ಇನ್ಮುಂದೆ ಜಡ್ಜುಗಳನ್ನು ಲಾರ್ಡ್ ಎಂದು ಸಂಬೋಧಿಸಬೇಡಿ

ಬ್ರಿಟೀಷರ ಕೊಡುಗೆಯಾದ ಈ ಪದಪುಂಜಗಳು ಇನ್ನು ನಮಗೆ ಬೇಡವಾಗಿದೆ. ಆದರೆ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳನ್ನು ಗೌರವಯುತವಾಗಿ ಮತ್ತು ಘನತೆಯಿಂದ ಅಗತ್ಯವಾಗಿ ಸಂಬೋಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ( ಗಾಂಧಿ ಜಯಂತಿ ದಿನ 'ಹಿಸ್ ಎಕ್ಸಲೆನ್ಸಿ' ಥೇಮ್ಸ್ ನದಿಗೆ )
ನಮ್ಮನ್ನು ಹಾಗೆಲ್ಲಾ ಸಂಬೋಧಿಸುವುದು ಕಡ್ಡಾಯ ಎಂದು ನಾವು ಯಾವಾಗ ಹೇಳಿದ್ದೇವೆ. ಆದರೆ ನಮ್ಮನ್ನು ಗೌರವಯುತವಾಗಿ ಸಂಬೋಧಿಸಿದರೆ ಸಾಕು ಎಂದು ಸುಪ್ರೀಂಕೋರ್ಟಿನ ಭಾವಿ ಮುಖ್ಯನ್ಯಾಯಮೂರ್ತಿಯಾಗಲಿರುವ ಕನ್ನಡಿಗರೇ ಆದ ಜಸ್ಟೀಸ್ ಎಚ್ಎಲ್ ದತ್ತು ಮತ್ತು ಎಸ್ಎ ಬೋಡ್ಬೆ ಅವರ ನ್ಯಾಯಪೀಠ ಹೇಳಿದೆ. ( ಆರ್ ಟಿ ನಗರದ ದತ್ತು ಭಾವಿ ಸುಪ್ರೀಂ ಜಸ್ಟೀಸ್ )
'ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳನ್ನು ಲಾರ್ಡ್, ಲಾರ್ಡ್ ಷಿಪ್ ಅಥವಾ ಯುವರ್ ಆನರ್ ಎಂದು ಸಂಬೋಧಿಸುವುದು ವಸಾಹತುಶಾಹಿ ಕಾಲದ ಕೊಡುಗೆ. ಮತ್ತು ಅದು ಗುಮಾಲಗಿರಿಯ ಸಂಕೇತವೂ ಆಗುತ್ತದೆ. ಆದ್ದರಿಂದ ಈ ಸಂಬೋಧನೆಗೆ ಮಂಗಳಹಾಡಬೇಕು' ಎಂದು ಕೋರಿ ಸಲ್ಲಿಸಲಾಗಿದ್ದ PILಅನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಮೇಲಿನಂತೆ ಉತ್ತರಿಸಿದೆ.
ಆದರೆ 75 ವರ್ಷದ ಅರ್ಜಿದಾರರಾದ ಅಡ್ವೊಕೇಟ್ ಶಿವ್ ಸಾಗರ್ ತಿವಾರಿ ಅವರು ಈ ಸಂಬಂಧ ಸಲ್ಲಿಸಿದ್ದ PILಅನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ ನ್ಯಾಯಪೀಠವು 'ನ್ಯಾಯಾಲಯವನ್ನು (ನ್ಯಾಯಮೂರ್ತಿಗಳನ್ನು) ಸಂಬೋಧಿಸುವುದು ಹೇಗೆ? ಗೌರವಯುತವಾಗಿ ಸಂಬೋಧಿಸಿದರೆ ಸಾಕಾದೀತು. ನೀವು ನಮ್ಮನ್ನು sir ಎಂದು ಕರೆಯುತ್ತೀರಿ. ಅದು ಸ್ವೀಕಾರಾರ್ಹ. ಇನ್ನು your honour/ lordship ಅನ್ನುತ್ತೀರಿ. ಅದೂ ಸ್ವೀಕಾರಾರ್ಹವೇ. ಸಾಮಾನ್ಯವಾಗಿ ಇದೆಲ್ಲಾ ಸಮಂಜಸ ಪದಪುಂಜಗಳು. ಇಷ್ಟು ಸಾಕು' ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ತಿರಸ್ಕರಿಸಿತು.
'ಹಾಗಾಗಿ lord, lordship ಮತ್ತು your honour ಎಂಬ ಗೌರವಸೂಚಕ ಪದಪುಂಜಗಳನ್ನು ನಿಷೇಧಿಸಬೇಕು. ನ್ಯಾಯಮೂರ್ತಿಗಳನ್ನು ನಿರ್ದಿಷ್ಟವಾಗಿ ಹೀಗೇ ಸಂಬೋಧಿಸುವುದು ಎಂದು ನಿರ್ದೇಶನ ನೀಡಬೇಕು ಎಂಬ ಅರ್ಜಿಯನ್ನು ಪರಿಗಣಿಸಲಾಗದು' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.












Click it and Unblock the Notifications