NEET: ಮಹಾರಾಷ್ಟ್ರದಲ್ಲಿ 11 ಅಂಕಗಳಿಂದ ಅವಕಾಶ ಕೈತಪ್ಪಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಏನಿದೆ?
Neet Row: ನೀಟ್ ಪರೀಕ್ಷೆ ಅಕ್ರಮ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ವಿವಾದ ತಣ್ಣಗಾಗದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಕರ್ಣತ್ ತಾಲೂಕಿನ ಜಲಾಲ್‌ಪುರ ನಿವಾಸಿ ಅಂಕಿತಾ ಸಂಗ್ಲೆ (19) ಎಂಬ ವಿದ್ಯಾರ್ಥಿನಿ ಆಹತ್ಯಹತ್ಯೆ ಮಾಡಿಕೊಂಡವರು. ಆನ್‌ಲೈನ್ ಕೋಚಿಂಗ್ ಮೂಲಕ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅಂಕಿತಾ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದು ಅವರ ತಂದೆ ಮತ್ತು ಅಣ್ಣ ಆಷಾಢ ಏಕಾದಶಿಯ ಹಿನ್ನೆಲೆಯಲ್ಲಿ ಪಂಢರಪುರಕ್ಕೆ ತೆರಳಿದ್ದರು. ಸಂಜೆ ಸುಮಾರು 5:30ರ ವೇಳೆಗೆ ನೆರೆಹೊರೆಯವರು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಏನಿದೆ?
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ವಿದ್ಯಾರ್ಥಿನಿ ಅಂಕಿತಾ ಬರೆದಿದ್ದಾರೆ ಎನ್ನಲಾದ ಆತ್ಮಹತ್ಯೆ ಪತ್ರವೊಂದು ಸಿಕ್ಕಿದೆ. ಅದರಲ್ಲಿ ತಮ್ಮ ಹೆತ್ತವರಲ್ಲಿ ಕ್ಷಮೆ ಕೋರಿರುವ ಆಕೆ, 'ಅಮ್ಮಾ-ಅಪ್ಪಾ ನನಗಾಗಿ ನೀವು ತುಂಬಾ ಶ್ರಮಪಟ್ಟಿದ್ದೀರಿ. ಆದರೆ ನಿಮ್ಮ ಆಸೆಯನ್ನು ಈಡೇರಿಸಲು ನನ್ನಿಂದ ಸಾಧ್ಯ ಆಗಲಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ನಾನು ಕೇವಲ ಸಾಮಾನ್ಯ ವಿದ್ಯಾರ್ಥಿನಿ ಆಗಿದ್ದು, ಕುಟುಂಬದ ನಿರೀಕ್ಷೆಗಳನ್ನು ನಿಜ ಮಾಡಲು ಸಾಧ್ಯವಾಗಲಿಲ್ಲ. ಈ ಸಾವಿಗೆ ಯಾರೂ ಹೊಣೆಗಾರರಲ್ಲ,' ಎಂದು ಬರೆದಿದ್ದಾಳೆ ಅಂತಾ ತಿಳಿದುಬಂದಿದೆ.
ಕೇವಲ 11 ಅಂಕಗಳಿಂದ ತಪ್ಪಿದ ಅವಕಾಶ
ಅಂಕಿತಾಗೆ ನೀಟ್ ಮರುಪರೀಕ್ಷೆಯಲ್ಲಿ 166 ಅಂಕಗಳು ಬಂದಿದ್ದವು. ಆದರೆ ಕಟ್‌ಆಫ್ ಅಂಕಗಳು 177 ಆಗಿದ್ದರಿಂದ ಕೇವಲ 11 ಅಂಕಗಳ ಅಂತರದಲ್ಲಿ ಆಕೆಗೆ ವೈದ್ಯಕೀಯ ಸೀಟು ಕೈತಪ್ಪಿತ್ತು. ಇದರಿಂದ ಮನನೊಂದ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿರುವ ಕರ್ಣತ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಎನ್‌ಸಿಪಿ ಶಾಸಕ ರೋಹಿತ್ ಪವಾರ್, 'ಪರೀಕ್ಷೆಯ ವೈಫಲ್ಯಗಳಿಗೆ ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳಬಾರದು. ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳದೆ, ಕುಟುಂಬದ ಬಗ್ಗೆ ಯೋಚಿಸಿ ದಿಟ್ಟತನದಿಂದ ಜೀವನವನ್ನು ಎದುರಿಸಬೇಕು,' ಎಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.


Click it and Unblock the Notifications
