್ಟ್ 18ಕ್ಕೆ ಮುಂದೂಡಿಕೆ

ಆದಾಗ್ಯೂ, ಅರ್ಜಿದಾರರ ವಾದವನ್ನು ಆಲಿಸಿದ ಬಳಿಕವೂ ಸುಪ್ರೀಂ ಕೋರ್ಟ್ ಶಾಂತಿ ಮತ್ತು ಸಮಾಧಾನದ ಹಾದಿಯನ್ನೇ ಪ್ರತಿಪಾದಿಸಿದೆ. ಸಣ್ಣಪುಟ್ಟ ಹಿಂಸಾಚಾರದ ಘಟನೆಗಳನ್ನ ಸರ್ಕಾರ ಮತ್ತು ಕಂದಾಯ ಅಥವಾ ಪೊಲೀಸ್ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಯುವಜನತೆಯಲ್ಲಿ ಮೂಡಿರುವ ಆಕ್ರೋಶವನ್ನ ಪ್ರೀತಿ ಮತ್ತು ಮುಕ್ತ ಮಾತುಕತೆಯಿಂದ ಮಾತ್ರ ಶಮನಗೊಳಿಸಲು ಸಾಧ್ಯ ಎಂದು ಸಿಜೆಐ ಪುನರುಚ್ಛರಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಇತರ ಎಲ್ಲಾ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನೂ ಜೋಡಿಸಲಾಗಿದ್ದು, ಮುಂದಿನ ಹಂತದ ಸುದೀರ್ಘ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+